Advertisement

Fraud Case: ಆರೋಪಿ ರತೀಶ್‌ ಗೋವಾಕ್ಕೆ ಪರಾರಿ

07:51 PM May 16, 2024 | Team Udayavani |

ಮುಳ್ಳೇರಿಯ: ಕಾರಡ್ಕ ಅಗ್ರಿಕಲ್ಚರಿಸ್ಟ್‌ ವೆಲ್ಫೇರ್ ಕೋ-ಆಪರೇಟಿವ್‌ ಸೊಸೈಟಿಯ ಕಾರ್ಯದರ್ಶಿ ಕೆ.ರತೀಶ್‌ ನಡೆಸಿದ ಹಣಕಾಸು ವಂಚನೆ ಪ್ರಕರಣವನ್ನು ಕಾಸರಗೋಡು ಜಿಲ್ಲಾ ಕ್ರೈಂಬ್ರಾಂಚ್‌ ತನಿಖೆ ನಡೆಸಲಿದೆ. ಕ್ರೈಂಬ್ರಾಂಚ್‌ ಡಿವೈಎಸ್‌ಪಿ ಶಿಬು ಪಾಪಚ್ಚನ್‌ ನೇತೃತ್ವದಲ್ಲಿ ತಂಡಕ್ಕೆ ತನಿಖೆಯ ಹೊಣೆಗಾರಿಕೆ ವಹಿಸಿಕೊಡಲಾಗಿದೆ.

Advertisement

ಸೊಸೈಟಿಯ ಕಾರ್ಯದರ್ಶಿಯೂ, ಸಿಪಿಎಂ ಮುಳ್ಳೇರಿಯ ಲೋಕಲ್‌ ಸಮಿತಿ ಸದಸ್ಯನಾದ ಕೆ.ರತೀಶ್‌ ಸದಸ್ಯರಿಗೆ ತಿಳಿಯದೆ 4.76 ಕೋಟಿ ರೂ. ಸಾಲ ತೆಗೆದು ವಂಚಿಸಿದ್ದಾಗಿ ದೂರಲಾಗಿದೆ. ಇದರಂತೆ ಆದೂರು ಪೊಲೀಸರು ಕೇಸು ದಾಖಲಿಸಿ ತನಿಖೆ ನಡೆಸುತ್ತಿದ್ದಂತೆ ರತೀಶ್‌ ಕರ್ನಾಟಕಕ್ಕೆ ಪರಾರಿಯಾಗಿದ್ದನು. ಅಲ್ಲಿಂದ ಹಾಸನಕ್ಕೆ ತೆರಳಿ ಗೋವಾಕ್ಕೆ ತೆರಳಿದ್ದಾನೆಂದು ಸೂಚನೆಯಿದೆ. ಬೆಂಗಳೂರು ಸೈಬರ್‌ ಸೆಲ್‌ನ ಸಹಾಯದೊಂದಿಗೆ ನಡೆಸಿದ ತನಿಖೆಯಲ್ಲಿ ರತೀಶ್‌ ಕರ್ನಾಟಕದಿಂದ ಪರಾರಿಯಾಗಿರುವುದಾಗಿ ತಿಳಿದು ಬಂದಿದೆ. ಆದೂರು ಪೊಲೀಸರು ಕರ್ನಾಟಕ ಸಹಿತ ವಿವಿದೆಡೆ ಶೋಧ ನಡೆಸುತ್ತಿದ್ದಾರೆ.

ನಕಲಿ ದಾಖಲೆಗಳನ್ನು ಸೃಷ್ಟಿಸಿ ಸಹಕಾರಿ ಸಂಘದಿಂದ 4.76 ಕೋಟಿ ರೂ. ರತೀಶ್‌ ಲಪಟಾಯಿಸಿರುವುದಾಗಿ ಕೇಸು ದಾಖಲಿಸಲಾಗಿದೆ. ಬೆಂಗಳೂರು ಹಾಗು ವಯನಾಡಿನಲ್ಲಿ ರತೀಶ್‌ ಸ್ಥಳ ಖರೀದಿಸಿರುವುದಾಗಿ ಮಾಹಿತಿ ಲಭಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next