ಬೆಂಗಳೂರು: ಮೊಬೈಲ್‌ನಿಂದ ಅಶ್ಲೀಲ ಸಂದೇಶ ಕಳುಹಿಸಿರುವ ದೂರು ದಾಖಲಾಗಿದ್ದು, ವೆರಿಫಿಕೇಶನ್‌ಗಾಗಿ ದುಡ್ಡು ನೀಡಬೇಕೆಂದು ವ್ಯಕ್ತಿಯೊಬ್ಬರಿಂದ ಸೈಬರ್ ಕಳ್ಳರು 5.25 ಲಕ್ಷ ರೂ. ವಂಚಿಸಿದ್ದಾರೆ.
ಎಚ್‌ಎಸ್‌ಆರ್ ಲೇಔಟ್‌ನ ನಿವಾಸಿ ಅಗಾಥಿಯನ್ (53) ವಂಚನೆಗೊಳಗಾದವರು.
ಅ.4ರಂದು ಅಪರಿಚಿತರು ಅಗಾಥಿಯನ್‌ಗೆ ಕರೆ ಮಾಡಿ ಫೆಡೆಕ್ಸ್‌ನಿಂದ ಮಾತನಾಡುತ್ತಿದ್ದು, ವೆರಿμಕೇಶನ್ ಮಾಡುತ್ತಿರುವುದಾಗಿ ತಿಳಿಸಿದ್ದರು. ನಿಮ್ಮ ಆಧಾರ್‌ನಿಂದ ಟ್ಯಾಗ್ ಆಗಿರುವ ಮೊಬೈಲ್ ನಂಬರ್‌ನಿಂದ ಅಶ್ಲೀಲ ಮೆಸೆಜ್ ಮಾಡುತ್ತಿದ್ದೀರಿ ಎಂದು ತಿಳಿಸಿದ್ದರು.
ನಿಮ್ಮ ವಿರುದ್ಧ ಮುಂಬೈ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ವೆರಿಫಿಕೇಶನ್‌ಗೆ ಹಣ ಹಾಕಬೇಕು. ಕೆಲ ಹೊತ್ತಿನಲ್ಲೇ ಹಣ ಮರಳಿಸುವುದಾಗಿ ಅಗಾಥಿಯನ್‌ನಿಂದ ಹಂತವಾಗಿ 5.25 ಲಕ್ಷ ರೂ. ಅನ್ನು ಬ್ಯಾಂಕ್ ಖಾತೆಗೆ ಹಾಕಿಸಿಕೊಂಡಿದ್ದರು. ಇದಾದ ಬಳಿಕ ಕರೆ ಮಾಡಿದ್ದ ಅಪರಿಚಿತರು ದುಡ್ಡು ಮರಳಿಸದಿದ್ದಾಗ ಅಗಾಥಿಯನ್ ಅವರ ನಂಬರ್‌ಗೆ ಕರೆ ಮಾಡಿದ್ದರು. ಆ ವೇಳೆ ಅವರು ಸಂಪರ್ಕಕ್ಕೆ ಸಿಕ್ಕಿರಲಿಲ್ಲ. ಅನುಮಾನದ ಮೇರೆಗೆ ಅಗಾಥಿಯನ್ ಈ ಬಗ್ಗೆ ಪರಿಶೀಲನೆ ನಡೆಸಿದಾಗ ಇದು ಸೈಬರ್ ಕಳ್ಳರ ಕೈ ಚಳಕ ಎಂಬುದು ಗೊತ್ತಾಗಿದೆ.