ಮಂಗಳೂರು: ಬಹುಮಾನ ಗೆದ್ದಿರುವುದಾಗಿ ಕರೆ ಮಾಡಿ ವೈದ್ಯಕೀಯ ವಿದ್ಯಾರ್ಥಿನಿಗೆ ವಂಚಿಸಿರುವ ಬಗ್ಗೆ ಪ್ರಕರಣ ದಾಖಲಾಗಿದೆ.
ವಿದ್ಯಾರ್ಥಿನಿಯೋರ್ವಳಿಗೆ ಜೂ.3ರಂದು 7794013522ನಿಂದ ಅಪರಿಚಿತನೋರ್ವ ಕರೆ ಮಾಡಿ “ನೀವು ಐ ಫೋನ್ ಪ್ರೊ-12 ಗೆದ್ದಿದ್ದೀರಿ. ಅದನ್ನು ಕಳುಹಿಸಿಕೊಡಲು ಜಿಎಸ್‌ಟಿ ಪಾವತಿಸಬೇಕು’ ಎಂದು ಹೇಳಿದರು. ಇದನ್ನು ನಂಬಿದ ವಿದ್ಯಾರ್ಥಿನಿ ಗೂಗಲ್‌ಪೇ ಮೂಲಕ ಹಂತ ಹಂತವಾಗಿ ಒಟ್ಟು 98,972 ರೂ. ಕಳುಹಿಸಿದ್ದರು. ಅನಂತರ ಅಪರಿಚಿತ ಮತ್ತಷ್ಟು ಹಣವನ್ನು ಕಳುಹಿಸಿ ಸ್ಕ್ರೀನ್ ಶಾಟ್ ಕೂಡ ಕಳಿಸುವಂತೆ ಹೇಳಿದ. ಅನಂತರ ವಿದ್ಯಾರ್ಥಿನಿಗೆ ತಾನು ಮೋಸ ಹೋಗಿರುವುದು ಗೊತ್ತಾಗಿದೆ.
ನಕಲಿ ಫೇಸ್‌ಬುಕ್ ಖಾತೆಯಿಂದ
ಸಂದೇಶ ಕಳುಹಿಸಿ ವಂಚನೆ
ಮಂಗಳೂರು: ನಕಲಿ ಫೇಸ್‌ಬುಕ್ ಖಾತೆಯಿಂದ ಮೆಸೆಂಜರ್ ಮೂಲಕ ಸಂದೇಶ ಕಳುಹಿಸಿ ಹಣ ವರ್ಗಾಯಿಸಿಕೊಂಡು ವಂಚಿಸಿರುವ ಬಗ್ಗೆ ನಗರದ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದೂರುದಾರ ವ್ಯಕ್ತಿಗೆ ಅವರು ಈ ಹಿಂದೆ ಕೆಲಸ ಮಾಡಿಕೊಂಡಿದ್ದ ಶಾಲೆಯ ಪ್ರಾಂಶುಪಾಲರ ಹೆಸರಿರುವ ನಕಲಿ ಫೇಸ್‌ಬುಕ್ ಖಾತೆಯಿಂದ ಯಾರೋ ಅಪರಿಚಿತ ವ್ಯಕ್ತಿ ಮೆಸೆಂಜರ್ ಮೂಲಕ “ಸ್ನೇಹಿತನ ಮಗ ತುರ್ತುನಿಗಾ ಘಟಕದಲ್ಲಿದ್ದು ತುರ್ತಾಗಿ ಒಂದು ಲ.ರೂ. ಹಣದ ಅಗತ್ಯವಿದೆ’ ಎಂದು ಸಂದೇಶ ಕಳುಹಿಸಿದ್ದ. ಇದನ್ನು ನಂಬಿದ ದೂರುದಾರ ವ್ಯಕ್ತಿಯು ಅಪರಿಚಿತ ವ್ಯಕ್ತಿ ಕಳುಹಿಸಿದ್ದ ಗೂಗಲ್ ಪೇ ಸಂಖ್ಯೆ 7576043817ಗೆ ಹಂತ ಹಂತವಾಗಿ ಒಟ್ಟು 80,000 ರೂ.ಗಳನ್ನು ವರ್ಗಾಯಿಸಿದ್ದಾರೆ. ಅನಂತರ ಇದೊಂದು ನಕಲಿ ಫೇಸ್‌ಬುಕ್ ಖಾತೆ ಮೂಲಕ ನಡೆದಿರುವ ವಂಚನೆ ಎಂಬುದಾಗಿ ಅವರಿಗೆ ಗೊತ್ತಾಗಿದೆ.
Related Articles