ಹುಳಿಯಾರು: ಸೋಲಾರ್ ಗ್ರಾಮ ನಿರ್ಮಾಣ ಮಾಡುವುದಾಗಿ ಹೊಯ್ಸಳಕಟ್ಟೆ ಕಾವೇರಿ ಗ್ರಾಮೀಣ ಬ್ಯಾಂಕ್ ಶಾಖೆ ಹಾಗೂ ಒಆರ್‌ಬಿ ಕಂಪನಿ ವಂಚನೆ ಮಾಡಿದೆ ಎಂದು ರಂಗನಕೆರೆ ಗ್ರಾಮದ ಸೋಲಾರ್ ದೀಪ ಹಾಕಿಸಿಕೊಂಡಿದ್ದ ರೈತರು ಬ್ಯಾಂಕ್ ಮುತ್ತಿಗೆ ಹಾಕಿದ್ದರು.
ಕಳೆದ ಆರೇಳು ವರ್ಷಗಳ ಹಿಂದೆ ಹೊಯ್ಸಳಕಟ್ಟೆ ಕಾವೇರಿ ಗ್ರಾಮೀಣ ಬ್ಯಾಂಕ್ ಶಾಖಾ ವ್ಯವ ಸ್ಥಾಪಕರು, ತುರುವೇಕೆರೆಯಲ್ಲಿ ಕಚೇರಿ ಹೊಂದಿದೆ ಎನ್ನಲಾದ ಒಆರ್‌ಬಿ ಸೋಲಾರ್ ಕಂಪನಿ ಸಹ ಯೋಗದಲ್ಲಿ ರಂಗನಕೆರೆ ಗ್ರಾಮದಲ್ಲಿ ಸುಮಾರು 15 ಮನೆಗಳಿಗೆ ಸೋಲಾರ್ ಅಳವಡಿಸಿದ್ದರು. 2 ದೀಪದ ಸಟ್‌ಗೆ 15 ರೂ. ಸಾವಿರ ಹಾಗೂ 3 ದೀಪದ ಸಟ್‌ಗೆ 20 ರೂ. ಸಾವಿರ ಹಣ ಸಾಲ ನೀಡಿತ್ತು. ದೀಪ ಅಳವಡಿಸಿದ ವೇಳೆ ಬೆಸ್ಕಾಂ ಬಿಲ್ನಲ್ಲಿ ಶೇ.40 ರಿಯಾಯಿತಿ ಹಾಗೂ ಬ್ಯಾಂಕ್‌ನಿಂದ ರಿಯಾಯಿತಿ ಕೊಡುವುದಾಗಿ ಗ್ರಾಹಕರಿಗೆ ಆಸೆ ಹುಟ್ಟಿಸಿತ್ತು. ಇದರಿಂದ ಸುಮಾರು 15 ರೈತರು ದೀಪ ಅಳವಡಿಸಿಕೊಂಡಿದ್ದರು.
ಕಂಪೆನಿ ಕಚೇರಿ ಖಾಲಿ: ಆರಂಭದಲ್ಲಿ 5 ವರ್ಷ ಗಳವರೆಗೆ ಉಚಿತ ಸೇವೆ ನೀಡುವುದಾಗಿ ಹೇಳಿದ್ದ ಒಆರ್‌ಬಿ ಕಂಪನಿ ಕೇವಲ ಒಂದು ವರ್ಷ ಮಾತ್ರ ಸೇವೆ ನೀಡಿ, ನಂತರ ತಮ್ಮ ಕಚೇರಿ ಖಾಲಿ ಮಾಡಿತ್ತು. ಆದರೆ, ದೀಪ ಅಳವಡಿಸಿದ 2 ವರ್ಷದಲ್ಲಿ ಹಾಳಾ ಗಿದೆ. ಈ ಬಗ್ಗೆ ಗ್ರಾಹಕರು ಹಲವು ಬಾರಿ ಸಂಬಂಧ ಪಟ್ಟ ಕಂಪನಿಯವರನ್ನು ಕರೆಸುವಂತೆ ಮನವಿ ಮಾಡಿದ್ದರು. ಆದರೆ, ಕಂಪನಿ ಮುಚ್ಚಿ ಹೋಗಿದೆ ಎಂಬ ಸಬೂಬು ಹೇಳಿ ಬ್ಯಾಂಕ್ ನವರು ಸುಮ್ಮ ನಾಗಿದ್ದರು. ಈಗ ಇದ್ದಕ್ಕಿದ್ದಂತೆ ಸೋಲಾರ್ ಅಳ ವಡಿಸಿಕೊಂಡಿರುವ ರೈತರು 45 ರೂ. ಸಾವಿರ ದವರೆಗೆ ಹಣ ಪಾವತಿಸುವಂತೆ ಬ್ಯಾಂಕ್‌ನಿಂದ ನೊಟೀಸ್ ನೀಡಿದ್ದರು. ಗ್ರಾಮದ ಸ್ತ್ರೀಶಕ್ತಿ ಸಂಘದ ಗುಂಪುಗಳಿಗೆ ಸಾಲ ನೀಡಲು ನಿಮ್ಮ ಗ್ರಾಮದ ಸೋಲಾರ್ ದೀಪ ಸಾಲ ಕಟ್ಟಿಸುವಂತೆ ಒತ್ತಡ ಹೇರುತ್ತಿದ್ದರು. ಇದರಿಂದ ಬೇಸತ್ತ ರೈತರು ರೈತ ಸಂಘದ ಮುಖಂಡ ಕೆಂಕೆರೆ ಸತೀಶ್ ಹಾಗೂ ಸಾಮಾಜಿಕ ಹೋರಾಟಗಾರ ದಬ್ಬಗುಂಟೆ ರವಿಕುಮಾರ್ ನೇತೃತ್ವದಲ್ಲಿ ಮುತ್ತಿಗೆ ಹಾಕಿದ್ದರು.
ಹೇಳಿದಂತೆ ನಡೆದುಕೊಂಡಿಲ್ಲ: ರೈತ ಸಂಘದ ಕೆಂಕೆರೆ ಸತೀಶ್ ಮಾತನಾಡಿ, ಕಂಪನಿ ಹಾಗೂ ಬ್ಯಾಂಕ್ ಮೊದಲು ಹೇಳಿದಂತೆ ನಡೆದುಕೊಂಡಿಲ್ಲ. ರೈತರಿಗೆ ಅನ್ಯಾಯ ಮಾಡಿದ್ದು, ಮಾಡಿದ ತಪ್ಪಿಗೆ ರೈತರಿಂದ ಕಡಿಮೆ ಹಣ ಪಾವತಿಸಿಕೊಂಡು ಸಾಲ ಮುಕ್ತ ಮಾಡುವಂತೆ ಬ್ಯಾಂಕ್ ವ್ಯವಸ್ಥಾಪಕರನ್ನು ಒತ್ತಾಯಿಸಿದರು. ಅಂತಹ ಅಧಿಕಾರ ತಮಗೆ ಇಲ್ಲದ ಕಾರಣ ಪ್ರಾದೇಶಿಕ ಕಚೇರಿಯನ್ನು ಭೇಟಿ ಮಾಡುವಂತೆ ತಿಳಿಸಿದರು.
ಈ ವೇಳೆ ರೈತರಾದ ಆರ್.ಟಿ.ನಾಗರಾಜು, ಎಚ್. ಪರಮೆಶ್, ಆದಂದಯ್ಯ, ಆರ್.ಬಿ. ನಾಗರಾಜು, ತಿಪ್ಪೇಸ್ವಾಮಿ, ಆರ್.ಸಿ.ವೀರಭದ್ರಯ್ಯ, ಟಿ.ಟಿ.ರುದ್ರಯ್ಯ, ರೈತ ಸಂಘದ ಮರುಳಪ್ಪ, ಓಂಕಾರಪ್ಪ ಮತ್ತಿತರರು ಇದ್ದರು.