ಬೆಂಗಳೂರು: ಪಾರ್ಟ್ ಟೈಮ್ ಕೆಲಸವಿದೆ ಎಂದು ಸಂದೇಶ ಕಳುಹಿಸಿ 1,80 ಲಕ್ಷರೂ. ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.
ಕಾಡುಗೋಡಿ ನಿವಾಸಿ ವಂಶಿ ಎಂಬವರು ನೀಡಿದ ದೂರಿನ ಮೇರೆಗೆ ವೈಟ್ ಫೀಲ್ಡ್ ವಿಭಾಗ ಸೆನ್ ಠಾಣೆ ಪೊಲೀಸರು ಅಪರಿಚಿತ ವ್ಯಕ್ತಿಗಳ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ. ಕೆಲ ದಿನಗಳ ಹಿಂದೆ ವಂಶಿ ಅವರಿಗೆ ಪಾರ್ಟ್‌ಟೈಮ್ ಜಾಬ್ ಸಂದೇಶ ಬಂದಿದ್ದು, ಅದನ್ನು ತೆರೆದಾಗ ನೇರವಾಗಿ ವಾಟ್ಸ್‌ಆ್ಯಪ್‌ಗೆ ರಿಡೈರೆಕ್ಟ್ ಆಗಿದೆ.
ಆಗ ವ್ಯಕ್ತಿ ಯೊಬ್ಬ ಮತ್ತೂಂದು ಲಿಂಕ್‌ವೊಂದು ಕಳುಹಿಸಿದ್ದಾನೆ. ನಂತರ ಕೆಲವೊಂದು ಪ್ರಶ್ನೆಗಳನ್ನು ಕೇಳುತ್ತಾ, ಟಾಸ್ಕ್ಗಳನ್ನು ಕೊಡುತ್ತೇನೆ. ಅದಕ್ಕೆ ಅರ್ಧದಷ್ಟು ಹಣ ಕೊಟ್ಟು ಟಾಸ್ಕ್ ಮುಕ್ತಾಯಗೊಳಿಸಬೇಕು.
ನಂತರ ನಿಮ್ಮ ಕಮಿಷನ್ ಮತ್ತು ಹಣವನ್ನು ಪಡೆಯುತ್ತಿರಿ ಎಂದು ನಂಬಿಸಿದ್ದಾನೆ. ಹೀಗಾಗಿ ವಂಶಿ ಅವರು ತಮ್ಮ ವಿವಿಧ ಖಾತೆಯಿಂದ 1,80 ಲಕ್ಷ ರೂ. ವರ್ಗಾವಣೆ ಮಾಡಿ, ಟಾಸ್ಕ್ ಪೂರ್ಣಗೊಳಿಸಿದ್ದಾರೆ. ಅನಂತರ ಯಾವುದೇ ಹಣ ಬಾರದಿಂದ ವಂಚನೆಗೊಳಗಾಗಿರುವುದು ಗೊತ್ತಾಗಿದೆ. ಈ ಸಂಬಂಧ ದೂರು ನೀಡಿದ್ದಾರೆ ಎಂದು ಸೆನ್ ಠಾಣೆ ಪೊಲೀಸರು ಹೇಳಿದರು.
ಎಚ್ಚರಿಕೆ: ಯಾವುದೇ ಅನುಮಾನಾಸ್ಪದ ಕರೆಗಳು, ಕ್ಯೂಆರ್‌ಕೋಡ್‌ಗಳು ಬಂದಲ್ಲಿ ಕೂಡಲೇ ಸಮೀಪದ ಸೈಬರ್ ಠಾಣೆಯನ್ನು ಸಂಪರ್ಕಿಸಿ. 112ಕ್ಕೆ ಕರೆ ಮಾಡಿ.