ಮಂಗಳೂರು: ಬ್ಯಾಂಕ್‌ನವರೆಂದು ಹೇಳಿ ಕರೆ ಮಾಡಿ ಒಟಿಪಿ ಪಡೆದು ಹಣ ವರ್ಗಾಯಿಸಿಕೊಂಡು ವಂಚಿಸಿರುವ ಬಗ್ಗೆ ಪ್ರಕರಣ ದಾಖಲಾಗಿದೆ.
ಹಳೆಯಂಗಡಿಯ ಬ್ಯಾಂಕ್‌ನಲ್ಲಿ ಖಾತೆ ಹೊಂದಿರುವ ದೂರುದಾರ ವ್ಯಕ್ತಿಯೋರ್ವರಿಗೆ ಎ. 13ರಂದು 8895427884 ಸಂಖ್ಯೆಯಿಂದ ಅಪರಿಚಿತ ವ್ಯಕ್ತಿ “ನಿಮ್ಮ ಬ್ಯಾಂಕ್ ಖಾತೆ ರದ್ದಾಗಿದ್ದು, ಕೆವೈಸಿ ಅಪ್‌ಡೇಟ್ ಮಾಡಬೇಕಾಗಿದೆ. ವಿವರಕ್ಕೆ 09046400347ಗೆ ಕರೆ ಮಾಡಿ ಎಂದು ಸಂದೇಶ ಕಳುಹಿಸಿದ್ದ. ಅದಕ್ಕೆ ಕರೆ ಮಾಡಿದಾಗ ಅಪರಿಚಿತ ವ್ಯಕ್ತಿ ದೂರುದಾರ ವ್ಯಕ್ತಿಯ ದೊಡ್ಡಪ್ಪನ ಬ್ಯಾಂಕ್ ಖಾತೆಯ ವಿವರ ಕೇಳಿದ. ಬಳಿಕ ಅವರ ಬ್ಯಾಂಕ್ ಖಾತೆಯ ನಾಮಿನಿಯ ಹೆಸರು ಕೇಳಿದ. ಆಗ ದೂರುದಾರ ವ್ಯಕ್ತಿ ಅವರ ದೊಡ್ಡಮ್ಮನ ಹೆಸರು ತಿಳಿಸಿದರು.
ಅಪರಿಚಿತ ವ್ಯಕ್ತಿ ದೂರುದಾರ ವ್ಯಕ್ತಿಯ ದೊಡ್ಡಮ್ಮನ ಬ್ಯಾಂಕ್ ಖಾತೆಯ ವಿವರಗಳನ್ನು ಪಡೆದುಕೊಂಡ. ಅನಂತರ ಅಪರಿಚಿತ ವ್ಯಕ್ತಿ ದೂರುದಾರ ವ್ಯಕ್ತಿಯ ದೊಡ್ಡಮ್ಮನಿಗೆ ಕರೆ ಮಾಡಿದ. ಬಳಿಕ ಒಟಿಪಿ ನೀಡುವಂತೆ ಕೇಳಿದ. ಒಟಿಪಿ ಪಡೆದ ಅನಂತರ ಹಂತ ಹಂತವಾಗಿ 1,61,353 ರೂ. ವರ್ಗಾಯಿಸಿಕೊಂಡು ವಂಚಿಸಿದ್ದಾನೆ ಎಂದು ಮಂಗಳೂರು ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.