Advertisement

ಮಹಿಳೆಗೆ ವಂಚನೆ: ಸಾಮಗ್ರಿ ವ್ಯವಸ್ಥಾಪಕನ ಅಮಾನತಿಗೆ ಆಗ್ರಹ

02:39 PM Mar 25, 2022 | Team Udayavani |

ಮೈಸೂರು: ನಗರದ ಮೈಲ್ಯಾಕ್‌ ಕಾರ್ಖಾನೆಯಲ್ಲಿ ಸಾಮಗ್ರಿ ವ್ಯವಸ್ಥಾಪಕರಾಗಿದ್ದ ಎಚ್‌.ಎಸ್‌. ಶಶಿಕಾಂತ್‌ ಎಂಬುವವರು ವಿವಾಹವಾಗುವುದಾಗಿ ನಂಬಿಸಿ ಕಾರ್ಖಾನೆಯ ಮಹಿಳೆಯೊಬ್ಬರಿಗೆ ವಂಚಿಸಿದ್ದರು. ಈ ಕುರಿತು ತನಿಖೆ ನಡೆದು ಆರೋಪ ಸಾಬೀತಾಗಿತ್ತು. ಆಗ ವಜಾಗೊಂಡಿದ್ದ ಶಶಿಕಾಂತ್‌ ಅವರನ್ನು ಮತ್ತೆ ಕೆಲಸಕ್ಕೆ ತೆಗೆದುಕೊಳ್ಳುವ ಮೂಲಕ ಸಂತ್ರಸ್ತ ಮಹಿಳೆಗೆ ಅನ್ಯಾಯ ಎಸಗಲಾಗಿದೆ ಎಂದು ಕಂಪನಿ ಷೇರುದಾರರು ಮತ್ತು ನಿವೃತ್ತ ಉದ್ಯೋಗಿಗಳು ಆರೋಪಿಸಿದ್ದಾರೆ.

Advertisement

ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಎನ್‌. ಪುಟ್ಟಯ, ಕಂಪನಿಯಲ್ಲಿ ಗುತ್ತಿಗೆ ಆಧಾರದಲ್ಲಿ ಕಂಪ್ಯೂಟರ್‌ ಆಪರೇಟರ್‌ ಆಗಿ ಕೆಲಸ ಮಾಡುತ್ತಿದ್ದ ಮಹಿಳೆಗೆ ಶಶಿಕಾಂತ್‌ ಅವರು ವಿವಾಹವಾಗುವುದಾಗಿ ನಂಬಿಸಿ, ವಂಚಿಸಿದ್ದಾರೆ. ಈ ಬಳಿಕ ಮಹಿಳೆ ನೀಡಿದ ದೂರನ್ನು ಆಧರಿಸಿ ತನಿಖೆ ನಡೆದು ಶಶಿಕಾಂತ್‌ ಅವರನ್ನು ವಜಾಗೊಳಿಸಲಾಗಿತ್ತು. ಆದರೆ ಬಳಿಕ ಮನವಿ ಆಧರಿಸಿ ಶಶಿಕಾಂತ್‌ ಅವರನ್ನು ಕೆಲಸಕ್ಕೆ ತೆಗೆದುಕೊಳ್ಳಲಾಗಿದೆ.

ಪ್ರಕರಣದಲ್ಲಿ ಮಹಿಳೆಗೆ ನ್ಯಾಯ ದೊರಕದಂತೆ ಮಾಡಲಾಗಿದೆ. ಕೂಡಲೇ ಕಾರ್ಖಾನೆ ಆಡಳಿತವು ಶಶಿಕಾಂತ್‌ ಅವರನ್ನು ವಜಾಗೊಳಿಸುವ ಮೂಲಕ ಮಹಿಳೆಗೆ ನ್ಯಾಯ ದೊರಕಿಸಿಕೊಡಬೇಕೆಂದು ಒತ್ತಾಯಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next