Advertisement

ಕಾಂಗ್ರೆಸ್‌ ಮುಖಂಡನಿಂದ ವಂಚನೆ; ದೂರು ದಾಖಲು

01:10 PM Jul 08, 2019 | Team Udayavani |

ಕೆ.ಆರ್‌.ಪೇಟೆ: ರಾಜ್ಯ ಕೆಪಿಸಿಸಿ ಹಿಂದುಳಿದ ವಿಭಾಗದ ಪ್ರಧಾನ ಕಾರ್ಯದರ್ಶಿ ಕಿರಣ್‌ಕುಮಾರ್‌ ಅಮಾಯಕ ಜನರಿಗೆ ಕೆಲಸ ಕೊಡಿಸುವುದಾಗಿ, ವರ್ಗಾವಣೆ ಮಾಡಿಸುವುದಾಗಿ, ಗುತ್ತಿಗೆ ಕೊಡಿಸುವುದಾಗಿ ನಂಬಿಸಿ ಲಕ್ಷಾಂತರ ರೂ. ಪಡೆದುಕೊಂಡು ವಂಚಿಸುತ್ತಿವುದಾಗಿ ಅನ್ಯಾಯಕ್ಕೆ ಒಳಗಾದವರು ಠಾಣೆಗೆ ದೂರು ನೀಡಿದ್ದಾರೆ.

Advertisement

ದೇವರಾಜು ಅರಸು ಹಿಂದುಳಿದ ವೇದಿಕೆಯ ತಾಲೂಕು ಅಧ್ಯಕ್ಷ ಕೆ.ಮುರುಳಿಧರ್‌ ಈ ಬಗ್ಗೆ ಮಾತನಾಡಿ, ಸುಮಾರು ಎರಡು ವರ್ಷಗಳ ಹಿಂದೆ ಕಿರಣ್‌ಕುಮಾರ್‌ ತಾವು ಕೆಪಿಸಿಸಿ ಹಿಂದುಳಿದ ವಿಭಾಗದ ಪ್ರಧಾನ ಕಾರ್ಯದರ್ಶಿ ನನಗೆ ಅಂದಿನ ಸಿಎಂ ಸಿದ್ದರಾಮಯ್ಯನವರು ಹತ್ತಿರದ ಸಂಬಂಧಿಯಾಗಬೇಕು, ಎಐಸಿಸಿ ಅಧ್ಯಕ್ಷ ರಾಹುಲ್ಗಾಂದಿ ನನ್ನ ಆತ್ಮೀಯ ಸ್ನೇಹಿತರು, ಜಿ.ಪರಮೇಶ್ವರ್‌ ಸೇರಿದಂತೆ ರಾಜ್ಯದ ಕಾಂಗ್ರೆಸ್‌ ಮುಖಂಡರು ನನಗೆ ಆತ್ಮೀಯರಾಗಿದ್ದಾರೆ. ಹೀಗಾಗಿ ಒಂದುಮಾತು ಹೇಳಿದರೆ ಸಾಕು, ಯಾರನ್ನು ಎಲ್ಲಿಗೆ ಬೇಕಾದರೂ ವರ್ಗಾವಣೆ ಮಾಡುತ್ತಾರೆ. ಸರ್ಕಾರಿ ಕೆಲಸವನ್ನು ಕೊಡಿಸುತ್ತಾರೆ ಎಂದು ತಾಲೂಕಿನಲ್ಲಿ ಸುಳ್ಳು ಸುದ್ಧಿ ಹಬ್ಬಿಸಿ ಎಲ್ಲರನ್ನು ನಂಬಿಸಿದ್ದರು.

ಸರ್ಕಾರಿ ಕೆಲಸ ಕೊಡಿಸುತ್ತಾರೆ ಎಂದು ನಂಬಿದ ತಾಲೂಕಿನ ತೇಗನಹಳ್ಳಿ ಗ್ರಾಮದ ಶಿವರಾಜ್‌ ಎಂಬುವವರಿಂದ ಎರಡು ಲಕ್ಷ ಪಡೆದುಕೊಂಡಿದ್ದರು. ತೆಂಗಿನಘಟ್ಟ ಗ್ರಾಮದ ಮಾದೇಶ್‌ ಮತ್ತು ಮಳ್ಳವಳ್ಳಿ ಯತ್ತೀಶ್‌ ಸರ್ಕಾರಿ ಕೆಲಸ ಕೊಡಿಸುತ್ತಾರೆ ಎಂದು ಹಣ ನೀಡಿದ್ದರು. ವಿದ್ಯುತ್‌ ಗುತ್ತಿಗೆದಾರ ಮಧು ರವರಿಗೆ ವಿದ್ಯುತ್‌ ಗುತ್ತಿಗೆ ಕೊಡಿಸುವುದಾಗಿ ನಾಲ್ಕು ಲಕ್ಷ ಹಣ ಪಡೆದುಕೊಂಡಿದ್ದಾರೆ. ಆದರೆ ಹಣ ಪಡೆದು ಯಾರಿಗೂ ಯಾವುದೇ ಕೆಲಸಮಾಡಿಸಿ ಕೊಡದೇ ಮೊಬೈಲ್ ಸ್ವಿಚ್ಆಫ್ ಮಾಡಿಕೊಂಡು ಜನರಿಗೆ ಎರಡು ವರ್ಷಗಳಿಂದ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಕೆಲವರು ಪಟ್ಟಣ ಪೊಲೀಸ್‌ ಠಾಣೆಗೆ ಲಿಖೀತ ದೂರು ನೀಡಿದ್ದಾರೆ. ಈಗ ವಿದ್ಯುತ್‌ ಗುತ್ತಿಗೆದಾರ ಮಧು ರವರು ಕಿರಣ್‌ಕುಮಾರ್‌ ರವರಿಂದ ನಾಲ್ಕು ಲಕ್ಷ ರೂ. ಕಳೆದುಕೊಂಡಿರುವ ಬಗ್ಗೆ ತಡವಾಗಿ ಠಾಣೆಗೆ ದೂರು ನೀಡಿದ್ದಾರೆ.

ರಾಜ್ಯ ಕಾಂಗ್ರೆಸ್‌ ಅಧ್ಯಕ್ಷರು ಇಂತಹ ವಂಚಕರನ್ನು ಪಕ್ಷದಿಂದ ಉಚ್ಚಾಟನೆ ಮಾಡಬೇಕು. ಸರ್ಕಾರ ಈ ವಂಚಕ ಕಿರಣ್‌ಕುಮಾರ್‌ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಿ ವಂಚನೆಗೆ ಒಳಗಾದವರಿಗೆ ನ್ಯಾಯ ಕೊಡಿಸಬೇಕು ಎಂದು ಮುರುಳಿಧರ್‌ ಒತ್ತಾಯಿಸಿದರು. ಈ ಸಮಯದಲ್ಲಿ ವಿದ್ಯುತ್‌ ಗುತ್ತಿಗೆದಾರ ಮಧು ್ದಹಾಜರಿದರು.

Advertisement

Udayavani is now on Telegram. Click here to join our channel and stay updated with the latest news.

Next