Advertisement

ಉಡುಪಿ : ಸಾಲ ನೀಡುವುದಾಗಿ ನಂಬಿಸಿ ವೈದ್ಯಾಧಿಕಾರಿಗೆ 67,650 ರೂ. ವಂಚನೆ

08:18 PM Aug 21, 2021 | Team Udayavani |

ಉಡುಪಿ : ಲೋನ್‌ ನೀಡುವುದಾಗಿ ನಂಬಿಸಿ ವೈದ್ಯಾಧಿಕಾರಿಯೊಬ್ಬರನ್ನು ವಂಚಿಸಿದ ಘಟನೆ ನಡೆದಿದೆ.

Advertisement

ಅಜ್ಜರಕಾಡು ನಿವಾಸಿ, ಶಿರ್ವಾದಲ್ಲಿ ವೈದ್ಯಾಧಿಕಾರಿಯಾಗಿದ್ದ ಡಾ| ಕೃಷ್ಣಮೂರ್ತಿ ಟಿ. (63) ಅವರು ಮಗನ ಶಿಕ್ಷಣಕ್ಕಾಗಿ ಹಣ ಹೊಂದಾಣಿಕೆ ಮಾಡುತ್ತಿರುವಾಗ ಇವರ ಮೊಬೈಲ್‌ಗೆ ಲೋನ್‌ ನೀಡುವುದಾಗಿ ಸಂದೇಶ ಬಂದಿತ್ತು. ಈ ಬಗ್ಗೆ ಗೂಗಲ್‌ನ ಲೋನ್‌ ಆ್ಯಪ್‌ನಲ್ಲಿ ಹುಡುಕಿದ್ದು ಅಲ್ಲಿ ಮುದ್ರಾ ಲೋನ್‌ ವೆಬ್‌ಸೈಟ್‌ ಸಿಕ್ಕಿದ್ದು, ಆ ನಕಲಿ ವೆಬ್‌ಸೈಟನ್ನು ಅಸಲಿ ವೆಬ್‌ಸೈಟ್‌ ಎಂದು ನಂಬಿ ಅವರು ಹೆಸರು ಮತ್ತು ಪೋನ್‌ ನಂಬರನ್ನು ದಾಖಲಿಸಿದ್ದರು. ಆಗ ಯಾರೋ ಅಪರಿಚಿತರು 9813024637 ಮತ್ತು 9871668167 ಸಂಖ್ಯೆಯಿಂದ ಕರೆ ಮಾಡಿ ಮುದ್ರಾ ಲೋನ್‌ ಪರವಾಗಿ ಮಾತನಾಡುತ್ತಿರುವುದಾಗಿ ತಿಳಿಸಿ 25 ಲ.ರೂ.ವರೆಗೆ ಲೋನ್‌ ನೀಡುವುದಾಗಿ ನಂಬಿಸಿ ಅವರ ದಾಖಲೆಗಳನ್ನು ಆನ್‌ಲೈನ್‌ ಈ ಮೇಲ್‌ pmegpmudragovt.org@gmail.com ಮೂಲಕ ಪಡೆದುಕೊಂಡು ಅನಂತರ ಪ್ರೊಸೆಸ್‌ ಚಾರ್ಜ್‌, ಇನ್ಸುರೆನ್ಸ್‌ ಚಾರ್ಜ್‌ ಇತ್ಯಾದಿಗಳಿಗೆ ಹಣ ಕಟ್ಟುವಂತೆ ತಿಳಿಸಿದ್ದರು.

ಇದನ್ನೂ ಓದಿ :60 ವರ್ಷ ಮೇಲ್ಪಟ್ಟವರಿಗೆ ಲಸಿಕೆ ಪೂರ್ಣಗೊಳಿಸಿ :ಅಧಿಕಾರಿಗಳಿಗೆ ಉಡುಪಿ ಜಿಲ್ಲಾಧಿಕಾರಿ ಸೂಚನೆ

ಜು.13ರಿಂದ 16ರ ತನಕ ಗೂಗಲ್‌ ಪೇ ಮೂಲಕ ಹಂತ-ಹಂತವಾಗಿ ಒಟ್ಟು 67,650ರೂ. ಹಣವನ್ನು ಡಾ| ಕೃಷ್ಣಮೂರ್ತಿ ಟಿ. ಅವರಿಂದ ಆರೋಪಿಗಳು ವರ್ಗಾಯಿಸಿಕೊಂಡಿದ್ದರು. ಇವರಿಗೆ ಸಾಲವನ್ನು ನೀಡಿದೇ, ಕಟ್ಟಿದ ಹಣವನ್ನು ನೀಡದೇ ಮೋಸ ಮಾಡಿದ್ದಾರೆ ಎನ್ನಲಾಗಿದೆ.

ಈ ಕುರಿತು ಸೆನ್‌ ಅಪರಾಧ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next