Advertisement
ಅದರಲ್ಲಿ 10,000 ರೂ.ಗಳ ಟಾಸ್ಕ್ ಮುಗಿಸಿದರೆ 4,000 ರೂ. ಲಾಭ ಬರುತ್ತದೆ ಎಂದು ತಿಳಿಸಲಾಗಿತ್ತು. ಅದರಂತೆ 10,000 ರೂ. ವರ್ಗಾವಣೆ ಮಾಡಿದರು. ಅವರ ಖಾತೆಗೆ 14,000 ರೂ. ಜಮೆಯಾಗಿರುವಂತೆ ತೋರಿಸಿದರು. ಬಳಿಕ ಮತ್ತೂಂದು ಇನ್‌ಸ್ಟಾಗ್ರಾಂ ಖಾತೆಯನ್ನು ಅನುಸರಿಸುವಂತೆ ತಿಳಿಸಿದರು. ಅದರಂತೆ ದೂರುದಾರರು ಅದನ್ನು ಅನುಸರಿಸಿದರು. ಅದರಲ್ಲಿ ಅವರ ಖಾತೆಗೆ 300 ರೂ. ಜಮೆಯಾಗುವಂತೆ ತೋರಿಸಿದರು. ಬಳಿಕ 10,000 ರೂ., 30,000 ರೂ. ವರ್ಗಾಯಿಸಿದರು. ಅವರ ಆ್ಯಪ್‌ನಲ್ಲಿದ್ದ ಖಾತೆಗೆ 56,000 ರೂ. ಜಮೆ ಆಗಿರುವಂತೆ ತೋರಿಸಲಾಯಿತು. ಆ ಮೊತ್ತವನ್ನು ದೂರುದಾರರು ತನ್ನ ಬ್ಯಾಂಕ್ ಖಾತೆಗೆ ವರ್ಗಾಯಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಈ ಬಗ್ಗೆ ವಿಚಾರಿಸಿದಾಗ ಅದನ್ನು ಪಡೆಯಲು ಮತ್ತೆ ಹಣ ವರ್ಗಾಯಿಸುವಂತೆ ತಿಳಿಸಿದರು. ದೂರುದಾರರು ಮತ್ತೆ 30,000 ರೂ. ವರ್ಗಾಯಿಸಿದರು. ಆದರೆ ಅವರ ಬ್ಯಾಂಕ್ ಖಾತೆಗೆ ಯಾವುದೇ ಹಣ ಜಮೆ ಆಗಿರಲಿಲ್ಲ. ಒಟ್ಟು 70,000 ರೂ. ವಂಚಿಸಲಾಗಿದೆ. Advertisement
ಪಾರ್ಟ್‌ಟೈಂ ಉದ್ಯೋಗ ಆಮಿಷ: 70,000 ರೂ. ವಂಚನೆ
11:49 PM May 20, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.