Advertisement

Fraud Case ವೈಷ್ಣೋದೇವಿ ಮಂದಿರದ ಕಾಯಿನ್‌ ಹೆಸರಲ್ಲಿ ವಂಚನೆ

10:13 PM Sep 02, 2023 | Team Udayavani |

ಮಂಗಳೂರು: ವೈಷ್ಣೋದೇವಿ ಮಂದಿರದ ಕಾಯಿನ್‌ಗೆ ಉತ್ತಮ ಬೆಲೆ ನೀಡುವುದಾಗಿ ಹೇಳಿ ಹಣ ಪಡೆದು ವಂಚಿಸಿರುವ ಪ್ರಕರಣ ಮಂಗಳೂರು ಸೆನ್‌ ಠಾಣೆಯಲ್ಲಿ ದಾಖಲಾಗಿದೆ.

Advertisement

ದೂರುದಾರರು ಫೇಸ್‌ಬುಕ್‌ ನೋಡುತ್ತಿದ್ದಾಗ ಅದರಲ್ಲಿ ವೈಷ್ಣೋದೇವಿಯ ಮಂದಿರದ ಕಾಯಿನ್‌ ಇದ್ದರೆ ಅದಕ್ಕೆ ಉತ್ತಮ ಬೆಲೆ ನೀಡುವುದಾಗಿ ಜಾಹೀರಾತು ಇತ್ತು. ಅದನ್ನು ನಂಬಿದ ದೂರುದಾರರು ಜಾಹೀರಾತಿನಲ್ಲಿದ್ದ ಸಂಖ್ಯೆಗೆ ಕರೆ ಮಾಡಿದ್ದರು.

ಕರೆ ಸ್ವೀಕರಿಸಿದ ವ್ಯಕ್ತಿ ಕಾಯಿನ್‌ಗಳಿಗೆ 24.56 ಲ.ರೂ ನೀಡುವುದಾಗಿ ಹೇಳಿದ. ಅನಂತರ ಹಂತ ಹಂತವಾಗಿ ದೂರುದಾರರಿಂದಲೇ 27,700 ರೂ.ಗಳನ್ನು ವರ್ಗಾಯಿಸಿಕೊಂಡು ವಂಚಿಸಿದ್ದಾನೆ.

Advertisement

Udayavani is now on Telegram. Click here to join our channel and stay updated with the latest news.

Next