Advertisement

ನೇಮಕಾತಿ ಹೆಸರಿನಲ್ಲಿ ವಂಚನೆ: ಎಂಆರ್‌ಪಿಎಲ್‌ ಎಚ್ಚರಿಕೆ

11:06 PM May 04, 2023 | Team Udayavani |

ಮಂಗಳೂರು: ಎಂಆರ್‌ಪಿಎಲ್‌ (ಮಂಗಳೂರು ರಿಫೈನರಿ ಆ್ಯಂಡ್‌ ಪೆಟ್ರೋಕೆಮಿಕಲ್ಸ್‌ ಲಿ.)ನ ಉದ್ಯೋಗ ನೇಮಕಾತಿ ಹೆಸರಿನಲ್ಲಿ ಹಣ ಪಡೆದು ವಂಚಿಸಲಾಗುತ್ತಿರುವ ಬಗ್ಗೆ ಎಂಆರ್‌ಪಿಎಲ್‌ ಎಚ್ಚರಿಕೆ ನೀಡಿದೆ.

Advertisement

ಎಂಆರ್‌ಪಿಎಲ್‌ ಕೇಂದ್ರದ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಅಡಿಯಲ್ಲಿರುವ ಸಾರ್ವಜನಿಕ ವಲಯದ ಉದ್ಯಮವಾಗಿದ್ದು, ತೈಲ ನೈಸರ್ಗಿಕ ಅನಿಲ ನಿಗಮ ಲಿಮಿಟೆಡ್‌ (ಒಎನ್‌ಜಿಸಿ)ನ ಅಂಗಸಂಸ್ಥೆಯಾಗಿದೆ. ಇದರ ನೇಮಕಾತಿ ಪ್ರಕ್ರಿಯೆ ಪಾರದರ್ಶಕವಾಗಿದೆ. ನೇಮಕಾತಿಗೆ ನಿರ್ದಿಷ್ಟ ಅರ್ಜಿ ಶುಲ್ಕದ ಬದಲು ಬೇರೆ ಯಾವುದೇ ಹಣ ಪಡೆಯುವುದಿಲ್ಲ. ಆದರೆ ಕೆಲವು ಮಂದಿ ಎಂಆರ್‌ಪಿಎಲ್‌ನಲ್ಲಿ ಉದ್ಯೋಗ ಒದಗಿಸಿಕೊಡುವುದಾಗಿ ಹೇಳಿ ಹಣ ಪಡೆದು ವಂಚಿಸುತ್ತಿರುವುದು ಗಮನಕ್ಕೆ ಬಂದಿದೆ. ಸಾರ್ವಜನಿಕರು, ಉದ್ಯೋಗಾಕಾಂಕ್ಷಿಗಳು ಇಂತಹ ವಂಚನೆಗೆ ಒಳಗಾಗಬಾರದು.

ಒಎಂಪಿಎಲ್‌ (ಒಎನ್‌ಜಿಸಿ ಮಂಗಳೂರು ಪೆಟ್ರೋಕೆಮಿಕಲ್ಸ್‌ ಲಿಮಿಟೆಡ್‌)ನ್ನು ಎಂಆರ್‌ಪಿಎಲ್‌ನೊಂದಿಗೆ ವಿಲೀನಗೊಳಿಸಿರುವುದರಿಂದ ಒಎಂಪಿಎಲ್‌ ಅಸ್ತಿತ್ವದಲ್ಲಿಲ್ಲ. ಆ ಹೆಸರಿನಲ್ಲಿ ಮಾಡುವ ಯಾವುದೇ ನೇಮಕಾತಿ ಕೂಡ ಮೋಸದಿಂದ ಕೂಡಿರುತ್ತದೆ. ಎಂಆರ್‌ಪಿಎಲ್‌ನ ಉದ್ಯೋಗಾವಕಾಶಗಳ ಬಗ್ಗೆ ವೆಬ್‌ಸೈಟ್‌ನಲ್ಲಿ ಪೋಸ್ಟ್‌ ಮಾಡಲಾಗಿದೆ. ಎಂಆರ್‌ಪಿಎಲ್‌ ಪರವಾಗಿ ನೇಮಕಾತಿ ಮಾಡಲು, ನೇಮಕಾತಿ ಪ್ರಸ್ತಾವ ನೀಡಲು, ಹಣ ಸಂಗ್ರಹಿಸಲು ಯಾವುದೇ ವ್ಯಕ್ತಿ/ಸಂಸ್ಥೆಗೆ ಅಧಿಕಾರ ನೀಡಿಲ್ಲ. ಈ ರೀತಿ ಯಾರಾದರೂ ಆಫ‌ರ್‌ ಕೊಟ್ಟರೆ ಹಣ ನೀಡಿ ಮೋಸ ಹೋಗಬಾರದು ಎಂದು ಎಂಆರ್‌ಪಿಎಲ್‌ನ ಕಾರ್ಪೊರೆಟ್‌ ಕಮ್ಯುನಿಕೇಶನ್‌ನ ಜನರಲ್‌ ಮ್ಯಾನೇಜರ್‌ ಡಾ| ರುಡಾಲ್ಫ್ ನೊರೊನ್ಹಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next