Advertisement

ವಾಟ್ಸ್‌ಆ್ಯಪ್‌ ಫ್ರೆಂಡ್ಸ್‌ನಿಂದ ವಂಚನೆ: ಇಬ್ಬರ ಬಂಧನ

09:55 PM Apr 22, 2021 | Team Udayavani |

ಕೊಪ್ಪಳ: ತಾಲೂಕಿನ ಬೆಳವಿನಾಳ ಗ್ರಾಮದ ಬಸವರಾಜ ಕನಕಗಿರಿ ಅವರಿಗೆ ಬೆಂಗಳೂರಿನ ಇಬ್ಬರು ವ್ಯಕ್ತಿಗಳು ವಾಟ್ಸ್‌ ಆ್ಯಪ್‌ನಲ್ಲಿ ಪರಿಚಯವಾಗಿ ಅವರಿಂದ 30,600 ರೂ. ಪಡೆದು ಮೋಸ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಪ್ಪಳ ಸೈಬರ್‌ ಠಾಣೆಯ ತಂಡ ಎಸ್‌ಪಿ ಮಾರ್ಗದರ್ಶನದಲ್ಲಿ ಹಣ ಪಡೆದು ವಂಚಿಸಿದ ಆರೋಪಿಗಳನ್ನು ಬಂಧಿಸಿದೆ.

Advertisement

ಬಂಧಿತರಿಂದ 21 ಲಕ್ಷ ರೂ. ಮೌಲ್ಯದ ವಸ್ತು ವಶಕ್ಕೆ ಪಡೆದಿದ್ದಾರೆ. ಬೆಂಗಳೂರು ಹಾಗೂ ಶಿವಮೊಗ್ಗಾದ ಟಿ.ಸಿ. ಚನ್ನಬಸಪ್ಪ, ಚೇತನಾ ಬಂ ಧಿತ ಆರೋಪಿಗಳು. ಈ ಆರೋಪಿಗಳು ಬೆಳವಿನಹಾಳ ಗ್ರಾಮದ ಬಸವರಾಜ ಕನಕಗಿರಿ ಅವರೊಂದಿಗೆ ವಾಟ್ಸ್‌ಆ್ಯಪ್‌ ಮೂಲಕ ಪರಿಚಯವಾಗಿ ಮೆಸೆಜ್‌ ಕಳಿಸಿದ್ದಾರೆ. ಈ ಪರಿಚಯದಿಂದ ಬಸವರಾಜ ಅವರಿಂದ ಹಂತ ಹಂತವಾಗಿ ಗೂಗಲ್‌ ಪೇ ಮೂಲಕ 30,600 ರೂ. ಹಣ ಪಡೆದಿದ್ದಾರೆ.

ವಂಚನೆಗೆ ಒಳಗಾದ ಬಸವರಾಜ ದೂರು ನೀಡಿದ ಹಿನ್ನೆಲೆಯಲ್ಲಿ ಕೊಪ್ಪಳ ಸೈಬರ್‌ ಪೊಲೀಸ್‌ ಠಾಣೆಯು ಎಸ್ಪಿ ಟಿ. ಶ್ರೀಧರ್‌, ಅಧಿ ಕಾರಿಗಳಾದ ಚಂದ್ರಶೇಖರ ಹರಿಹರ ಅವರು ತಾಂತ್ರಿಕ ಹಾಗೂ ವೈಜ್ಞಾನಿಕವಾಗಿ ಪ್ರಕರಣ ಬೇಧಿಸಿದ್ದು ಇಬ್ಬರು ಆರೋಪಿಗಳನ್ನು ಬಂ ಧಿಸಿದ್ದಾರೆ. ಬಂತರನ್ನು ವಿಚಾರಣೆಗೆ ಒಳಪಡಿಸಿದಾಗ ಇದಲ್ಲದೇ ಇನ್ನಿತರ ಪ್ರಕರಣಗಳಲ್ಲೂ ತಾವು ಭಾಗಿಯಾಗಿರುವ ಕುರಿತು ತಿಳಿಸಿದ್ದಾರೆ.

ಮೋಸ ಮಾಡಿದವರ ಹಣದಿಂದ ಕಾರು, ಬಂಗಾರ ಹಾಗೂ ಮೊಬೈಲ್‌ ಖರೀದಿಸಿದ್ದಾರೆ. ಇವರ ಬಳಿಯಿದ್ದ 2 ಮೊಬೈಲ್‌, 177 ಗ್ರಾಂ ಚಿನ್ನ, 1 ಕಾರು, 2.25 ಲಕ್ಷ ರೂ. ನಗದು ಸೇರಿದಂತೆ ಒಟ್ಟು 21 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next