Advertisement

ಬ್ಯಾಂಕಿಂಗ್‌ ಪರೀಕ್ಷೆ ವೇಳೆ ವಂಚನೆ:  ಬಂಧನ 

11:40 AM Aug 14, 2018 | Harsha Rao |

ಮಂಗಳೂರು: ಇನ್‌ಸ್ಟಿಟ್ಯೂಟ್‌ ಆಫ್‌ ಬ್ಯಾಂಕಿಂಗ್‌ ಪರ್ಸನಲ್‌ ಸೆಲೆಕ್ಷನ್‌ ಎಂಬ ಭಾರತೀಯ ರಾಷ್ಟ್ರೀಕೃತ ಬ್ಯಾಂಕ್‌ಗಳಿಗೆ ನಡೆಯುವ ಪೊ›ಬೆಷನರಿ ಅಧಿಕಾರಿಗಳ ಹು¨ªೆಯ ನೇಮಕಾತಿಯಲ್ಲಿ ವಂಚನೆ ನಡೆಸಿದ ಆರೋಪದಲ್ಲಿ ಉತ್ತರ ಪ್ರದೇಶದ ಬಿಜ್ನೊ°àರ್‌ ಚಾಂದ್‌ಪುರ ನಿವಾಸಿ ನವೀನ್‌ ಕುಮಾರ್‌(25)ನನ್ನು ಕಂಕನಾಡಿ ನಗರ ಪೊಲೀಸರು ಬಂಧಿಸಿದ್ದಾರೆ. 

Advertisement

ಕಳೆದ ಮಾ. 4ರಂದು ರಾಷ್ಟ್ರೀಕೃತ ಬ್ಯಾಂಕೊಂದಕ್ಕೆ ಸಂಬಂಧಪಟ್ಟ ಪ್ರವೇಶ ಪರೀಕ್ಷೆ ನಡೆದಿದ್ದು, ಇದರಲ್ಲಿ ಆರೋಪಿ ನವೀನ್‌ ಕುಮಾರ್‌ ಹೆಸರಲ್ಲಿ ಮತ್ತೂಬ್ಬ ಪರೀಕ್ಷೆಗೆ ಬರೆದಿದ್ದ. ಇದಾದ ಬಳಿಕ ನಗರದ ಪಂಪ್‌ವೆಲ…

ವೃತ್ತದ ಬಳಿ ಇರುವ ನಿಟ್ಟೆ ಎಜುಕೇಶನ್‌ ಇಂಟರ್‌ ನ್ಯಾಷನಲ… ಸಂಸ್ಥೆಯಲ್ಲಿ ನಡೆದ ಐಬಿಪಿಎಸ್‌ ಪ್ರವೇಶ ಪರೀಕ್ಷೆಯಲ್ಲೂ ಉತ್ತೀರ್ಣನಾಗಿದ್ದ. ಒಂದು ವರ್ಷದ ಪಿಜಿ ಡಿಪ್ಲೋಮಾ ಕೋರ್ಸ್‌ಗೆ 2018ರ ಜು.30ರಂದು ನವೀನ್‌ ಕುಮಾರ್‌ ಹೆಸರಿನಲ್ಲಿ ಪರೀಕ್ಷೆ ಬರೆದ ವ್ಯಕ್ತಿಯೇ ಹಾಜರಾಗಿ ಬಯೋ-ಮೆಟ್ರಿಕ್‌ ಪ್ರಕ್ರಿಯೆಯನ್ನು ನಡೆಸಿದ್ದ. ಆ ಬಳಿಕ ತರಬೇತಿಗೆ ಮಾತ್ರ ಆರೋಪಿ ನವೀನ್‌ ಕುಮಾರ್‌ ಹಾಜರಾಗಿದ್ದ. 

ಆದರೆ ಬಳಿಕ ನವೀನ್‌ ಕುಮಾರ್‌ನ ಚಲನಚಲನಗಳ ಬಗ್ಗೆ ನಿಟ್ಟೆ ಎಜುಕೇಶನ್‌ ಇಂಟರ್‌ ನ್ಯಾಷನಲ… ಸಂಸ್ಥೆಯ ಅಧಿಕಾರಿಗಳಿಗೆ ಸಂಶಯ ಬಂದಿತ್ತು. ಈ ಬಗ್ಗೆ ಆ.8ರಂದು ಹುದ್ದೆ ಪಡೆದ ಬ್ಯಾಂಕಿನ ಅಧಿಕಾರಿಗಳೊಂದಿಗೆ ಸೇರಿ ಬಯೋ ಮೆಟ್ರಿಕ್‌ ಪ್ರಕ್ರಿಯೆಯನ್ನು ನಡೆಸಿದಾಗ ಬಯೋ ಮೆಟ್ರಿಕ್‌ ಪ್ರಕ್ರಿಯೆಯಲ್ಲಿ ಪಾಲ್ಗೊಂಡ ವ್ಯಕ್ತಿಗೂ ಮತ್ತು ಪ್ರಸ್ತುತ ತರಬೇತಿಯಲ್ಲಿರುವ ವ್ಯಕ್ತಿಗೂ ತಾಳೆ ಆಗದಿರುವುದು ಕಂಡು ಬಂತು.ಆರೋಪಿ ನವೀನ್‌ ಕುಮಾರ್‌ ಹಾಗೂ ಇನ್ನಿಬ್ಬರು ಅಪರಿಚಿತರು ಸೇರಿ ನವೀನ್‌ ಕುಮಾರ್‌ನ ಎಲ್ಲ ಕಲಿಕಾ ಪ್ರಮಾಣ ಪತ್ರ ಹಾಗೂ ಇನ್ನಿತರ ದಾಖಲಾತಿಗಳ ಸುಳ್ಳು ದಾಖಲಾತಿ ಸೃಷ್ಟಿಸಿ, ಆತನ ಬದಲಾಗಿ ಇನ್ನೊಬ್ಬ ನನ್ನು ಪ್ರವೇಶ ಪರೀಕ್ಷೆಗಳಲ್ಲಿ ಹಾಜ ರಾಗುವಂತೆ ನಿರ್ದೇಶಿಸಿರುವುದು ಹಾಗೂ ವಂಚಿಸಿರು ವುದು ಮೇಲ್ನೋಟಕ್ಕೆ ಕಂಡು ಬಂದಿದೆ.

ಈ ಹಿನ್ನೆಲೆಯಲ್ಲಿ ಆ.11ರಂದು ನವೀನ್‌ ಕುಮಾರ್‌ನನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ಆತನಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next