Advertisement
ಶಿವಾಜಿನಗರದ ರಸ್ತೆ ಬದಿಯಲ್ಲಿ ಕಾರು ಗ್ಯಾರೆಂಜ್ ನಡೆಸುತ್ತಿರುವ ಶರೀಫ್ಗೆ ವಿವಿಧ ನಾಲ್ಕು ಹೆಸರುಗಳಲ್ಲಿ ಕರೆ ಮಾಡಿದ ವ್ಯಕ್ತಿ, ನಿಮ್ಮ ಮೊಬೈಲ್ ನಂಬರ್ ಲಕ್ಕಿ ಡ್ರಾನಲ್ಲಿ ಆಯ್ಕೆಯಾಗಿದೆ. ನೀವು 35 ಲಕ್ಷ ರೂ. ಗೆದ್ದಿದ್ದೀರಿ. ನೀವು ಗೆದ್ದಿರುವ ಹಣ ಪಡೆಯಲು ನಾವು ಸೂಚಿಸಿದ ಖಾತೆಗೆ ಇಂತಿಷ್ಟು ಹಣ ಹಾಕಬೇಕು ಎಂದು ಹೇಳಿದ್ದಾರೆ. ಅದರಂತೆ ಇಸ್ಮಿಲ್ ನಾಲ್ಕೈದು ಕಂತುಗಳಲ್ಲಿ 1.15 ಲಕ್ಷ ರೂ. ಹಣ ವರ್ಗಾವಣೆ ಮಾಡಿದ್ದಾರೆ.
Related Articles
Advertisement
ಈ ಶೋನಲ್ಲಿ ಶರೀಫ್ ನಂಬರ್ ಪ್ರಕಟಿಸಿದ್ದಾರೆ. ಇದರಿಂದ ಖುಷಿಯಾದ ಶರೀಫ್, ಮತ್ತೂಮ್ಮೆ ಹಣ ಕೇಳಿದ ಆರೋಪಿಗಳಿಗೆ, ತನ್ನ ಪತ್ನಿಯ ಚಿನ್ನಾಭರಣ ಗಿರವಿ ಇಟ್ಟು 20 ಸಾವಿರ ರೂ. ಹಣ ಜಮೆ ಮಾಡಿದ್ದಾರೆ. ಹೀಗೆ ನಾಲ್ಕೈದು ಕಂತುಗಳಲ್ಲಿ ಎಸ್‌ಬಿಐನ ಮೂರು ಹಾಗೂ ಸಿಂಡಿಕೇಟ್ ಬ್ಯಾಂಕ್‌ನ ಒಂದು ಖಾತೆಗೆ ಒಟ್ಟು 1.15 ಲಕ್ಷ ರೂ ಜಮೆ ಮಾಡಿದ್ದಾರೆ ಎಂದು ಸೈಬರ್ ಪೊಲೀಸರು ಮಾಹಿತಿ ನೀಡಿದರು. ಈ ಸಂಬಂಧ ಶರೀಫ್ ಜ.11ರಂದು ಸೈಬರ್ ಠಾಣೆಗೆ ದೂರು ನೀಡಿದ್ದು, ಆರೋಪಿಗಳು ಹಾಗೂ ಬ್ಯಾಂಕ್ ಖಾತೆದಾರರ ಮಾಹಿತಿ ಸಂಗ್ರಹಿಸುತ್ತಿದ್ದಾರೆ.
ಆತ್ಮಹತ್ಯೆ ಮಾಡ್ಕೊ!: ಗೆದ್ದ ಹಣ ನೀಡದೆ ಪದೇ ಪದೆ ಹಣ ಕೇಳುತ್ತಿದ್ದ ವಂಚಕರ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಶರೀಫ್, ಆರೋಪಿಗೆ ಕರೆ ಮಾಡಿ, ನಾನು ಸಾಲ ಮಾಡಿ ಹಣ ಕಳುಹಿಸಿದ್ದೇನೆ. ಮೋಸ ಮಾಡಬೇಡಿ. ದಯವಿಟ್ಟು ಹಣ ಹಿಂದುರುಗಿಸಿ, ಇಲ್ಲವಾದರೆ, ನಾನು ಆತ್ಮಹತ್ಯೆ ಮಾಡಿಕೊಳ್ಳಬೇಕಷ್ಟೇ ಎಂದು ಬೇಡಿಕೊಂಡಿದ್ದಾರೆ. ಇದಕ್ಕೆ ಆರೋಪಿಗಳು ನಿಮ್ಮ ಸ್ನೇಹಿತರ ಬಳಿ 100 ರೂ. ಸಾಲ ಮಾಡಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊ ಎಂದು ಕರೆ ಸ್ಥಗಿತಗೊಳಿಸಿದ್ದಾರೆ.
ವಾಟ್ಸ್‌ಆ್ಯಪ್ ಸಮಸ್ಯೆ!: ಇತ್ತೀಚೆಗೆ ವಾಟ್ಸ್‌ಆ್ಯಪ್ ಅಪ್‌ಡೇಟ್ ಆಗಿದ್ದು, ತಾವು ಕಳುಹಿಸಿದ ಸಂದೇಶವನ್ನು ಬೇರೆಯವರಿಗೂ ಕಾಣದಂತೆ ಡಿಲೀಟ್ ಮಾಡಲು ಅವಕಾಶವಿದೆ. ಈ ಹಿನ್ನೆಲೆಯಲ್ಲಿ ವಂಚಕರು ಶರೀಫ್ ಜತೆ ವಾಟ್ಸ್‌ಆ್ಯಪ್ ಮೂಲಕ ನಡೆಸಿದ ಸಂಭಾಷಣೆಯನ್ನು ಪೂರ್ಣವಾಗಿ ಡಿಲೀಟ್ ಮಾಡಿದ್ದಾರೆ ಎಂದು ಸೈಬರ್ ಠಾಣೆ ಪೊಲೀಸರು ತಿಳಿಸಿದ್ದಾರೆ.