Advertisement

ಕೆಎಎಸ್‌ ಆಕಾಂಕ್ಷಿಗೆ ಬರೊಬ್ಬರಿ 59 ಲ.ರೂ. ವಂಚನೆ; ದೂರು ದಾಖಲು

11:22 PM Aug 07, 2022 | Team Udayavani |

ಬೆಂಗಳೂರು: ಕೆಎಎಸ್‌ ಪರೀಕ್ಷೆಯಲ್ಲಿ ಅನುಕೂಲಕರ ಅಂಕಗಳನ್ನು ನೀಡುವಂತೆ ಪರಿಚಿತ ಐಎಎಸ್‌ ಅಧಿಕಾರಿಗಳಿಗೆ ಶಿಫಾರಸು ಮಾಡಿಸಿ ತಹಶೀಲ್ದಾರ್‌ ಹುದ್ದೆ ಕೊಡಿಸುವುದಾಗಿ ನಂಬಿಸಿ ವ್ಯಕ್ತಿಯೊಬ್ಬ ಮಹಿಳೆಗೆ ಬರೊಬ್ಬರಿ 59.50 ಲಕ್ಷ ರೂ. ವಂಚಿಸಿದ್ದಾನೆ.

Advertisement

ಉತ್ತರ ಕರ್ನಾಟಕ ಮೂಲದ ಸಹಕಾರ ನಗರದ ನಿವಾಸಿ ಸವಿತಾ ಶಾಂತಪ್ಪ ಯಳಸಂಗೀಕರ್‌ ಕೊಟ್ಟ ದೂರಿನ ಆದಾರದ ಮೇಲೆ ವಿಜಯ ನಗರ ಠಾಣೆ ಪೊಲೀಸರು ಸಿದ್ದರಾಜ್‌ ಸುಭಾಷ್‌ ಚಂದ್ರ ಕಟ್ಟಿಮನಿ ವಿರುದ್ಧ ಎಫ್ಐಆರ್‌ ದಾಖಲಿಸಿದ್ದಾರೆ.

ಸ್ಫರ್ಧಾತ್ಮಕ ಪರೀಕ್ಷೆ ತರಬೇತಿಗಾಗಿ ಸವಿತಾ ವಿಜಯನಗರಕ್ಕೆ ಬಂದು ಪಿಜಿಯಲ್ಲಿ ವಾಸವಿದ್ದರು. ಸ್ನೇಹಿತೆ ಯರ ಮೂಲಕ ಸವಿತಾಗೆ ಸಿದ್ಧರಾಜು ಪರಿಚಯವಾಗಿತ್ತು. ನನಗೆ ಸಾಕಷ್ಟು ಮಂದಿ ಐಎಎಸ್‌ ಅಧಿಕಾರಿಗಳ ಪರಿಚಯವಿದೆ ಎಂದು ನಂಬಿಸಿದ್ದ. ಆತನ ಮಾತಿನ ಮೋಡಿಗೆ ಮರುಳಾದ ಸವಿತಾ ಹಣ ಕೊಡಲು ಒಪ್ಪಿದ್ದರು. ಆರೋಪಿ ಸಿದ್ದರಾಜು ಸೂಚನೆಯಂತೆ 2020 ಆಗಸ್ಟ್‌ನಿಂದ ಹಂತಹಂತವಾಗಿ ಆತನ ತಂದೆ ಹಾಗೂ ಸ್ನೇಹಿತನ ಖಾತೆಗೆ 15.50 ಲ.ರೂ. ವರ್ಗಾವಣೆ ಮಾಡಿದ್ದರು. ಬಳಿಕ ಸಿದ್ದರಾಜು ಐಎಎಸ್‌ ಅಧಿಕಾರಿಗಳು ಇನ್ನಷ್ಟು ಹಣಕ್ಕೆ ಬೇಡಿಕೆಯಿಟ್ಟಿದ್ದಾರೆ.

ಇನ್ನು 24 ಲಕ್ಷ ರೂ. ಕೊಟ್ಟರೆ ಕೆಲಸ ಗ್ಯಾರೆಂಟಿ ಎಂದು ನಂಬಿಸಿದ್ದು, ಅದರಂತೆ ಆ ಮೊತ್ತವನ್ನೂ ಸವಿತಾ ಆತನಿಗೆ ಕೊಟ್ಟಿದ್ದರು. ಬಳಿಕ ಹಲವು ಸಬೂಬುಗಳನ್ನು ಹೇಳಿದ್ದ ಆರೋಪಿ ಸವಿತಾ ಅವರಿಂದ ಪುನಃ 20 ಲಕ್ಷ ರೂ. ಲಪಟಾಯಿಸಿದ್ದ. ಒಟ್ಟು 59.50 ಲಕ್ಷ ರೂ. ಪಡೆದಿದ್ದ ಸಿದ್ಧರಾಜು ವರ್ಷಗಳೇ ಉರುಳಿದರೂ ಕೆಲಸವನ್ನೂ ಕೊಡದೆ, ಹಣವನ್ನೂ ಮರಳಿಸದೆ ವಂಚಿಸಿದ್ದಾನೆ ಎಂದು ಸವಿತಾ ಪೊಲೀಸರಿಗೆ ನೀಡಿರುವ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next