Advertisement

ಫ್ರಾನ್ಸ್‌ನಲ್ಲಿ ಮತ್ತೆ ಕೋವಿಡ್‌ ಅಬ್ಬರ: ಮತ್ತೂಮ್ಮೆ ಲಾಕ್‌ಡೌನ್‌ ಜಾರಿಗೆ ಸಜ್ಜು ?

05:39 PM Oct 28, 2020 | sudhir |

ಪ್ಯಾರಿಸ್‌: ದೇಶದಲ್ಲಿ ಕೋವಿಡ್‌ ಪ್ರಕರಣಗಳ ಸಂಖ್ಯೆ ಏತನ್ಮಧ್ಯೆ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಫ್ರಾನ್ಸ್ ಸರಕಾರವು ಮಂಗಳವಾರ ತುರ್ತು ಸಭೆಗಳನ್ನು ನಡೆಸಿದ್ದು, ಪುನ: ಲಾಕ್‌ಡೌನ್‌ ಜಾರಿ ಮಾಡಿ ಹೊಸ ಮಾರ್ಗಸೂಚನೆಗಳೊಂದಿಗೆ ಎಚ್ಚರಿಕೆಗಳನ್ನೂ ದೇಶಕ್ಕೆ ನೀಡಿದೆ.

Advertisement

ಅಧ್ಯಕ್ಷ ಎಮ್ಯಾನ್ಯುಯಲ್‌ ಮ್ಯಾಕ್ರೋನ್‌ ಅವರು ಪ್ರಧಾನ ಮಂತ್ರಿ ಜೀನ್‌ ಕ್ಯಾಸ್ಟೆಕ್ಸ್, ಮಂತ್ರಿ, ಸಂಸದರು, ಸಂಘಗಳೊಂದಿಗೆ ಸಮಾಲೋಚನೆ ನಡೆಸಿದ್ದು, ಕೋವಿಡ್‌ ನಿಯಂತ್ರಣಕ್ಕೆ ಅಗತ್ಯವಿರುವ ಕ್ರಮಗಳ ಕುರಿತು ಚರ್ಚಿಸಿದ್ದಾರೆ.

ಆಂತರಿಕ ವ್ಯವಹಾರಗಳ ಸಚಿವ ಜೆರಾಲ್ಡ್ ಡರ್ಮನಿನ್‌ ರೇಡಿಯೊ ಮೂಲಕ ದೇಶವನ್ನು ಉದ್ದೇಶಿ ಮಾತನಾಡಿದ್ದು, “ಕೋವಿಡ್‌ ನಿಯಂತ್ರಣಕ್ಕೆ ಕಠಿಣ ನಿರ್ಧಾರಗಳನ್ನು ಕೈಗೊಳ್ಳವ ಸಾಧ್ಯತೆಗಳು ಇವೆ’ ಎಂದು ಹೇಳಿದ್ದಾರೆ. ಈ ಮೂಲಕ ದೇಶದಲ್ಲಿ ಮತ್ತೂಮ್ಮೆ ಲಾಕ್‌ಡೌನ್‌ ಜಾರಿ ಮಾಡುವ ಮುನ್ಸೂಚನೆ ನೀಡಿದ್ದಾರೆ.

ಇದನ್ನೂ ಓದಿ :ಆನ್ ಲೈನ್ ಶಿಕ್ಷಣಕ್ಕೆ ರಾಜ್ಯ ಸರ್ಕಾರದಿಂದ ಮಾರ್ಗಸೂಚಿ ಬಿಡುಗಡೆ:ಗೈಡ್ ಲೈನ್ಸ್ ನಲ್ಲಿ ಏನಿದೆ?

ಕಳೆದ 3-4ದಿನಗಳಿಂದ ಫ್ರಾನ್ಸ್‌ನಲ್ಲಿ 75 ಸಾವಿರಕ್ಕೂ ಮಿಗಿಲಾದ ಹೊಸ ಕೋವಿಡ್‌ ಪ್ರಕರಣಗಳು ಪತ್ತೆಯಾಗುತ್ತಿದ್ದು, ಮಂಗಳವಾರವೂ 78,515 ಪ್ರಕರಣಗಳು ವರದಿಯಾಗಿವೆ. ಸದ್ಯ ಫ್ರಾನ್ಸ್‌ನಲ್ಲಿ 11,65,278 ಮಂದಿಗೆ ಸೋಂಕು ತಗುಲಿದೆ. 35,018 ಮಂದಿ ಮೃತಪಟ್ಟಿದ್ದಾರೆ. 10,18,913 ಸಕ್ರಿಯ ಪ್ರಕರಣಗಳಿವೆ.

Advertisement

ಇನ್ನು, ವಿಶ್ವದಾದ್ಯಂತ ಮಂಗಳವಾರದ ವೇಳೆಗೆ 4,40,17,937 ಮಂದಿಗೆ ಕೋವಿಡ್‌ ಸೋಂಕು ತಗುಲಿದೆ. ವಲ್ಡೋ ಮೀಟರ್‌ ಕೋವಿಡ್‌ ಟ್ರಾಕರ್‌ ವೆಬ್‌ಸೈಟ್‌ ಪ್ರಕಾರ, ಜಗತ್ತಿನಲ್ಲಿ ಈವರೆಗೆ 3,23,01,346 ಮಂದಿ ಸೋಂಕಿತರು ಗುಣಮುಖರಾಗಿದ್ದು, ಇದುವರೆಗೆ 11,67,785 ಮಂದಿ ಸಾವಿಗೀಡಾಗಿದ್ದಾರೆ.

ವಿಶ್ವದಲ್ಲೇ ಅತಿಹೆಚ್ಚು ಸೋಂಕು ಪ್ರಕರಣಗಳನ್ನು ಹೊಂದಿರುವ ರಾಷ್ಟ್ರಗಳ ಪಟ್ಟಿಯಲ್ಲಿ ಅಮೆರಿಕ ಅಗ್ರಸ್ಥಾನದಲ್ಲಿ ಮುಂದುವರಿದಿದೆ. ಅಲ್ಲಿ ಒಟ್ಟು89,77,593 ಮಂದಿಗೆ ಸೋಂಕು ತಗುಲಿದ್ದರೆ 2,31,324 ಜನ ಈವರೆಗೆ ಮೃತಪಟ್ಟಿದ್ದಾರೆ. ಸದ್ಯ 29,03,604 ಸಕ್ರಿಯ ಪ್ರಕರಣಗಳಿವೆ.

ಇದನ್ನೂ ಓದಿ:ಚಾಮರಾಜನಗರ ಜಿಲ್ಲೆಯ ಬಂಗಾರಾಚಾರ್ ಮತ್ತು ಡಾ.ರಾಮಕೃಷ್ಣ ಅವರಿಗೆ ಒಲಿದ ರಾಜ್ಯೋತ್ಸವ ಪ್ರಶಸ್ತಿ

ಎರಡನೇ ಸ್ಥಾನದಲ್ಲಿರುವ ಭಾರತದಲ್ಲಿ ಇದುವರೆಗೆ 79,74,963 ಪಾಸಿಟಿವ್‌ ಪ್ರಕರಣಗಳು ಪತ್ತೆಯಾಗಿದ್ದು, ಆ ಪೈಕಿ 1,19,823 ಮಂದಿ ಮೃತಪಟ್ಟಿದ್ದಾರೆ. ಬ್ರೆಜಿಲ್‌ನಲ್ಲಿ ಈವರೆಗೆ 54,15,671 ಪ್ರಕರಣಗಳು ಪತ್ತೆಯಾಗಿದ್ದು, 1,57,528 ಮಂದಿ ಸಾವಿಗೀಡಾಗಿದ್ದಾರೆ. ಸದ್ಯ 3,88,169 ಸಕ್ರಿಯ ಪ್ರಕರಣಗಳು ದಾಖಲಾಗಿವೆ.

ರಷ್ಯಾದಲ್ಲಿ ಇದುವರೆಗೆ 15,47,774 ಪ್ರಕರಣಗಳು ದೃಢಪಟ್ಟಿದ್ದು, 26,589 ಮಂದಿ ಮೃತಪಟ್ಟಿದ್ದಾರೆ. ಸದ್ಯ 3,62,245 ಸಕ್ರಿಯ ಪ್ರಕರಣಗಳು ಇವೆ. ಪಾಕಿಸ್ಥಾನದಲ್ಲಿ ಈವರೆಗೆ 3,29,375 ಪಾಸಿಟಿವ್‌ ಪ್ರಕರಣಗಳು ದಾಖಲಾಗಿದ್ದು, ಆ ಪೈಕಿ 6,745 ಮಂದಿ ಕೊನೆಯುಸಿರೆಳೆದಿದ್ದಾರೆ. ಬಾಂಗ್ಲಾದೇಶದಲ್ಲಿ ಇದುವರೆಗೆ 4,01,586 ಸೋಂಕು ಪ್ರಕರಣಗಳು ಪತ್ತೆಯಾಗಿದ್ದು, ಆ ಪೈಕಿ 5,838 ಮಂದಿ ಮೃತಪಟ್ಟಿದ್ದಾರೆ. ಸದ್ಯ 77,625 ಸಕ್ರಿಯ ಪ್ರಕರಣಗಳು ಅಲ್ಲಿವೆ.

Advertisement

Udayavani is now on Telegram. Click here to join our channel and stay updated with the latest news.

Next