Advertisement

ಮಂಕುಬೂದಿ ಮಾಂತ್ರಿಕರ ಚಳಿ ಬಿಡಿಸಿದ ಗ್ರಾಮಸ್ಥರು

09:57 AM Aug 24, 2019 | Hari Prasad |

ಕೊಪ್ಪಳ: ಗ್ರಾಮಸ್ಥರಿಗೆ ದೇವರ ಹೆಸರಿನಲ್ಲಿ ಮಂಕುಬೂದಿ ಹಾಕುತ್ತಿದ್ದ ವೇಷದಾರಿ ಮಾಂತ್ರಿಕರ ಬಣ್ಣ ಬಯಲಾದ ಘಟನೆ ನಡೆದಿದೆ. ಇಲ್ಲಿನ ಯಲಬುರ್ಗಾ ತಾಲೂಕಿನ ಯಡ್ಡೋಣಿ ಗ್ರಾಮದಲ್ಲಿ ಈ ಖದೀಮರು ಮನೆ ಮನೆ ತಿರುಗಿ ಮೈಲಾರಲಿಂಗೆಶ್ವರನ ಹೆಸರಿನಲ್ಲಿ ಮುಗ್ದ ಜನರ ಹಣೆಗೆ ಕುಂಕುಮ – ಭಂಡಾರ ಹಚ್ಚಿ ತಮ್ಮ ಕೈಚಳಕವನ್ನು ತೋರಿಸುತ್ತಿದ್ದರು.

Advertisement

ಹೀಗೆ ಮಾರುವೇಷದಲ್ಲಿ ಬಂದು ದೇವರ ಹೆಸರಲ್ಲಿ ಹಣ ದೊಚುತ್ತಿದ್ದ ಈ ಖದೀಮರು ಇವತ್ತು ಸ್ಥಳೀಯರ ಕೈಗೆ ಸಿಕ್ಕಿಬಿದ್ದರು. ಮನೆ ಮನೆಗೆ ಬಂದು ದೇವರ ಹೆಸರಿನಲ್ಲಿ ಮತ್ತು ಮಾಟ-ಮಂತ್ರದ ಮೂಲಕ ಜನರನ್ನು ವಶೀಕರಣ ಮಾಡಿ ಹಣ ಕೀಳುತ್ತಿದ್ದ ಈ ಖದೀಮರಿಗೆ ಗ್ರಾಮಸ್ಥರು ಧರ್ಮದೇಟು ನೀಡಿ ಬಳಿಕ ಎಚ್ಚರಿಕೆ ನೀಡಿ ಕಳುಹಿಸದ್ದಾರೆ ಎಂದು ತಿಳಿದುಬಂದಿದೆ.

ಈ ಮಂಕುಬೂದಿ ವೇಷಧಾರಿಗಳ ಮೋಡಿಗೆ ಒಳಗಾದ ಕೆಲವು ಗ್ರಾಮಸ್ಥರು 500 ರಿಂದ 3000 ರೂಪಾಯಿಗಳವರೆಗೆ ಹಣ ನೀಡಿ ಮೋಸ ಹೋಗಿದ್ದರು. ಗ್ರಾಮಸ್ಥರ ವಿಚಾರಣೆಗೆ ಹೆದರಿದ ಖದೀಮರು ತಾವು ಮುಗ್ದರನ್ನು ಮೋಸಗೊಳಿಸಿ ಪಡೆದುಕೊಂಡಿದ್ದ ಹಣವನ್ನೆಲ್ಲಾ ವಾಪಾಸು ನೀಡಿದ್ದಾರೆ.

ಇನ್ನು ಮುಂದೆ ಎಲ್ಲಿಯೂ ಈ ರೀತಿಯ ಕೆಲಸವನ್ನು ಮಾಡದಂತೆ ಇದೇ ಸಂದರ್ಭದಲ್ಲಿ ಗ್ರಾಮಸ್ಥರು ಮೂವರಿಗೂ ಎಚ್ಚರಿಕೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next