ಮಹಾನಗರ: ಪೆನ್ಸಿಲ್ ತಯಾರಿಕಾ ಉದ್ಯಮದ ಹೆಸರಲ್ಲಿ ವಂಚನೆ ಮಾಡಿದ ವಂಚಕರನ್ನು ಬಂಧನ ಮಾಡಿ ಮುಗª ಜನರಿಗೆ ನ್ಯಾಯ ಒದಗಿಸಲು ಆಗ್ರಹಿಸಿ ಸೋಮವಾರ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಯಿತು.
ಡಿವೈಎಫ್‌ಐ ಜಿಲ್ಲಾಧ್ಯಕ್ಷ ಬಿ.ಕೆ. ಇಮಿ¤ಯಾಜ್ ಮಾತನಾಡಿ, ಪುತ್ತೂರಿನ ಕಬಕ ಎಂಬಲ್ಲಿ ಆರಂಭಿಸಲಾಗಿದ್ದ ಬ್ಲೇಡ್ ಕಂಪೆನಿಯು ಜಿಲ್ಲೆಯ ನೂರಾರು ಮುಗ್ಧ ನಿರುದ್ಯೋಗಿಗಳಿಂದ ಪೆನ್ಸಿಲ್ ಕಲರಿಂಗ್ ಮಾಡುವ ಸ್ವ ಉದ್ಯೋಗದಿಂದ ತಿಂಗಳಿಗೆ 20,000ರಂತೆ ಆದಾಯ ಗಳಿಸಬಹುದು ಎಂದು ನಂಬಿಸಿ ಪ್ರತಿಯೊಬ್ಬರಿಂದ ತಲಾ 80,000 ರೂ. ಪಡೆದು ವಂಚಿಸಲಾಗಿದೆ.
ನಿರುದ್ಯೋಗಿಗಳನ್ನೇ ಗುರಿಯಾಗಿಸಿಕೊಂಡು ಮೋಸ ಮಾಡಲಾಗಿದೆ. ವಂಚಕ ಸಂಸ್ಥೆಯ ಮನುಚಂದ್ರ ಮತ್ತು ಆತನಿಗೆ ಸಹಕರಿಸಿದವರನ್ನು ಬಂಧಿಸಿ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಮಾತನಾಡಿ, ಆರೋಪಿ ಮನುಚಂದ್ರ ಹಾಗೂ ಆತನ ಸಹಚರರ ಆಸ್ತಿ ಮುಟ್ಟುಗೋಲು ಹಾಕಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ನೇತೃತ್ವದಲ್ಲಿ ತನಿಖೆ ನಡೆಸಿ ಅಮಾಯಕರಿಗೆ ನ್ಯಾಯ ಒದಗಿಸಿ ಕೊಡಬೇಕೆಂದು ಒತ್ತಾಯಿಸಿದರು.
ಡಿವೈಎಫ್‌ಐ ಜಿಲ್ಲಾ ಖಜಾಂಚಿ ಮನೋಜ್ ವಾಮಂಜೂರ್ ಸ್ವಾಗತಿಸಿ ದರು. ಸಹ ಕಾರ್ಯದರ್ಶಿ ರಫೀಕ್ ಹರೇಕಳ ವಂದಿಸಿದರು. ಇಬ್ರಾಹಿಂ, ನಜೀರ್ ಅಹ್ಮದ್ ಉಳ್ಳಾಲ, ಇಬ್ರಾಹಿಂ ಖಲೀಲ್, ಅಶ್ರಫ್ ಮಂಜೇಶ್ವರ, ಅಝೀಜ್, ಅಬೂಬಕ್ಕರ್ ಸಿದ್ದೀಕ್ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.