Advertisement

ಮೇಕಪ್‌ ಆರ್ಟಿಸ್ಟ್‌ಗೆ ವಂಚನೆ

05:51 AM Jul 06, 2020 | Lakshmi GovindaRaj |

ಬೆಂಗಳೂರು: ಲಾಕ್‌ಡೌನ್‌ ನಡುವೆಯೂ ಸೈಬರ್‌ ವಂಚಕರು ಸಕ್ರಿಯರಾಗಿದ್ದು, ಮಹಿಳಾ ಮೇಕಪ್‌ ಆರ್ಟಿಸ್ಟ್‌ ಒಬ್ಬರಿಗೆ ಸಾವಿರಾರು ರೂ. ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ. ಈ ಸಂಬಂಧ ಹೊಸಕೆರೆಹಳ್ಳಿ ನಿವಾಸಿ ಪ್ರೀತಿ ಎಂಬವರು  ದಕ್ಷಿಣ ವಿಭಾಗದ ಸೈಬರ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

Advertisement

ಕೃತ್ಯ ಎಸಗಿದ ಆರೋಪಿ ದಿನೇಶ್‌ ಎಂಬಾತ ಪರಾರಿಯಾಗಿದ್ದಾನೆ ಎಂದು ಪೊಲೀಸರು ಹೇಳಿದರು. ಮೇಕಪ್‌ ಆರ್ಟಿಸ್ಟ್‌ ಆಗಿರುವ ಪ್ರೀತಿ ಅವರಿಗೆ ಕೆಲ ದಿನಗಳ ಹಿಂದೆ  ಆರೋಪಿ ಕರೆ ಮಾಡಿದ್ದಾನೆ. ಈ ವೇಳೆ ನಾವು ವೆರಿಫೈಡ್‌ ಪೇಜ್‌ ನಿಂದ ಕರೆ ಮಾಡುತ್ತಿದ್ದೇವೆ ಎಂದು ಪರಿಚಯಿಸಿಕೊಂಡಿದ್ದಾನೆ. ಪೇಜ್‌ ನ ಸ್ಕ್ರೀನ್‌ ಶಾಟ್‌ ಅನ್ನು ಮಹಿಳೆಗೆ ಕಳುಹಿಸಿದ್ದಾನೆ.

ಅಲ್ಲದೆ, ಗೋವಾದಲ್ಲಿ ಕಾರ್ಯಕ್ರಮವೊಂದು ಆಯೋಜಿಸಿದ್ದು, ಗಾಯಕಿ ನೇಹಾ ಕಕ್ಕರ್‌ ಸೇರಿ ಹಲವು  ನಟರು ಪಾಲ್ಗೊಳ್ಳಲಿದ್ದಾರೆ. ಪ್ರತಿಯೊಬ್ಬರಿಗೂ ಮೇಕಪ್‌ ಮಾಡಬೇಕು. ಅದರ ಸಂಪೂರ್ಣ ವೆಚ್ಚ ಪಾವತಿಸುತ್ತೇವೆ ಎಂದು ನಂಬಿಸಿದ್ದಾನೆ. ಹೀಗಾಗಿ ಪ್ರೀತಿ ಅವರೇ ವಿಮಾನ ಟಿಕೆಟ್‌  ಕಾಯ್ದಿರಿಸಲು 20 ಸಾವಿರ ರೂ. ಹಣವನ್ನು ಆರೋಪಿಗೆ ಗೂಗಲ್‌ ಪೇ ಮೂಲಕ ಕಳುಹಿಸಿದ್ದಾರೆ.

ಆದರೆ, ಆರೋಪಿ ನಕಲಿ ಟಿಕೆಟ್‌ ಕಳುಹಿಸಿ ವಂಚಿಸಿದ್ದಾನೆ. ಆ ನಂತರ ಪರಿಶೀಲಿಸಿದಾಗ ವಂಚನೆ ಗೊತ್ತಾಗಿದೆ ಎಂದು ಪ್ರೀತಿ ದೂರಿನಲ್ಲಿ  ಉಲ್ಲೇಖೀಸಿದ್ದಾರೆ ಎಂದು ಪೊಲೀಸರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next