Advertisement
ಅಪರಿಚಿತಯುವತಿಯರ ಮತ್ತುಮಹಿಳೆಯರ ಫೋಟೋಗಳಿರುವ ಆನ್‌ಲೈನ್ ಲಿಂಕ್‌ಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟು ಯುವತಿಯರ ಮೊಬೈಲ್ ನಂಬರ್ ಪಡೆಯಲು ನಿರ್ದಿಷ್ಟ “ಡೇಟಿಂಗ್ ಆ್ಯಪ್’ ಡೌನ್‌ಲೋಡ್ ಮಾಡಿಕೊಳ್ಳುವಂತೆ ಪ್ರಚೋದಿಸುತ್ತಾರೆ. ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳುವ ಯುವಕರಿಗೆ ಯುವತಿಯರನ್ನು ಸಂಪರ್ಕಿಸುತ್ತಿದ್ದಕಿಡಿಗೇಡಿಗಳು, ಮೊದಲಿಗೆ ಚ್ಯಾಟಿಂಗ್ ಮೂಲದ ಆಮಿಷವೊಡುತ್ತಾರೆ. ಯುವತಿ ಎಂದು ಭಾವಿಸಿಸುವ ಯುವಕರು, ವೈಯಕ್ತಿಕ ವಿವರ,ಖಾಸಗಿ ಪೋಟೋಗಳನ್ನು ಹಂಚಿಕೊಳ್ಳುತ್ತಿದ್ದಂತೆ ಬ್ಲ್ಯಾಕ್‌ಮೇಲ್ ಮಾಡಲು ಆರಂಭಿಸುತ್ತಾರೆ. ಒಂದು ವೇಳೆ ಯುವತಿಯ ಮೊಬೈಲ್ ಸಿಕ್ಕರೂ ಆಕೆಗೂ ಬ್ಲ್ಯಾಕ್‌ಮೇಲ್ ಮಾಡಿ ಲಕ್ಷಾಂತರ ರೂ. ಸುಲಿಗೆ ಮಾಡುತ್ತಿದ್ದಾರೆ. ಲಾಕ್‌ಡೌನ್ ವೇಳೆಯಲ್ಲಿ ಇಂಥ 12 ಕ್ಕೂ ಅಧಿಕ ಪ್ರಕರಣ ಬೆಳಕಿಗೆ ಬಂದಿದೆ.
Related Articles
Advertisement
ಲಾಕ್‌ಡೌನ್ ಸಂದರ್ಭದಲ್ಲೇ ವಂಚನೆ: ಲಾಕ್ ಡೌನ್ ಸಂದರ್ಭದಲ್ಲಿ ವಾಣಿಜ್ಯ ಚಟುವಟಿಕೆಗಳುಸ್ಥಗಿತವಾಗಿತ್ತು. ಹೀಗಾಗಿ ಕೆಲ ಕಿಡಿಗೇಡಿಗಳು ಸಾಮಾಜಿಕ ಜಾಲತಾಣಗಳಲ್ಲಿ ಸಿಗುವ ಯುವತಿಯರ ಚಿತ್ರಗಳು, ಮೊ. ನಂಬರ್ ಬಳಸಿಕೊಂಡು ಹಣ ಸಂಪಾದಿಸಿದ್ದಾರೆ. ಡೇಟಿಂಗ್ ಆ್ಯಪ್, ವೇಶ್ಯಾವಾಟಿಕೆ ವೆಬ್‌ಸೈಟ್, ಮ್ಯಾಟ್ರಿಮೋನಿಯಲ್ ವೆಬ್‌ಸೈಟ್‌ಗಳಲ್ಲಿ ಯುವತಿಯರ ಫೋಟೋ ಹಾಕಿ, ಯುವಕರನ್ನು ಪ್ರಚೋದಿಸುತ್ತಿದ್ದರು. ನಿರ್ದಿಷ್ಟ ಮೊಬೈಲ್ ನಂಬರ್ ಗೆ ಕರೆ ಮಾಡುತ್ತಿದ್ದ ಯುವಕನಿಗೆ, ಲಾಕ್‌ಡೌನ್ ಇರುವುದರಿಂದ ನಾನಾ ಮಾರ್ಗಗಳ ಮೂಲಕ ನೀವು ಇರುವಲ್ಲಿಯೇ ಬಂದು ಸೇವೆ ಒದಗಿಸುತ್ತೇವೆ. ಅದಕ್ಕಾಗಿ ಮುಂಗಡ ಹಣ ನೀಡಿ ಎಂದು ವಸೂಲಿ ಮಾಡುತ್ತಿದ್ದರು ಎಂದು ಅಧಿಕಾರಿ ವಿವರಿಸಿದರು.
ಸಾಮಾಜಿಕ ಜಾಲತಾಣದ ಮೂಲಕ ನಡೆವ ಅಪರಾಧ ಕೃತ್ಯಗಳ ಕೆಲವು ನಿದರ್ಶನಗಳು :
ಕ್ಯೂಆರ್ ಕೋಡ್‌ನಿಂದ ಹಣ : ಯುವತಿಯರ ಸಲುಗೆ ಬೆಳೆಸಲು ಬೆಳ್ಳಂದೂರು ನಿವಾಸಿ 21 ವರ್ಷದ ಯುವಕ ಡೇಟಿಂಗ್ ಆ್ಯಪ್ ಮೊರೆ ಹೋಗಿದ್ದ. ಅದರಲ್ಲಿ ಯುವತಿಯ ಚೆಂದದ ಫೋಟೋ ಗಮನಿಸಿ ಆಕೆಯನ್ನು ಸಂಪರ್ಕಿಸಿದ್ದು, ಆಕೆ ನಂಬರ್ ಕೊಟ್ಟಿದ್ದಳು. ಅಲ್ಲದೆ, ಇನ್‌ಸ್ಟ್ರಾಗ್ರಾಂ ಮೂಲಕ ಸ್ನೇಹಕ್ಕಾಗಿ ಕೋರಿಕೆ ಕಳುಹಿಸಿದ್ದಳು. ಬಳಿಕ ಇಬ್ಬರು ವಾಟ್ಸ್‌ಆ್ಯಪ್ ಚಾಟಿಂಗ್ ಮಾಡಿಕೊಂಡಿದ್ದಾರೆ. ಮೊದಲಿಗೆ ಯುವತಿ ತನ್ನ ನಗ್ನ ಫೋಟೋ ಕಳುಹಿಸಿದ್ದಳು. ತದನಂತರ ಯುವಕನಿಗೆ ಕಳುಹಿಸುವಂತೆ ಒತ್ತಾಯಿಸಿದ್ದಳು. ಅದನ್ನು ನಂಬಿ ಖಾಸಗಿ ಫೋಟೋ
ಮತ್ತು ವಿಡಿಯೋಗಳನ್ನು ರವಾನಿಸಿದ್ದ. ಬಳಿಕ ಅನಾಮಿಕ ನಂಬರ್‌ನಿಂದ ಕರೆ ಮಾಡಿದ್ದ ವ್ಯಕ್ತಿಯೊಬ್ಬ,ಖಾಸಗಿ ದೃಶ್ಯಗಳಿರುವ ವಿಚಾರವನ್ನು ತಿಳಿಸಿ, ಹಣಕಳುಹಿಸುವಂತೆ ಒತ್ತಾಯಿಸಿದ್ದ. ಪರಿಚಯಸ್ಥರು ಹಾಸ್ಯ ಮಾಡುತ್ತಿದ್ದಾರೆ ಎಂದು ಸುಮ್ಮನಾಗಿದ್ದ. ವಾಟ್ಸ್‌ಆ್ಯಪ್ ಸಂದೇಶ ನೋಡಿದಾಗ, ಡೇಟಿಂಗ್ ಆ್ಯಪ್ ಮೂಲಕ ಪರಿಚಯವಾಗಿದ್ದ ಯುವತಿಗೆ ಕಳುಹಿಸಿದ್ದ ತನ್ನದೇ ಫೋಟೋಗಳು ಎಂಬುದು ಗೊತ್ತಾಗಿದೆ. ಬಳಿಕ ಹೆದರಿ ಹಣ ನೀಡಲು ಒಪ್ಪಿದ. ವಂಚಕ ಕ್ಯೂ ಆರ್‌ಕೋಡ್ ಕಳುಹಿಸಿ ಮೂರು ಸಾವಿರ ರೂ. ಪಡೆದುಕೊಂಡಿದ್ದಾನೆ. ಮತ್ತೆ ಬ್ಲ್ಯಾಕ್‌ಮೇಲ್ ಮುಂದುವರಿಸಿದ್ದಾನೆ.
ಚಾಟಿಂಗ್ ವಿಡಿಯೋ ರೆಕಾರ್ಡ್ : ಕೋರಮಂಗಲ ನಿವಾಸಿ ಯುವಕನಿಗೆ(24) ಡೇಟಿಂಗ್ ಆ್ಯಪ್‌ನಲ್ಲಿ ಯುವತಿಯ ಪರಿಚಯವಾಗಿತ್ತು. ಇಬ್ಬರು ಪರಸ್ಪರ ನಂಬರ್ ವಿನಿಮಯ ಮಾಡಿಕೊಂಡಿದ್ದು, ಪ್ರತಿದಿನ ಚ್ಯಾಟಿಂಗ್ ಮಾಡುತ್ತಿದ್ದರು.ಈವೇಳೆ ಏಕಾಂತವಾಗಿ ಕಾಲಕಳೆಯುವುದಾಗಿ ಯುವಕನಿಗೆ ನಂಬಿಸಿದ್ದಳು. ಆಕೆಯ ಮಾತಿಗೆ ಮರುಳಾಗಿ ವಾಟ್ಸ್‌ಆ್ಯಪ್‌ನಲ್ಲಿ ನಗ್ನವಾಗಿ ವಿಡಿಯೋ ಚ್ಯಾಟಿಂಗ್ ಮಾಡಿದ್ದ. ಈ ವೇಳೆ ಆತನ ಅರಿವಿಗೆ ಬಾರದಂತೆ ವಿಡಿಯೋ ಚ್ಯಾಂಟಿಗ್ ದೃಶ್ಯವನ್ನು ರೆಕಾರ್ಡ್ ಮಾಡಿಟ್ಟುಕೊಂಡಿದ್ದಾಳೆ.ಕೆಲ ದಿನಗಳ ಬಳಿಕ ಆ ವಿಡಿಯೋ ಗಳನ್ನು ಯುವಕನಿಗೆ ರವಾನಿಸಿ, ಹಣಕೊಡದಿ ದ್ದರೆ ವೈರಲ್ ಮಾಡುವುದಾಗಿ ಬ್ಲ್ಯಾಕ್‌ಮೇಲ್ ಮಾಡಿದ್ದಾಳೆ.ಮಾನಕ್ಕೆಹೆದರಿದ 30 ಸಾವಿರ ರೂ. ವರ್ಗಾಯಿಸಿದ್ದಾನೆ. ಠಾಣೆ ಮೆಟ್ಟಿಲೇರಿದ್ದಾನೆ.
ಯುವತಿಯರಿಗೆ ದುಷ್ಕರ್ಮಿಗಳ ಗಾಳ : ಶ್ರೀಮಂತ ಯುವಕರ ಜತೆ ಜೀವನ ಸಾಗಿಸಬೇಕು ಎಂಬ ಆಸೆಗೆ ಬಿದ್ದ ಯುವತಿಯರೂ ಮೋಸ ಹೋಗುತ್ತಿದ್ದಾರೆ. ವಂಚಕರು ವಿದೇಶಿಗಳಲ್ಲಿ ಕೆಲಸ ಹಾಗೂ ಐಷಾರಾಮಿ ಜೀವನ ನಡೆಸುತ್ತಿರುವಂತೆ ಬಿಂಬಿಸುವ ಫೋಟೋಗಳನ್ನು ಹಂಚಿಕೊಳ್ಳುತ್ತಾರೆ. ಪರಿಚಿತರಾದ ಬಳಿಕ ಆರಂಭದಲ್ಲಿ ಪಮ್, ಹೋಟೆಲ್, ಪಾರ್ಟಿಗಳಿಗೆ ಸುತ್ತಾಡಿಸುತ್ತಾರೆ. ಬಳಿಕ ವಿವಿಧ ನೆಪ ಹೇಳಿ, ಹಣಹಿಂತಿರುಗಿಸುವುದಾಗಿ ನಂಬಿಸಿ ಲಕ್ಷಾಂತರ ರೂ. ಪಡೆದು ವಂಚಿಸುತ್ತಿದ್ದಾರೆ. ಮತ್ತೂಂದೆಡೆ ಯುವಕರ ಜತೆಕಾಲ ಕಳೆಯಲು ಹೋಟೆಲ್, ರೂಮ್ ಎಲ್ಲ ಖರ್ಚುಗಳನ್ನು ಯುವತಿಯರೇ ತುಂಬುತ್ತಾರೆ.ಕೊನೆಗೆಕಿಡಿಗೇಡಿಗಳು ಯುವತಿಯರ ಲೈಂಗಿಕ ಸಂಪರ್ಕ ಬೆಳೆಸಿ ತಲೆಮರೆಸಿಕೊಳ್ಳುತ್ತಾರೆ.
ಯುವತಿಯರು, ಮಹಿಳೆಯರು ಸಾಮಾಜಿ ಕಜಾಲತಾಣಗಳ ಖಾತೆಗಳಲ್ಲಿ ಮೊಬೈಲ್ ನಂಬರ್, ಫೋಟೋ ಗಳನ್ನು ಪ್ರಕಟಿಸುವ ಮೊದಲು ಬಹಳ ಎಚ್ಚರಿಕೆ ವಹಿಸಬೇಕು. ಒಂದು ವೇಳೆ ಪ್ರಕಟಿಸಿದರೂ ಅದನ್ನು ಬೇರೆಯವರು ಕಳವು ಮಾಡದಂತೆ ಕ್ರಮ ಕೈಗೊಳ್ಳಬೇಕು. –ರೋಹಿಣಿ ಕಟೋಚ್ ಸೆಪಟ್, ಎಸ್ಪಿ, ಸಿಐಡಿ ಸೈಬರ್
–ಮೋಹನ್ ಭದ್ರಾವತಿ