Advertisement

ನೀರಿನ ತೆರಿಗೆಯಲ್ಲಿ ಪುರಸಭೆಗೆ ವಂಚನೆ

07:35 PM Aug 20, 2021 | Team Udayavani |

ಶ್ರೀರಂಗಪಟ್ಟಣ: ಶ್ರೀರಂಗಪಟ್ಟಣ ಪುರಸಭಾ ವ್ಯಾಪ್ತಿಯಲ್ಲಿ ಇರುವ ಕಲ್ಯಾಣ ಮಂಟಪಗಳು ಹಾಗೂ ಕ್ಲಿನಿಕ್‌ ಸೇರಿದಂತೆ ಉದ್ಯಮಗಳ ಪರವಾನಿಗೆ ನವೀಕರಣ ಮಾಡಿಸದೆ ಹಾಗೂ ನೀರಿನ ತೆರಿಗೆಯಲ್ಲಿ ವಂಚನೆ ಮಾಡುತ್ತಿರುವ ಪ್ರಕರಣಗಳು ಬಯಲಿಗೆ ಬರುತ್ತಿವೆ.

Advertisement

ಪುರಸಭೆಗೆ ವಂಚನೆ: ಪಟ್ಟಣದ 5ನೇ ವಾರ್ಡ್‌ಗೆ ಸೇರಿದ ಹಲವಾರು ಕಲ್ಯಾಣ ಮಂಟಪಗಳು, ಮಿನಿ ಕಲ್ಯಾಣ ಮಂಟಪಗಳು, ಕ್ಲಿನಿಕ್‌ ಉದ್ಯಮ ಗಳು ಹೆಚ್ಚಾಗಿದ್ದು, ಇದರಲ್ಲಿ ಕಲ್ಯಾಣ ಮಂಟಪಕ್ಕೆ ಸಾವಿರಾರು ಜನರು ಹಾಗೂ ಕ್ಲಿನಿಕ್‌ಗಳಲ್ಲಿ ನೂರಾರು ಜನರು ನೀರನ್ನು ಬಳಕೆ ಮಾಡ ಬಹುದಾಗಿದೆ.

ಹಲವಾರು ವರ್ಷಗಳಿಂದ ಕಲ್ಯಾಣ ಮಂಟಪಕ್ಕೂ ಒಂದೇ ಶುಲ್ಕ, ಮನೆಗಳಿಗೂ ಒಂದೇ ಶುಲ್ಕ ನೀರಿನ ತೆರಿಗೆ ಕಟ್ಟಿಸಿಕೊಳ್ಳುವುದು, ಪ್ರತಿ ವರ್ಷ ಪರವಾನಿಗೆ ನವೀಕರಣ ಮಾಡಿಸದೆ ಹಾಗೂ ಶುಲ್ಕವನ್ನು ನೀಡದೆ ಪುರಸಭೆಗೆ ವಂಚನೆ ಮಾಡಲಾಗಿದೆ.

ಇದನ್ನೂ ಓದಿ:ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ ಜೊತೆಗೆ ಅಧಿಕಾರ ವಿಕೇಂದ್ರೀಕರಣಕ್ಕೆ ಚಿಂತನೆ :ಅಶ್ವತ್ಥನಾರಾಯಣ

ದುರುಪಯೋಗ: ಪ್ರತಿ ಸಾಮಾನ್ಯ ಸಭೆಯಲ್ಲಿ ಕೆಲವು ಸದಸ್ಯರು ಈ ವಿಷಯಗಳ ಬಗ್ಗೆ ಚರ್ಚೆ ನಡೆಸಿದರೂ ಅಧಿಕಾರಿಗಳು ಕಲ್ಯಾಣ ಮಂಟಪ
ಸೇರಿದಂತೆ ಇತರ ಉದ್ಯಮಗಳು ಬಳಸುವ ನೀರಿನ ತೆರಿಗೆ ಕಮರ್ಷಿಯಲ್‌ ಆಗಿ ತೆರಿಗೆ ನಿಗದಿ ಮಾಡಿರುವ ಶುಲ್ಕ ಪಡೆಯದೇ ಸ್ವಲ್ಪ ಬಿಲ್‌
ಹಾಕಿ ಹಣ ಪಡೆದು ದುರುಪಯೋಗವಾಗಿರುವುದು ಕಂಡು ಬಂದಿದೆ. ಈ ಬಗ್ಗೆ ಬುಧವಾರ ನಡೆದ ಸಾಮಾನ್ಯ ಸಭೆಯಲ್ಲೂ ಚರ್ಚೆ ಮಾಡಲಾಗಿದ್ದು, ಮುಂದೆ ಕ್ರಮಕ್ಕೆ ಮುಂದಾಗುವರೇ ಎಂಬುದನ್ನು ಕಾದು ನೋಡಬೇಕಿದೆ.

Advertisement

ಸರಿಯಾಗಿ ಪರಿಶೀಲಿಸಿಲ್ಲ: ಸಾಮಾನ್ಯ ಜನರು ಬಂದು ಯಾವುದೇ ಅಧಿಕಾರಿಗಳ ಭೇಟಿ ಮಾಡಲು ಬಂದ ವೇಳೆ ಹೊರ ‌ ಹೋಗಿದ್ದೇವೆ ಬಂದ ಮೇಲೆ ಕಂದಾಯ ಅಥವಾ ಇನ್ನಾವುದೇ ಶುಲ್ಕ ಕಟ್ಟಿಸಿಕೊಳ್ಳುತ್ತೇವೆ ಎಂದು ಹೇಳುವ ಅಧಿಕಾರಿಗಳು, ಯಾವುದೇ ಬಡ ಕುಟುಂಬಗಳು ಶುಲ್ಕ ಕಟ್ಟದಿದ್ದರೆ ಅವರಿಗೆ ಯಾವುದೇ ದಾಖಲೆ ಪಡೆಯಲು ಹೋದ ಸಂದರ್ಭದಲ್ಲಿ ನೀರು, ಮನೆ ಕಂದಾಯ ಬಾಕಿ ಕಟ್ಟಿಲ್ಲ. ನೀವು ಮೊದಲು ಕಟ್ಟಿ ಎಂದು ಎಚ್ಚರಿಸಿ ಶುಲ್ಕ ಕಟ್ಟಿಸಿಕೊಳ್ಳುವ ಅಧಿಕಾರಿಗಳು, ಶ್ರೀಮಂತ ಉದ್ಯಮ ನಡೆಸುವರಿಗೇಕೆ ಇಲ್ಲಿತನಕ ಪರವಾನಿಗೆ ನವೀಕರಣ ಹಾಗೂ ನೀರಿನ ಶುಲ್ಕವನ್ನು ಸರಿಯಾಗಿ ಪರಿಶೀಲಿಸಿಲ್ಲ ಎಂದು ಪುರ ‌ ಜನರು ಪ್ರಶ್ನೆಯಾಗಿದೆ.

ಟಿಎಪಿಸಿಎಂಎಸ್‌ ಬಾಕಿ: ಟಿಎಪಿಸಿಎಂಎಸ್‌ ಕಚೇರಿ ಕಲ್ಯಾಣ ಮಂಟಪಗಳ ಕಂದಾಯ ಹಾಗೂ ತೆರಿಗೆ ಬಾಕಿ 25 ಲಕ್ಷ ರೂ.ಗಳಿದ್ದು ಕಟ್ಟಿಸಿ ಕೊಂಡು ಎಲ್ಲವನ್ನು ನವೀಕರಿಸಲು ಮುಂದಾಗಿದ್ದರೂ ಪುರಸಭೆ ಅಧಿಕಾರಿಗಳು ಅದನ್ನು ಕಟ್ಟಿಸಿಕೊಳ್ಳದೆ ಮೀನಾಮೇಷ ಎಣಿಸುತ್ತಿದ್ದಾರೆ ಎಂಬ ಆರೋಪ ಸಾಮಾನ್ಯ ಸಭೆಯಲ್ಲಿ ಸದಸ್ಯರೊಬ್ಬರು ಮಾಡಿದರೂ ಕಂದಾಯ ಕಟ್ಟಿಸಿಕೊಳ್ಳಲು ಪುರಸಭೆ ಅಧಿಕಾರಿಗಳು ಮುಂದಾ ಗುತ್ತಿಲ್ಲವೇಕೆ ಎಂಬುದು ಪ್ರಶ್ನೆಯಾಗಿ ಉಳಿಯುತ್ತಿದೆ.

ಹೆಚ್ಚು ನೀರು ಬಳಕೆ: ಎಂ.ನಂದೀಶ್‌
ಪಟ್ಟಣದಲ್ಲಿ ಹೆಚ್ಚಿನ ನೀರು ಬಳಕೆಯಾಗುವುದುಕಲ್ಯಾಣ ಮಂಟಪ, ವಸತಿ ಗೃಹ, ಕ್ಲಿನಿಕ್‌ಗಳಲ್ಲಿ. ಈಗೇ ಹಲವಾರು ಮಂದಿ ಮನೆ ನಿರ್ಮಾಣ ಹಾಗೂ ದುರಸ್ತಿ ಕಾರ್ಯಗಳಿಗೆ ಪುರಸಭೆಯಿಂದ ಪರವಾನಿಗೆ ಪಡೆದು, ಮಿನಿ ವಸತಿಗೃಹ ಹಾಗೂ ಮಿನಿ ಕಲ್ಯಾಣ ಮಂಟಪಗಳನ್ನು ಮಾಡಿ ಕಮರ್ಷಿಯಲ್‌ ಆಗಿ ಬಳಸಿಕೊಂಡು ತೆರಿಗೆ ವಂಚನೆ ಮಾಡುತ್ತಿರುವುದುಕಂಡು ಬಂದರೂ ಅಧಿಕಾರಿಗಳುಕ್ರಮ ಕೈಗೊಂಡು ಕಮರ್ಷಿಯಲ್‌ ಆಗಿ ಶುಲ್ಕ ವಿಧಿಸದಂತೆ ಸುಮ್ಮನಿದ್ದಾರೆ ಎಂದು ಪುರಸಭಾ ಸದಸ್ಯ ಎಂ.ನಂದೀಶ್‌ ಆರೋಪಿಸಿದ್ದಾರೆ. ಈ ಸಂಬಂಧ ಉದಯವಾಣಿಯೊಂದಿಗೆ ಮಾತನಾಡಿದ ಅವರು, ಪುರಸಭೆಯ ಆದಾಯಕ್ಕೆ ಧಕ್ಕೆಯಾಗುವ ಸಂಭವವಿದೆ.ಕಂದಾಯ ಇಲಾಖೆಯಲ್ಲಿಕೆಲಸ ಮಾಡುವ ಅಧಿಕಾರಿಗಳು ಸಾಮಾನ್ಯ ಜನರು ಬಂದ ವೇಳೆಕಚೇರಿಗಳಲ್ಲಿ ಇರುವುದಿಲ್ಲ ಎಂದು ಹೇಳುತ್ತಿರುವುದು ನನ್ನ ಗಮನಕ್ಕೆ ಬಂದಿದೆ ಈ ಬಗ್ಗೆ ಮುಖ್ಯಾಧಿಕಾರಿಗಳು ಗಮನಹರಿಸಬೇಕು ಎಂದು ಆಗ್ರಹಿಸಿದ್ದಾರೆ.

ಕಲ್ಯಾಣ ಮಂಟಪ, ವಸತಿಗೃಹ, ಉದ್ಯಮಗಳ ಸರ್ವೆ
ನಾನು ಮುಖ್ಯಾಧಿಕಾರಿಯಾಗಿ ಹೊಸದಾಗಿ ಬಂದಿದ್ದೇನೆ. ಸಾಮಾನ್ಯ ಸಭೆಯಲ್ಲಿ ಚರ್ಚೆಯಾದ ಬಗ್ಗೆಕಂದಾಯ, ಆರೋಗ್ಯ ಹಾಗೂ ನೀರು ಸರಬರಾಜು ಅಧಿಕಾರಿಗಳನ್ನುಕರೆದು ಪ್ರತ್ಯೇಕ ಸಭೆ ನಡೆಸಿದ್ದೇನೆ. ಇನ್ನು ಮುಂದೆ ಪುರಸಭಾ ವ್ಯಾಪ್ತಿಯಲ್ಲಿನ ಕಮರ್ಷಿಯಲ್‌ ಆಗಿರುವ ಬಗ್ಗೆಕ್ರಮ ತೆಗೆದುಕೊಳ್ಳಲು ಪ್ರತಿ ಬೀದಿಯಲ್ಲಿರುವ ಮನೆ,ಕಲ್ಯಾಣ ಮಂಟಪ, ವಸತಿ ಗೃಹ ಇತರ ಉದ್ಯಮಗಳ ಬಗ್ಗೆ ಸರ್ವೆ ನಡೆಸಿ ಅವುಗಳ ತೆರಿಗೆ, ಪರಿಸರ, ಸ್ವತ್ಛತೆ, ನೀರು ಸರಬರಾಜು ಈ ಬಗ್ಗೆ ಯಾವುದೇ ಸಮಸ್ಯೆಗಳು ಆಗದಂತೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಪುರಸಭಾ ಶ್ರೀರಂಗಪಟ್ಟಣ ಮುಖ್ಯಾಧಿಕಾರಿ ಡಾ. ಮಾನಸ ಎಂ. ತಿಳಿಸಿದ್ದಾರೆ.

– ಗಂಜಾಂ ಮಂಜು

Advertisement

Udayavani is now on Telegram. Click here to join our channel and stay updated with the latest news.

Next