ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ಆತ್ಮನಿರ್ಭರ ಭಾರತ ಕಟ್ಟುವಲ್ಲಿ ಹಾಗೂ ಭಾರತದ ರಕ್ಷಣಾ ವಲಯದ ಕೈಗಾರಿಕೋದ್ಯಮವನ್ನು ಸ್ವಾವಲಂಬಿ ಕ್ಷೇತ್ರವಾಗಿಸುವ ಕನಸನ್ನು ನನಸುಗೊಳಿಸುವಲ್ಲಿ ತಾನು ಮಹತ್ವದ ಯೋಗದಾನ ನೀಡುವುದಾಗಿ ಫ್ರಾನ್ಸ್ ಪುನರುಚ್ಚರಿಸಿದೆ.
ಭಾರತದ ಭದ್ರತಾ ಸಲಹೆಗಾರ ಅಜಿತ್ ದೋವಲ್ ಹಾಗೂ ಫ್ರಾನ್ಸ್ ಅಧ್ಯಕ್ಷರಾದ ಇಮ್ಯಾನ್ಯುಯೆಲ್ ಮ್ಯಾಕ್ರಾನ್‌ರವರ ಸಲಹೆಗಾರರಾದ ಇಮ್ಯಾನ್ಯುಯವಲ್ ಬೊನ್ ಅವರ ನಡುವೆ ಪ್ಯಾರಿಸ್‌ನಲ್ಲಿರುವ ರಾಜತಾಂತ್ರಿಕ ಕಚೇರಿಯಲ್ಲಿ ಶನಿವಾರ ಸಭೆ ನಡೆಯಿತು.
ಈ ಸಭೆಯ ನಂತರ, ಪ್ರಕಟಣೆ ಹೊರಡಿಸಿದ ಭಾರತದ ಧೂತಾವಾಸ ಕಚೇರಿ, ಭಾರತದ ಸ್ವಾವಲಂಬನೆಗೆ ಫ್ರಾನ್ಸ್ ಬದ್ಧವಾಗಿದೆ. ಎರಡೂ ದೇಶಗಳ ಜಂಟಿ ಸಹಭಾಗಿತ್ವದಲ್ಲಿ ಹೊಸ ಸಂಶೋಧನೆಗಳು, ತಂತ್ರಜ್ಞಾನ ಅಭಿವೃದ್ಧಿಗೂ ಶ್ರಮಿಸಲಾಗುತ್ತದೆ ಎಂದು ಫ್ರಾನ್ಸ್ ಹೇಳಿರುವುದಾಗಿ ಉಲ್ಲೇಖಿಸಲಾಗಿದೆ.
ಇದನ್ನೂ ಓದಿ:ಕಾಂಗ್ರೆಸ್ ಇರುವ ರಾಜ್ಯಗಳಲ್ಲಿ ಇಂಧನ ಬೆಲೆ ಇಳಿಕೆ ಆಗಿದೆಯಾ: ಪ್ರಹ್ಲಾದ ಜೋಶಿ