Advertisement

France: ಭಾರತದ ವಿದ್ಯಾರ್ಥಿಗಳ ವೀಸಾ ಪ್ರಕ್ರಿಯೆ ಸರಳಗೊಳಿಸಲು ಕ್ರಮ: ಮ್ಯಾಕ್ರನ್‌

12:30 AM Jan 27, 2024 | Team Udayavani |

ಹೊಸದಿಲ್ಲಿ: 2030ರ ಒಳಗೆ ಭಾರತದ 30 ಸಾವಿರ ವಿದ್ಯಾರ್ಥಿಗಳನ್ನು ಫ್ರಾನ್ಸ್‌ ಸ್ವಾಗತಿಸುವ ಗುರಿ ಹೊಂದಿದೆ ಎಂದು ಗುರಿ ಹೊಂದಿದೆ ಎಂದು ಫ್ರಾನ್ಸ್‌ ಅಧ್ಯಕ್ಷ ಇಮಾನ್ಯುವಲ್‌ ಮ್ಯಾಕ್ರನ್‌ ಹೇಳಿದ್ದಾರೆ. ಈ ಮೂಲಕ ದೇಶದ ವಿದ್ಯಾರ್ಥಿಗಳಿಗೆ ಫ್ರಾನ್ಸ್‌ ಅಧ್ಯಕ್ಷರು ಆಹ್ವಾನ ನೀಡಿದ್ದಾರೆ.

Advertisement

ಜೈಪುರದಲ್ಲಿ ಗುರುವಾರ ರಾತ್ರಿ ಪ್ರಧಾನಿ ನರೇಂದ್ರ ಮೋದಿಯವರ ಜತೆಗಿನ ದ್ವಿಪಕ್ಷೀಯ ಮಾತುಕತೆ ವೇಳೆ ಈ ಅಂಶವನ್ನು ತಿಳಿಸಿದ್ದಾರೆ. ಜತೆಗೆ ಈ ಬಗ್ಗೆ ಎಕ್ಸ್‌ ಖಾತೆಯಲ್ಲಿ ಬರೆದುಕೊಂಡಿಕೊಂಡಿದ್ದಾರೆ. ಕ್ಯೂಎಸ್‌ ರ್‍ಯಾಂಕಿಂಗ್‌ ಪಟ್ಟಿಯಲ್ಲಿ 35, ಟೈಮ್‌ ಹೈಯರ್‌ ಎಜುಕೇಶನ್‌ ರ್‍ಯಾಂಕಿಂಗ್‌ನಲ್ಲಿ 15 ಶ್ರೇಯಾಂಕ ಪಡೆದ ವಿವಿಗಳಿವೆ. ಫ್ರಾನ್ಸ್‌, ಅಂತಾರಾಷ್ಟ್ರೀಯ ವಿದ್ಯಾರ್ಥಿಗಳಿಗೆ ವಿಶ್ವದ ಅಚ್ಚುಮೆಚ್ಚಿನ ದೇಶಗಳಲ್ಲಿ ಒಂದಾಗಿದೆ. ಅತೀ ಕಡಿಮೆ ವೆಚ್ಚದಲ್ಲಿ ಉತ್ತಮ ಶಿಕ್ಷಣ, ತರಬೇತಿಯನ್ನು ನೀಡುವ ವಿಶ್ವದರ್ಜೆಯ ವಿ.ವಿ.ಗಳು ಫ್ರಾನ್ಸ್‌ನಲ್ಲಿವೆ. ಆದರೆ ಭಾಷೆ ವಿದೇಶಿ ವಿದ್ಯಾರ್ಥಿಗಳಿಗೆ ಬಲುದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಇದನ್ನು ಬಗೆಹರಿಸಲು ಇಲ್ಲಿನ ಪಬ್ಲಿಕ್‌ ಸ್ಕೂಲ್‌ಗ‌ಳಲ್ಲಿ ಫ್ರೆಂಚ್‌ ಭಾಷೆಯನ್ನು ಕಲಿಸಲು, ಫ್ರಾನ್ಸ್‌ನ ವಿವಿಗಳಲ್ಲಿ ಶಿಕ್ಷಣ ಪಡೆಯುವವರಿಗೆ ಅಂತಾರಾಷ್ಟ್ರೀಯ ಮಟ್ಟದ ಸೌಲಭ್ಯಗಳನ್ನು ನೀಡಲು ಫ್ರಾನ್ಸ್‌ ನಿರ್ಧರಿಸಿದೆ ಎಂದು ತಿಳಿಸಿದ್ದಾರೆ.

ವೀಸಾ ಪ್ರಕ್ರಿಯೆ ಸುಲಭ: ಭಾರತೀಯ ವಿದ್ಯಾರ್ಥಿಗಳಿಗೆ ವೀಸಾ ಪ್ರಕ್ರಿಯೆಯನ್ನು ಸುಲಭ ಗೊಳಿಸುತ್ತಿದ್ದೇವೆ. ಪರಸ್ಪರ ಸಹಕಾರ, ನಂಬಿಕೆಯಿಂದ ನಾವು ನಮ್ಮ ಗುರಿಯನ್ನು ಸಾಧಿಸಲಿದ್ದೇವೆ ಎಂದು ಮ್ಯಾಕ್ರನ್‌ ಹೇಳಿದ್ದಾರೆ.

ಟಾಟಾ- ಏರ್‌ಬಸ್‌ ಒಪ್ಪಂದ: ಟಾಟಾ ಮತ್ತು ಏರ್‌ಬಸ್‌ ಸ್ವದೇಶಿ ಸಾಧನ, ಉಪಕರಣಗಳೊಂದಿಗೆ ಎಚ್‌ 125 ಹೆಲಿಕಾಪ್ಟರ್‌ ತಯಾರಿಕ ಘಟಕವನ್ನು ಆರಂಭಿ ಸಲು ಫ್ರಾನ್ಸ್‌ನೊಂದಿಗೆ ಒಪ್ಪಂದ ಮಾಡಿಕೊಂಡಿರುವ ಬಗ್ಗೆ ಭಾರತದ ವಿದೇಶಾಂಗ ಕಾರ್ಯದರ್ಶಿ ವಿನಯ ಕ್ವಾಟ್ರಾ ಹೇಳಿದ್ದಾರೆ. ಉಭಯ ನಾಯಕರ ಮಾತುಕತೆ ವಿವರ ನೀಡಿದ ಅವರು, ರಕ್ಷಣ ಕೈಗಾರಿಕ ಪಾಲು ದಾರಿಕೆಗೆ ಮಾರ್ಗಸೂಚಿಯನ್ನು ಅಂತಿಮಗೊಳಿಸಿದೆ. ಮುಂದಿನ ದಿನಗಳಲ್ಲಿ ಫ್ರಾನ್ಸ್‌ ಭಾರತಕ್ಕೆ ರಕ್ಷಣ ಕ್ಷೇತ್ರದಲ್ಲಿ ಹಾರ್ಡ್‌ವೇರ್‌ ಉತ್ಪಾದನೆಯಲ್ಲಿ ಸಹಕಾರ ನೀಡಲಿದೆ ಎಂದು ವಿದೇಶಾಂಗ ಕಾರ್ಯದರ್ಶಿ ವಿನಯ್‌ ಕ್ವಾಟ್ರಾ ತಿಳಿಸಿದರು.

ಅತೀದೊಡ್ಡ ಗೌರವ ಸಿಕ್ಕಿದೆ: ಮ್ಯಾಕ್ರನ್‌
75ನೇ ಗಣರಾಜ್ಯೋತ್ಸವಕ್ಕೆ ಪ್ರಮುಖ ಅತಿಥಿಯಾಗಿ ಆಗಮಿಸಿದ್ದ ಫ್ರಾನ್ಸ್‌ ಅಧ್ಯಕ್ಷ ಎಮಾನ್ಯುಯೆಲ್‌ ಮ್ಯಾಕ್ರನ್‌ ಶುಕ್ರವಾರ ಕರ್ತವ್ಯಪಥದಲ್ಲಿ ನಡೆದ ಅದ್ದೂರಿ ಸಂಭ್ರಮಾಚರಣೆಯನ್ನು ಕಣ್ತುಂಬಿಕೊಂಡಿದ್ದಾರೆ. ಜತೆಗೆ ಕೃತಜ್ಞತೆಯನ್ನೂ ವ್ಯಕ್ತಪಡಿಸಿದ್ದಾರೆ. ಆತ್ಮೀಯ ಸ್ನೇಹಿತರಾದ ಪ್ರಧಾನಿ ನರೇಂದ್ರ ಮೋದಿ ಅವರಿಗೂ ಭಾರತದ ಜನತೆಗೂ ಗಣರಾಜ್ಯೋತ್ಸವದ ಶುಭಾಶಯಗಳು. ಆಹ್ವಾನದ ಮೂಲಕ ಫ್ರಾನ್ಸ್‌ಗೆ ನೀಡಿರುವ ಈ ಬಹುದೊಡ್ಡ ಗೌರವಕ್ಕೆ ಧನ್ಯವಾದಗಳು. ಈ ಮೂಲಕ ಭಾರತದ ಗಣರಾಜ್ಯೋತ್ಸವಕ್ಕೆ 6ನೇ ಬಾರಿಗೆ ಫ್ರಾನ್ಸ್‌ನ ಅಧ್ಯಕ್ಷರು ಮುಖ್ಯ ಅತಿಥಿಯಾಗಿ ಆಗಮಿಸಿದಂತಾಗಿದೆ ಎಂದು ಎಕ್ಸ್‌ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next