Advertisement

ಪ್ಯಾರಿಸ್; ವಿದ್ಯಾರ್ಥಿಯಿಂದ ಶೂಟೌಟ್, ಮತ್ತೊಂದೆಡೆ ಬಾಂಬ್ ಸ್ಫೋಟ

07:09 PM Mar 16, 2017 | Team Udayavani |

ಪ್ಯಾರಿಸ್: ದಕ್ಷಿಣ ಫ್ರಾನ್ಸ್ ನ ಗ್ರಾಸ್ ನಗರದ ಹೈಸ್ಕೂಲ್ ವೊಂದರಲ್ಲಿ ವಿದ್ಯಾರ್ಥಿ ನಡೆಸಿದ ಶೂಟೌಟ್ ಘಟನೆಯಲ್ಲಿ ಇಬ್ಬರು ವಿದ್ಯಾರ್ಥಿಗಳು ಗಾಯಗೊಂಡಿದ್ದರೆ, ಮತ್ತೊಂದೆಡೆ ಪ್ಯಾರಿಸ್ ನ ಐಎಂಎಫ್ ಕಚೇರಿಯಲ್ಲಿ ಲೆಟರ್ ಬಾಂಬ್ ಸ್ಫೋಟಗೊಂಡಿದೆ. ಈ ಹಿನ್ನೆಲೆಯಲ್ಲಿ ಫ್ರಾನ್ಸ್ ನಲ್ಲಿ ಹೈಅಲರ್ಟ್ ಘೋಷಿಸಲಾಗಿದೆ ಎಂದು ಮಾಧ್ಯಮದ ವರದಿಗಳು ತಿಳಿಸಿವೆ.

Advertisement

ಹೈಸ್ಕೂಲ್ ನಡೆದ ಶೂಟೌಟ್ ಪ್ರಕರಣಕ್ಕೆ ಸಂಬಂಧಿಸಿದಂತೆ 17 ವರ್ಷದ ವಿದ್ಯಾರ್ಥಿಯೊಬ್ಬನನ್ನು ಬಂಧಿಸಲಾಗಿದೆ. ಆತನ ಬಳಿ ಇದ್ದ ರೈಫಲ್, ಎರಡು ಹ್ಯಾಂಡ್ ಗ್ರೆನೇಡ್ಸ್ ಹಾಗೂ 2 ಗ್ರೆನೇಡ್ಸ್ ಅನ್ನು ವಶಪಡಿಸಿಕೊಂಡಿರುವುದಾಗಿ ಪೊಲೀಸ್ ಮೂಲಗಳು ಹೇಳಿವೆ.

ಮತ್ತೊಂದು ವರದಿ ಪ್ರಕಾರ, ಇಬ್ಬರು ವಿದ್ಯಾರ್ಥಿಗಳು ಹೆಡ್ ಮಾಸ್ಟರ್ ಮೇಲೆ ಗುಂಡಿನ ದಾಳಿ ನಡೆಸಿದ್ದು, ಅವರು ಘಟನೆಯಲ್ಲಿ ಗಾಯಗೊಂಡಿರುವುದಾಗಿ ತಿಳಿಸಿದ್ದು, ಶಂಕಿತರು ಉಗ್ರಗಾಮಿಗಳಲ್ಲ ಎಂದು ವಿವರಿಸಿದೆ. ಇಬ್ಬರಲ್ಲಿ ಒಬ್ಬನನ್ನು ಬಂಧಿಸಲಾಗಿದೆ, ಮತ್ತೊರ್ವ ಪರಾರಿಯಾಗಿದ್ದಾನೆ. ಘಟನೆಯ ಬಳಿಕ ಶಾಲೆಯನ್ನು ಮುಚ್ಚಲಾಗಿದೆ ಎಂದು ವರದಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next