Advertisement

Fraud: ಡೀಸಿ ದಯಾನಂದ ಹೆಸರಿನಲ್ಲಿ ವಂಚನೆ

12:21 PM Dec 08, 2023 | Team Udayavani |

ಬೆಂಗಳೂರು: ನಗರ ಜಿಲ್ಲಾಧಿಕಾರಿ ಕೆ.ಎ. ದಯಾನಂದ್‌ ಅವರ ಫೋಟೋ ಮತ್ತು ಹೆಸರು ಬಳಸಿಕೊಂಡು ಕಿಡಿಗೇಡಿ ಗಳು ಸಂದೇಶಗಳನ್ನು ಕಳುಹಿಸಿ ಹಣಕ್ಕೆ ಬೇಡಿಕೆ ಇರಿಸಲಾಗಿದ್ದು, ಈ ಸಂಬಂಧ ಕೇಂದ್ರ ವಿಭಾಗದ ಸೆನ್‌ ಠಾಣೆಯಲ್ಲಿ ಎಫ್ಐಆರ್‌ ದಾಖಲಾಗಿದೆ.

Advertisement

ಜಿಲ್ಲಾಧಿಕಾರಿ ದಯಾನಂದ್‌ ಅವರು ನೀಡಿದ ದೂರಿನ ಮೇರೆಗೆ ಕೇಂದ್ರ ವಿಭಾಗದ ಸೆನ್‌ ಠಾಣೆ ಪೊಲೀಸರು ವಂಚನೆ ಪ್ರಕರಣ ದಾಖಲಿಸಿಕೊಂಡು ಅಪರಿಚಿತ ವ್ಯಕ್ತಿಗಳ ವಿರುದ್ಧ ತನಿಖೆ ಮುಂದುವರಿಸಿದ್ದಾರೆ.

ದಯಾನಂದ್‌ ಅವರ ಫೋಟೋ ದುರ್ಬಳಕೆ ಮಾಡಿಕೊಂಡಿರುವ ಆರೋಪಿಗಳು, ಅವರ ಹೆಸರಿನಲ್ಲಿ ವಾಟ್ಸ್‌ಆ್ಯಪ್‌ ಸಂಖ್ಯೆಯೊಂದನ್ನು ಸೃಷ್ಟಿಸಿದ್ದಾರೆ. ಅದೇ ಸಂಖ್ಯೆಯಿಂದ ಜಿಲ್ಲಾಡಳಿತದ ಹಲವು ಇಲಾಖೆಗಳ ಅಧಿಕಾರಿಗಳು ಹಾಗೂ ಇತರರಿಗೆ ಸಂದೇಶ ಕಳುಹಿಸಿದ್ದಾರೆ. ಆಗ ತುರ್ತು ಅಗತ್ಯಕ್ಕೆ ಹಣ ಬೇಕಿದೆ. ಈ ಕೂಡಲೇ ಕಳುಹಿಸಿ ಎಂದು ಆರೋಪಿಗಳು ಸಂದೇಶದಲ್ಲಿ ಬರೆದಿದ್ದರು. ಅನುಮಾನಗೊಂಡ ಕೆಲ ಅಧಿಕಾರಿಗಳು, ಜಿಲ್ಲಾಧಿಕಾರಿ ದಯಾನಂದ ಗಮನಕ್ಕೆ ತಂದಿದ್ದಾರೆ.ಈ ಬಳಿಕ ದೂರು ನೀಡಿದ್ದಾರೆ ಎಂದು ಸೆನ್‌ ಠಾಣೆ ಪೊಲೀಸರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next