Advertisement
ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಬೈಲುಕುಪ್ಪೆ ಟೌನ್‌ನ ಲಕ್ಷ್ಮೀಪುರ ನಿವಾಸಿ ಕೆ.ಸಿದ್ದಾರ್ಥ್ ಅಲಿಯಾಸ್ ಸಿದ್ದಾರ್ಥ್ ಅರಸ್, ಅಲಿ ಯಾಸ್ ಸ್ಯಾಂಡಿ ಅಲಿಯಾಸ್ ವಿನಯ್ ಅಲಿಯಾಸ್ ಮುತ ¤(33) ಬಂಧಿತ. ಆತನಿಂದ ಮೂರು ಐ-ಫೋ ನ್‌ಗಳು, ಆರು ಬ್ಯಾಂಕ್‌ಗಳ ಡೆಬಿಟ್‌ಕಾರ್ಡ್‌ಗಳನ್ನು ವಶಕ್ಕೆ ಪಡೆಯಲಾಗಿದೆ. ಈತನ ವಿರುದ್ಧ ವೈಟ್‌ಫೀಲ್ಡ್, ಈಶಾನ್ಯ ಮತ್ತು ದಕ್ಷಿಣ ವಿಭಾಗ ಸೆನ್ ಪೊಲೀಸ್ ಠಾಣೆಯಲ್ಲಿ ಮೂರು ಪ್ರತ್ಯೇಕ ಪ್ರಕರಣಗಳು ದಾಖಲಾಗಿದ್ದು, ಮೂವರು ಯುವತಿಯರಿಗ ೆ ಮದುವೆಯಾಗುವುದಾಗಿ ನಂಬಿಸಿ, ಅವರಿಂದ ವೈದ್ಯಕೀಯ, ವೈಯಕ್ತಿಕ ಕಾರಣಗಳ ನ್ನು ನೀಡಿ ಬರೋಬರಿ 42 ಲಕ್ಷ ರೂ. ವಂಚಿಸಿದ್ದಾನೆ. ಸುಮಾರು ಎರಡು ವರ್ಷಗ ಳಿಂದ ಕೃತ್ಯ ಎಸಗುತ್ತಿರುವ ಆರೋಪಿ ಇನ್ನಷ್ಟು ಮಹಿಳೆಯರು, ಯುವತಿಯರಿಗೆ ವಂಚಿಸುತ್ತಿರುವ ಮಾಹಿತಿ ಸಿಕ್ಕಿದ್ದು, ಸೆನ್ ಠಾಣೆಯ ಇನ್‌ಸ್ಪೆಕ್ಟರ್ ಜಿ.ಗುರು ಪ್ರಸಾದ್, ಪಿಎಸ್‌ಐ ನವೀನ್ ಕುಮಾರ್ ನೇತೃತ್ವದ ತಂಡ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ತನಿಖೆ ಮುಂದುವರಿಸಲಾಗಿದೆ ಎಂದು ವೈಟ್ ಫೀಲ್ಡ್ ಡಿಸಿಪಿ ಡಿ. ದೇವರಾಜ್ ತಿಳಿಸಿದರು.
Related Articles
Advertisement
ವೆಬ್‌ಸೈ ಟ್‌ನಲ್ಲಿ ಆಯ್ದ ಯುವತಿಯರಿಗೆ ರಿಕ್ವೆಸ್ಟ್ ಕಳುಹಿಸಿ, ಮದುವೆಯಾಗುವುದಾಗಿ ನಂಬಿಸುತ್ತಿದ್ದ. ಬಳಿಕ ಮೈಸೂರು ರಾಜವಂಶಸ್ಥರ ಸಂಬಂಧಿ ಎಂದು ನಂಬಿ ಸಲು, ಗೂಗಲ್‌ನಲ್ಲಿ ರಾಜವಂಸ್ಥ ಕುಟುಂಬದವರ ಫೋಟೋಗಳನ್ನು ಡೌನ್‌ಲೋಡ್ ಮಾಡಿ, ಅವರ ಜತೆ ಬಾಲ್ಯ ಕಳೆದಿರುವ ಹಾಗೇ ಚಿಕ್ಕವಯಸ್ಸಿನ ಹುಡುಗನ ಫೋಟೋಗಳನ್ನು ಯುವತಿಯರಿಗೆ ಪ್ರತ್ಯೇಕವಾಗಿ ಕಳುಹಿಸಿ ನಂಬಿಸುತ್ತಿದ್ದ. ನಂತರ ಅವರೊಂದಿಗೆ ವಾಟ್ಸ್ ಆ್ಯಪ್ ಹಾಗೂ ಇಂಟರ್‌ನ್ಯಾಷನಲ್ ಕಾಲ್ ಮಾಡಿ, ತಾನೂ ಅಮೆರಿಕಾದಿಂದ ಮಾತನಾಡುತ್ತಿದ್ದೇನೆ ಎಂದು ಅವರೊಂದಿಗೆ ಸ್ಪಾನಿಷ್, ಯುಎಸ್ ಇಂಗ್ಲಿಷ್‌ನಲ್ಲಿ ಮಾತನಾಡಿ ನಂಬಿಸುತ್ತಿದ್ದ. ಕೆಲ ದಿನಗಳ ಬಳಿಕ ವೈದ್ಯಕೀಯ ಕಾರಣ ಮತ್ತು ವೈಯಕ್ತಿಕ ಕಾರಣಗಳನ್ನು ನೀಡಿ ತುರ್ತು ಹಣ ಬೇಕಾ ಗಿದೆ, ಅಮೆರಿಕಾದಿಂದ ಬಂದ ಬಳಿಕ ಕೊಡುವುದಾಗಿ ನಂಬಿಸಿ ತನ್ನ ಹಾಗೂ ತನ್ನ ಸ್ನೇಹಿತರ ಖಾತೆಗಳಿಗೆ (ಯಾವುದೋ ಹಣ ಬರುತ್ತದೆ ಎಂದು ಸ್ನೇಹಿತರಿಗೆ ಸುಳ್ಳು ಹೇಳಿ)ಹಂತ-ಹಂತವಾಗಿ ಹಣ ಹಾಕಿಸಿಕೊಳ್ಳು ತ್ತಿದ್ದ. ಬಳಿಕ ಯುವತಿಯರ ನಂಬರ್ ಬ್ಲ್ಯಾಕ್ ಮಾಡು ತ್ತಿದ್ದ ಎಂದು ವಿಚಾರಣೆಯಲ್ಲಿ ತಿಳಿದುಬಂದಿದೆ ಎಂದು ಪೊಲೀಸರು ಹೇಳಿದರು.