Advertisement
ಸಚಿವೆಯ ಆಪ್ತ ಎಂದು ಹೇಳಿಕೆಕೊಂಡು ತಮಿಳುನಾಡಿನ ಚೆನ್ನೈ ಹಾಗೂ ಊಟಿಯಲ್ಲಿ ಸಾರ್ವಜನಿಕರಿಂದ ಹಣ ಪಡೆದು ಕಳೆದು ಮೂರು ತಿಂಗಳಿಂದ ಪ್ರಕಾಶ್ ಎಂದು ಹೇಳಿಕೊಂಡಿರುವ ಆರೋಪಿ ಕೃಷಿಕರಿಗೆ ಮತ್ತು ಉದ್ಯಮಿಗಳಿಗೆ ವಂಚನೆ ಮಾಡಿರುವುದಾಗಿ ತಿಳಿದು ಬಂದಿದೆ.
Related Articles
Advertisement
ಧಾರವಾಡದಲ್ಲಿ ಭಾನುವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಸಚಿವೆ ಶೋಭಾ ಕರಂದ್ಲಾಜೆ, ಬೆಂಗಳೂರಿನ ಸಂಜಯನಗರ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ತಕ್ಷಣ ಅದನ್ನು ಸಿಸಿಬಿಗೆ ವರ್ಗಾಯಿಸಿ ತನಿಖೆ ನಡೆಯಬೇಕಿದೆ. ತಮಿಳುನಾಡಿನ ಚೆನ್ನೈ ಮತ್ತು ಊಟಿ ಕಡೆಯ ನಂಬರ್ ಬಳಸಿಕೊಂಡು ಕೃಷಿಕರಿಗೆ ಮತ್ತು ವ್ಯಾಪಾರಸ್ಥರಿಗೆ ಕರೆ ಮಾಡಿ ನಾನು ಕೇಂದ್ರ ಸಚಿವರ ಆಪ್ತ ಸಹಾಯಕ. ನಿಮಗೆ ಕೇಂದ್ರ ಸರಕಾರದ ಯೋಜನೆಯಲ್ಲಿ ಅನುಕೂಲ ಮಾಡಿಸುತ್ತೇನೆ ಎಂದು ಹೇಳಿಕೊಂಡು ಹಣ ಪಡೆದು ಮೋಸ ಮಾಡುತ್ತಿದ್ದಾರೆ ಎಂಬ ಮಾಹಿತಿ ಬಂದಿತ್ತು. ಹೀಗಾಗಿ ತಕ್ಷಣವೆ ಬೆಂಗಳೂರಿನ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿ ನನ್ನ ಕಚೇರಿ ದುರ್ಬಳಕೆ ಆಗಿಲ್ಲ. ಊಟಿ ಮತ್ತು ಚೆನ್ನೈನಲ್ಲಿ ದುರ್ಬಳಕೆ ಮಾಡುತ್ತಿದ್ದವರ ಬಂಧನ ಆಗಬೇಕಿದೆ. ಅವರ ಫೋನ್ ನಂಬರ್ ಪೊಲೀಸರಿಗೆ ಕೊಟ್ಟಿದ್ದೇನೆ. ಯಾರ ಕೈವಾಡವಿದೆ ಎಂಬುದರ ಕುರಿತು ತನಿಖೆ ಮಾಡಲು ಪೊಲೀಸರಿಗೆ ಸೂಚಿಸಿದ್ದೇನೆ ಎಂದರು.