ಬೆಂಗಳೂರು: ವಿದೇಶಿ ಮಹಿಳೆಯ ಸೋಗಿನಲ್ಲಿ ಫೇಸ್‌ಬುಕ್ ಮೂಲಕ ಸೇಲ್ಸ್ ಮ್ಯಾನ್‌ನನ್ನು ಪರಿಚಯಿಸಿಕೊಂಡ ಸೈಬರ್ ಕಳ್ಳರು, ಭಾರತದಲ್ಲಿರುವ ಬಡವರಿಗೆ ಸಹಾಯ ಮಾಡುವ ನಿಟ್ಟಿನಲ್ಲಿ ಚಾರಿಟಿ ಫಂಡ್ ಕಳುಹಿಸುವುದಾಗಿ 5.40 ಲಕ್ಷ ರೂ. ವಂಚಿಸಿದ್ದಾರೆ.
ಜ್ಞಾನಭಾರತೀ ಲೇಔಟ್‌ನ ಮಂಜುನಾಥ್ (35) ವಂಚನೆಗೊಳಗಾದ ಸೇಲ್ಸ್‌ಮ್ಯಾನ್.
ಇತ್ತೀಚೆಗೆ ಮಂಜುನಾಥ್‌ಗೆ ಫೇಸ್‌ಬುಕ್‌ನಲ್ಲಿ ಎಡಿತ್ ವಿಲಿಯಂಮ್ಸ್ ಎಂಬ ವಿದೇಶಿ ಮಹಿಳೆ ಪರಿಚಯವಾಗಿದ್ದಳು. ಭಾರತದಲ್ಲಿರುವ ಬಡವರಿಗೆ ಹಾಗೂ ಅಂಧರಿಗೆ ಸಹಾಯ ಮಾಡುವ ನಿಟ್ಟಿನಲ್ಲಿ ನಿಮಗೆ 58 ಲಕ್ಷ ರೂ. ಚಾರಿಟಿ ಫಂಡ್ ಕಳುಹಿಸುತ್ತೇನೆ. ಈ ಪೈಕಿ ಶೇ.20ರಷ್ಟು ನಿಮಗೆ ನೀಡುವುದಾಗಿ ಹೇಳಿದ್ದಳು. ಬ್ರಿಟಿಷ್ ಪೌಂಡ್ಸ್ ಮೂಲಕ ಪಾರ್ಸೆಲ್ ಪಡೆಯುವ ಸಲುವಾಗಿ ಇ-ಮೇಲ್ ಐಡಿಯಿಂದ ಹಾಗೂ ಅಪರಿಚಿತ ಮೊಬೈಲ್ ನಂಬರ್‌ಗಳಿಂದ ದೂರುದಾರರನ್ನು ಸಂಪರ್ಕಿಸಿದ್ದರು.
ದೂರುದಾರರಿಗೆ ಪಾರ್ಸೆಲ್, ಐಸಿಐ ರಿಜಿಸ್ಟ್ರೇಷನ್, ಕನ್‌ವರ್ಷನ್, ಸಾಗಾಣಿಕೆ, ತೆರಿಗೆ, ವಿಮಾನ ಶುಲ್ಕಗಳನ್ನು ಪಾವತಿ ಸಬೇಕೆಂದು ಹಂತ-ಹಂತವಾಗಿ ಒಟ್ಟು 5.40 ಲಕ್ಷ ರೂ. ಅನ್ನು ವಿವಿಧ ಅಪರಿಚಿತ ಬ್ಯಾಂಕ್ ಖಾತೆಗಳಿಗೆ ಜಮೆ ಮಡುವಂತೆ ಸೂಚಿಸಿದ್ದಳು. ಆಕೆಯ ಮಾತಿನ ಮರುಳಾದ ಮಂಜುನಾಥ್ ಹಂತ-ಹಂತವಾಗಿ 5.40 ಲಕ್ಷ ರೂ. ಜಮೆ ಮಾಡಿದ್ದ. ಇದಾದ ಬಳಿಕ ಸಂಪರ್ಕಕ್ಕೂ ಸಿಗದೇ, ದುಡ್ಡನ್ನೂ ಹಿಂತಿರುಗಿಸದೇ ವಂಚಿಸಿದ್ದಾರೆ.