Advertisement
ನಗರದ ಐಸ್‌ಕ್ರೀಂ ಪಾರ್ಲರ್‌ನಲ್ಲಿ ಕೆಲಸ ಮಾಡುತ್ತಿದ್ದ ಅನಿಲ್ ಎನ್ನುವವರಿಗೆ ಪರಿಚಯವಾಗಿದ್ದ ಪ್ರಕಾಶ್ ಪೂಜಾರಿ ಎಂಬಾತ ತಾನು ಮುದ್ರಾ ಯೋಜನೆಯ ಏಜೆಂಟ್ ಎಂದು ಪರಿಚಯಿಸಿ ಸಾಲ ಕೊಡಿಸುತ್ತೇನೆ ಎಂದು ತಿಳಿಸಿದ್ದಾನೆ. ಅನಿಲ್ ಅವರು ಬೇಡ ಎಂದರೂ, ವಿನಯದಿಂದ ಮಾತನಾಡಿ ಹಲವರಿಗೆ 15 ಲಕ್ಷ ರೂ. ವರೆಗೆ ಸಾಲ ತೆಗೆಸಿಕೊಟ್ಟಿದ್ದೇನೆ ಎಂದು ಹೇಳಿದ್ದಾನೆ. 15 ಲಕ್ಷ ರೂ. ಸಾಲದ ಖರ್ಚಿಗೆ 1.50 ಲಕ್ಷ ರೂ. ನೀಡಬೇಕು, ಸಾಲ ಮಂಜೂರು ಆಗದೇ ಇದ್ದಲ್ಲಿ ಹಣ ವಾಪಸು ನೀಡುವುದಾಗಿಯೂ ತಿಳಿದ್ದಾನೆ.
ಇಬ್ಬರು ಸೇರಿ ಅನಿಲ್ ಅವರಿಂದ 1.50 ಲಕ್ಷ ರೂ. ಮತ್ತು ಇತರ ಸಾರ್ವಜನಿಕರಾದ ದಿಶಾ ಡಿ. ನಾಯಕ್ ಅವರಿಂದ 1.50 ಲಕ್ಷ ರೂ., ಸುನೀಲ್ ಎಂಬವರಿಂದ 50 ಸಾವಿರ ರೂ., ವೇದಾ ಅವರಿಂದ 1 ಲಕ್ಷ ರೂ., ಸ್ವಾತಿ ಎಂ. 4.50 ಲಕ್ಷ ರೂ., ನರೇಂದ್ರ ಶೆಟ್ಟಿ 5 ಲಕ್ಷ ರೂ., ವೀಣಾ ನಾಯಕ್ 1 ಲಕ್ಷ ರೂ., ಮಹೇಶ್ ಮೇಸ್ತ 1 ಲಕ್ಷ ರೂ., ಕಾರ್ತಿಕ್ 1 ಲಕ್ಷ ರೂ., ಲೀಲಾವತಿ 2 ಲಕ್ಷ ರೂ., ನಿತ್ಯಾನಂದ ಮೇಸ್ತ 1.50 ಲಕ್ಷ ರೂ. ಹೀಗೆ ಒಟ್ಟು 20.50 ಲಕ್ಷ ರೂ. ಹಣವನ್ನು ಪಡೆದು ವಂಚಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.