Advertisement

ಬಡಾಬಾಳು: ಕಾರು ಖರದಿಸಿ ಹಣ ನೀಡದೆ ವಂಚನೆ

08:03 PM Nov 03, 2022 | Team Udayavani |

ಸಿದ್ದಾಪುರ: ಸಿದ್ದಾಪುರ ಗ್ರಾಮದ ಬಡಾಬಾಳು ರಾಘವೇಂದ್ರ ಶೆಟ್ಟಿ (30) ಅವರು ಯಡಾಡಿ-ಮತ್ಯಾಡಿ ರಾಘವೇಂದ್ರ ಶೆಟ್ಟಿ ಅವರಿಗೆ ತನ್ನ ಮಾರುತಿ ಸ್ವಿಪ್ಟ್ ಕಾರನ್ನು 6,80,000 ರೂ. ಮಾರಾಟ ಮಾಡಿದರು. ಆರೋಪಿ ರಾಘವೇಂದ್ರ ಶೆಟ್ಟಿ ಅವರು ಕಾರಿನ ಮೇಲೆ ಮಂಗಳೂರು ಮಹೇಂದ್ರ ಕೊಟೇಕ್‌ ಬ್ಯಾಂಕ್‌ನಲ್ಲಿ ಸಾಲ ಮಾಡಿ, 5ಲಕ್ಷ ರೂ.ನೀಡಿದ್ದರು.

Advertisement

ಉಳಿದ 1,80,000ರೂ. ಹಣ ನೀಡದೆ ವಂಚಿಸಿದ್ದಾರೆ. ಕಾರಿನ ಮೇಲೆ ಮಾಡಿದ ಸಾಲದ ಕಂತು ಬ್ಯಾಂಕಿಗೂ ತುಂಬಿಸದೇ, ಕಾರನ್ನು ವಾಪಾಸು ಮಾಡದೆ ಮೋಸ ಮಾಡಿದ್ದಾರೆ ಎಂದು ಕಾರು ಮಾಲಕ ಬಡಬಾಳು ರಾಘವೇಂದ್ರ ಶೆಟ್ಟಿ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.

ಶಂಕರನಾರಾಯಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next