Advertisement

ರಾಜಕೀಯ ವ್ಯಕ್ತಿಗಳ ಪರಿಚಯವಿದೆ ಸರ್ಕಾರಿ ಕೆಲಸ ಕೊಡಿಸುತ್ತೇನೆಂದು1.53 ಕೋಟಿ ರೂ. ದೋಖಾ

01:25 PM Jul 03, 2022 | Team Udayavani |

ಬೆಂಗಳೂರು: ಐಪಿಎಸ್‌ ಅಧಿಕಾರಿಗಳು, ಶಾಸಕರ, ಸಂಸದರು ಪರಿಚಯವಿದ್ದು, ಸರ್ಕಾರಿ ಕೆಲಸ ಎಂದು ಬರೋಬ್ಬರಿ ಒಂದೂವರೆ ಕೋಟಿ ರೂ. ವಂಚಿಸಿದ ಇಬ್ಬರು ಚಿಕ್ಕಜಾಲ ಪೊಲೀಸರ ಬಲೆಗೆ ಬಿದ್ದಿದ್ದಾರೆ.

Advertisement

ಕುಣಿಗಲ್‌ ತಾಲೂಕಿನ ಪ್ರಕಾಶ್‌(35) ಮತ್ತು ಹೊಸಕೋಟೆಯ ನಾರಾಯಣಪ್ಪ (45) ಬಂಧಿತರು. ಮತ್ತೂಬ್ಬ ಆರೋಪಿ ಪಾಟೀಲ್‌ ಎಂಬಾತ ತಲೆಮರೆಸಿಕೊಂಡಿದ್ದಾನೆ. ಆತನಿಗಾಗಿ ಶೋಧ ನಡೆಯುತ್ತಿದೆ.

ಆರೋಪಿಗಳು, ಒಂದೇ ಗ್ರಾಮದ ಪ್ರಿಯಾಂಕ, ಪಶುಪತಿ, ಅಭಿಷೇಕ್‌, ಧನುಷ್‌ ಕುಮಾರ್‌, ಸಂದೀಪ್‌, ಹೇಮಂತ್‌, ಮನೋಜ್‌ ಕುಮಾರ್‌, ಗುತ್ತಿಗೆದಾರ ಮುನಿರಾಜು ಎಂಬವರಿಗೆ ಪೊಲೀಸ್‌ ಇಲಾಖೆ, ಜಲಮಂಡಳಿಯಲ್ಲಿ ಉತ್ತಮ ಸ್ಥಾನದ ಹುದ್ದೆ ಕೊಡಿಸುವುದಾಗಿ 1.53 ಕೋಟಿ ರೂ. ಪಡೆದು ವಂಚಿಸಿದ್ದಾರೆ. ಆರೋಪಿಗಳ ವಿರುದ್ಧ ಮುನಿರಾಜು ಅವರು ಚಿಕ್ಕಜಾಲ ಠಾಣೆಯಲ್ಲಿ ಪ್ರಕರಣ ದಾಖಲಿಸಿ ದ್ದರು. ಈ ಮೇರೆಗೆ ಆರೋಪಿಗಳನ್ನು ಬಂಧಿಸಲಾಗಿದೆ. ಆರೋಪಿಗಳು ಪದವೀಧರ ಯುವಕರನ್ನೆ ಟಾರ್ಗೆಟ್‌ ಮಾಡಿ ವಂಚಿಸುತ್ತಿದ್ದರು ಎಂದು ಪೊಲೀಸರು ಹೇಳಿದರು.

ಆರೋಪಿಗಳ ಪೈಕಿ ನಾರಾಯಣಪ್ಪ ಮತ್ತು ಪ್ರಕಾಶ್‌ ಕೂಡ ಗುತ್ತಿಗೆದಾರನಾಗಿದ್ದಾನೆ. ಪಾಟೀಲ್‌ ವಿಧಾನಸೌಧದಲ್ಲಿ ಉದ್ಯೋಗದಲ್ಲಿದ್ದಾನೆ. ದೂರು ದಾರರ ಪೈಕಿ ಮುನಿರಾಜು ಗುತ್ತಿಗೆದಾರರಾಗಿದ್ದು, ನಾರಾಯಣಪ್ಪ ಮತ್ತು ಪ್ರಕಾಶ್‌ ಪರಿಚಯವಾಗಿದೆ. ಈ ವೇಳೆ ಆರೋಪಿಗಳ ಪೈಕಿ ಪ್ರಕಾಶ್‌, ತನಗೆ ಬೆಳಗಾವಿ ಪೊಲೀಸ್‌ ಆಯುಕ್ತ ಬೋರಲಿಂಗಯ್ಯ ತನ್ನ ಚಿಕ್ಕಪ್ಪನಾಗಿದ್ದು, ಕುಣಿಗಲ್‌ ಕ್ಷೇತ್ರದ ಶಾಸಕ ರಂಗನಾಥ್‌, ಬೆಂಗಳೂರು ಗ್ರಾಮಾಂತರ ಸಂಸದ ಡಿ.ಕೆ. ಸುರೇಶ್‌ ಪರಿಚಯವಿದ್ದಾರೆ. ತಾನೂ ಹೇಳಿದಂತೆ ಕೇಳುತ್ತಾರೆ. ಇವರೊಂದಿಗೆ ತನ್ನ ವ್ಯವಹಾರ ನಡೆಯುತ್ತದೆ. ಇನ್ನು ತನ್ನ ತಂದೆ ಚಿಕ್ಕನರಸಿಂಹಯ್ಯ ಜಲಮಂಡಳಿಯಲ್ಲಿ ಎಇಇ ಆಗಿದ್ದಾರೆ. ಹೀಗಾಗಿ ಪೊಲೀಸ್‌ ಮತ್ತು ಜಲಮಂಡಳಿಯ ಎಲ್ಲ ಹಂತದ ಅಧಿಕಾರಿಗಳು ಪರಿಚಯವಿದ್ದಾರೆ. ಈ ಎರಡು ಇಲಾಖೆಯಲ್ಲಿ ಕೆಲಸ ಕೊಡಿಸುತ್ತೇನೆ ಎಂದು ಹೇಳಿಕೊಂಡಿದ್ದಾನೆ. ಮುನಿರಾಜು ಅವರ ಪುತ್ರ ಪಶುಪ ತಿಗೆ ಪೊಲೀಸ್‌ ಇಲಾಖೆಯಲ್ಲಿ ಕೆಲಸ ಕೊಡಿಸುತ್ತೇನೆ ಎಂದು 15 ಲಕ್ಷ ರೂ. ಪಡೆದುಕೊಂಡಿದ್ದಾನೆ.

ಜಲಮಂಡಳಿಯಲ್ಲಿ ಕೆಲಸ ಕೊಡಿಸುವುದಾಗಿ ವಂಚನೆ: ಪ್ರಿಯಾಂಠಿಕಗೆ ಜಲಮಂಡಳಿಯಲ್ಲಿ ಎಒಆರ್‌ ಉದ್ಯೋಗ ಕೊಡಿಸುತ್ತೇನೆ ಎಂದು 48 ಲಕ್ಷ ರೂ., ಅಭಿಷೇಕ್‌ಗೆ ಸೂಪರಿಂಟೆಂಡಟ್‌ ಎಂಜಿನಿ ಯರ್‌ಗಾಗಿ 52 ಲಕ್ಷ ರೂ., ಸಂದೀಪ್‌ಗೆ ಜೂನಿ ಯರ್‌ ಅಕೌಂಟೆಂಡ್‌ಗಾಗಿ 12 ಲಕ್ಷ ರೂ. ಮನೋಜ್‌ ಕುಮಾರ್‌ಗೆ ಆಡಿಟರ್‌ ಉದ್ಯೋಗಕ್ಕಾಗಿ 12 ಲಕ್ಷ ರೂ., ಹೇಮಂತ್‌ಗೆ ಮೀಟರ್‌ ರೀಡರ್‌ ಉದ್ಯೋಗಕ್ಕಾಗಿ 12 ಲಕ್ಷ ರೂ., ಧನುಷ್‌ ಕುಮಾರ್‌ಗೆ ಚಾಲಕ ಉದ್ಯೋಗಕ್ಕಾಗಿ 3ಲಕ್ಷ ರೂ. ಹೀಗೆ ಎಂಟು ಮಂದಿಗೆ ಕೆಲಸ ಕೊಡಿಸುತ್ತೇನೆ ಎಂದು 1.53 ಕೋಟಿ ರೂ. ಪಡೆದು ವಂಚಿಸಿದ್ದರು. ಆರೋ ಪಿಗಳಿಗೆ ಯಾವುದೇ ರಾಜಕೀಯ ವ್ಯಕ್ತಿಗಳಾಗಲಿ, ಪೊಲೀಸ್‌ ಅಧಿಕಾರಿಗಳಾಗಲಿ ಪರಿಚಯವಿಲ್ಲ. ಹಣ ಮಾಡುವ ಉದ್ದೇಶದಿಂದ ವಂಚಿಸಿರುವುದು ಗೊತ್ತಾ ಗಿದೆ ಎಂದು ಪೊಲೀಸರು ಹೇಳಿದರು

Advertisement
Advertisement

Udayavani is now on Telegram. Click here to join our channel and stay updated with the latest news.

Next