ಬೆಂಗಳೂರು: ಯುಪಿಐ ಮೂಲಕ ಹಣ ಪಾವತಿಸಿ ಮೊಬೈಲ್‌ನಲ್ಲಿ ನಕಲಿ ರಶೀದಿ ತೋರಿಸಿ ಚಿನ್ನಾಭರಣ ಮಳಿಗೆ ಮಾಲೀಕನಿಗೆ ಲಕ್ಷಾಂತರ ರೂ. ವಂಚಿಸಿದ್ದ ಮಹಿಳೆ ಹಾಗೂ ಆಕೆಯ ಪ್ರಿಯಕರನನ್ನು ಬ್ಯಾಡರಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ದೇವನಹಳ್ಳಿ ನಿವಾಸಿ ನಂದನ್(40) ಮತ್ತು ಆಕೆಯ ಪ್ರಿಯತಮೆ ರಾಜರಾಜೇಶ್ವರಿನಗರ ನಿವಾಸಿ ಕಲ್ಪಿತಾ(35) ಬಂಧಿತರು. ಆರೋಪಿ ಗಳಿಂದ ಚಿನ್ನಾಭರಣ ವಶಕ್ಕೆ ಪಡೆಯ ಲಾಗಿದೆ. ಆರೋಪಿಗಳು ಇತ್ತೀಚೆಗೆ ಮಾಗಡಿ ಮುಖ್ಯ ರಸ್ತೆಯಲ್ಲಿರುವ ಪರಮೇಶ್ವರ ಬ್ಯಾಂಕರ್ಸ್ ಆ್ಯಂಡ್ ಜ್ಯುವೆಲರ್ಸ್‌ನಲ್ಲಿ 36 ಗ್ರಾಂ ತೂಕದ ಚಿನ್ನಾಭರಣ ಖರೀದಿಸಿ, ನಕಲಿ ಆ್ಯಪ್ ಮೂಲಕ 2.29 ಲಕ್ಷ ರೂ. ಪಾವತಿಸಿ ವಂಚಿಸಿದ್ದರು. ಈ ಸಂಬಂಧ ಮಳಿಗೆ ಮಾಲೀಕ ಗೇರ್ವಚಂದ್ ಎಂಬವರು ನೀಡಿದ ದೂರಿನ ಮೇರೆಗೆ ಆರೋಪಿಗಳನ್ನು ಬಂಧಿಸಲಾಗಿದೆ.
ಆರೋಪಿ ನಂದನ್‌ಗೆ ಈಗಾಗಲೇ ಮದುವೆ ಯಾಗಿದ್ದು, ಪತ್ನಿಯಿಂದ ದೂರವಾ ಗಿದ್ದಾನೆ. ಇತ್ತ ಕಲ್ಪಿತಾ ಕೂಡ ಪತಿಯಿಂದ ದೂರವಾಗಿ ಒಂಟಿಯಾಗಿ ವಾಸವಾಗಿ ದ್ದಳು. ಸಾಮಾಜಿಕ ಜಾಲತಾಣದ ಮೂಲಕ ಪರಸ್ಪರ ಪರಿಚಯ ವಾದ ಆರೋಪಿಗಳು ಕೆಲ ತಿಂಗ ಳಿಂದ ಸಹ ಜೀವನ ನಡೆಸುತ್ತಿ ದ್ದಾರೆ. ಇಬ್ಬರು ಯಾವುದೇ ಕೆಲಸಕ್ಕೆ ಹೋಗುತ್ತಿರಲಿಲ್ಲ.
ಈ ಮಧ್ಯೆ ಫ್ರಾಂಕ್ ಪೇಮೆಂಟ್ ಎಪಿಕೆ ಆ್ಯಪ್ ಡೌನ್‌ಲೋಡ್ ಮಾಡಿಕೊಂಡು, ಚಿನ್ನಾಭರಣ ಮಳಿಗೆಗಳು, ಹೋಟೆಲ್, ದಿನಸಿ ಅಂಗಡಿ ಸೇರಿ ವಿವಿಧೆಡೆ ತೆರಳಿ ಅಗತ್ಯ ವಸ್ತುಗಳನ್ನು ಖರೀದಿಸಿ ಈ ಆ್ಯಪ್ ಮೂಲಕ ಹಣ ಪಾವತಿಸುತ್ತಿದ್ದರು. ಬಳಿಕ ತಮ್ಮ ಮೊಬೈಲ್‌ನಲ್ಲಿ ಪೇಮೆಂಟ್ ಆಗಿದೆ ಎಂಬ ಸಂದೇಶ ತೋರಿಸಿ, ಅಂಗಡಿ ಮಾಲೀಕರನ್ನು ವಂಚಿಸುತ್ತಿದ್ದರು. ಅಸಲಿಗೆ ಅಂಗಡಿ ಮಾಲೀಕರಿಗೆ ಹಣವೇ ಜಮೆ ಆಗುತ್ತಿರಲಿಲ್ಲ ಎಂದು ಪೊಲೀಸರು ಹೇಳಿದರು.
ಏನಿದು ವಂಚನೆ?: ಮಾ.4ರಂದು ಬೆಳಗ್ಗೆ 9.30ಕ್ಕೆ ಆರೋಪಿಗಳು ಮಾಗಡಿ ಮುಖ್ಯರಸ್ತೆ ಯಲ್ಲಿ ರುವ ಪರಮೇಶ್ವರ ಬ್ಯಾಂಕರ್ಸ್ ಮತ್ತು ಜ್ಯುವೆಲರ್ಸ್ ಅಂಗಡಿಗೆ ಹೋಗಿ, 36 ಗ್ರಾಂ ತೂಕದ ಚಿನ್ನಾಭರಣ ಖರೀದಿಸಿದ್ದಾರೆ. ಬಳಿಕ ತಮ್ಮ ಬಳಿ ನಗದು ಇಲ್ಲ. ನೆಫ್ಟ್ ಮೂಲಕ ಹಣ ಕಳುಹಿಸುತ್ತೇವೆ ಎಂದು 2,29,300 ರೂ. ನಕಲಿ ಆ್ಯಪ್ ಮೂಲಕ ಹಣ ಜಮೆ ಮಾಡಿದ್ದಾರೆ. ಬಳಿಕ ಒಡವೆಗಳನ್ನು ಪಡೆದು ಸ್ಥಳದಿಂದ ಪರಾರಿಯಾಗಿದ್ದಾರೆ.
ಕೆಲ ಹೊತ್ತಿನ ಬಳಿಕ ಮಳಿಗೆ ಮಾಲೀಕರು ಬ್ಯಾಂಕ್ ಖಾತೆಯಲ್ಲಿ ಹಣ ಜಮೆ ಆಗಿರುವ ಬಗ್ಗೆ ಪರಿಶೀಲಿಸಿದಾಗ ಹಣ ವರ್ಗಾವಣೆ ಆಗದಿರುವುದು ಕಂಡು ಬಂದಿದೆ. ಈ ಸಂಬಂಧ ಮಾಲೀಕರು ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಆರೋಪಿಗಳನ್ನು ಬಂಧಿಸ ಲಾಗಿದೆ ಎಂದು ಪೊಲೀಸರು ಹೇಳಿದರು.
ಆರೋಪಿಗಳು ಚಿನ್ನಾಭರಣ ಮಳಿಗೆ ಯಿಂದ ದೋಚಿದ್ದ ಚಿನ್ನಾಭರಣಗಳನ್ನು ಬೇರೆಡೆ ಅಡವಿಟ್ಟು, ಹಣ ಪಡೆದು ಐಷಾ ರಾಮಿ ಜೀವನಕ್ಕೆ ವ್ಯಯಿಸಿದ್ದಾರೆ ಎಂಬುದು ಗೊತ್ತಾಗಿದೆ. ಅಲ್ಲದೆ, ಬೇರೆ ಕಡೆಯೂ ಇದೇ ರೀತಿಯಲ್ಲಿ ವಂಚನೆ ಮಾಡಿರುವುದು ಕಂಡು ಬಂದಿದೆ. ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದರು.