Advertisement

Wine ನಾಶಪಡಿಸಲು 1425 ಕೋಟಿ ರೂ. ಪಾವತಿ! ಫ್ರಾನ್ಸ್‌ಗೆ ಈ ಮೊತ್ತ ನೀಡಿದ ಐರೋಪ್ಯ ಒಕ್ಕೂಟ

08:40 PM Aug 26, 2023 | Team Udayavani |

ನವದೆಹಲಿ:ಬೆಲೆ ತೀರಾ ಕುಸಿತಗೊಂಡಾಗ ರೈತರು ಪ್ರತಿಭಟನಾರ್ಥವಾಗಿ ಟೊಮೆಟೋ, ಈರುಳ್ಳಿಯಂಥ ತರಕಾರಿಗಳನ್ನು ರಸ್ತೆಗೆ ಎಸೆಯುವುದನ್ನು ನೀವು ನೋಡಿರುತ್ತೀರಿ. ಆದರೆ, ಎಲ್ಲಾದರೂ ಮದ್ಯವನ್ನು ಈ ರೀತಿ ನಾಶ ಮಾಡಿದ್ದನ್ನು ಕೇಳಿದ್ದೀರಾ?

Advertisement

ಫ್ರಾನ್ಸ್‌ನಲ್ಲಿ ವೈನ್‌ ಬೆಲೆ ಇಳಿಕೆಯಾಗಿದೆ ಎಂಬ ಕಾರಣಕ್ಕೆ ಹೆಚ್ಚುವರಿ ವೈನ್‌ ಅನ್ನು ನಾಶ ಮಾಡಲಾಗುತ್ತಿದೆ. ವಿಶೇಷವೆಂದರೆ, ವೈನ್‌ ನಾಶಪಡಿಸಲೆಂದೇ ಫ್ರಾನ್ಸ್‌ಗೆ ಐರೋಪ್ಯ ಒಕ್ಕೂಟವು ಬರೋಬ್ಬರಿ 1425.70 ಕೋಟಿ ರೂ.(160 ದಶಲಕ್ಷ ಯೂರೋ) ಗಳನ್ನು ನೀಡಿದೆ.

ಕ್ರಾಫ್ಟ್ ಬಿಯರ್‌ನ ಜನಪ್ರಿಯತೆ ಹೆಚ್ಚಿರುವುದು, ಜೀವನವೆಚ್ಚ ಹೆಚ್ಚಳವಾಗಿರುವುದು, ಅತಿಯಾದ ಉತ್ಪಾದನೆ ಸೇರಿದಂತೆ ಬೇರೆ ಬೇರೆ ಕಾರಣಗಳಿಂದಾಗಿ ವೈನ್‌ ಕುಡಿಯುವವರ ಸಂಖ್ಯೆಯೂ ಗಣನೀಯವಾಗಿ ಇಳಿಕೆಯಾಗಿದೆ. ಐರೋಪ್ಯ ಒಕ್ಕೂಟದಲ್ಲಿ ವೈನ್‌ ಉತ್ಪಾದನೆಯು ಶೇ.4ರಷ್ಟು ಹೆಚ್ಚಳವಾಗಿದ್ದರೂ, ಬಳಕೆ ಮಾತ್ರ ಶೇ.34ರಷ್ಟು ಕುಸಿತಗೊಂಡಿದೆ. ಹೀಗಾಗಿ, ವೈನ್‌ ಬೆಲೆಯೂ ಇಳಿಕೆಯಾಗಿದೆ.

ಈ ಹಿನ್ನೆಲೆಯಲ್ಲಿ ಐರೋಪ್ಯ ಒಕ್ಕೂಟವು 1,420.70 ಕೋಟಿ ರೂ.ಗಳನ್ನು ಫ್ರಾನ್ಸ್‌ಗೆ ಪಾವತಿಸಿದೆ. ಈ ಮೊತ್ತವನ್ನು ಬಳಸಿಕೊಂಡು ಮಾರಾಟವಾಗದೇ ಉಳಿದ ವೈನ್‌ ಅನ್ನು ಖರೀದಿಸಿ, ಅದರಲ್ಲಿರುವ ಆಲ್ಕೋಹಾಲ್‌ ಅನ್ನು ಪ್ರತ್ಯೇಕಿಸಿ ಹ್ಯಾಂಡ್‌ ಸ್ಯಾನಿಟೈಸರ್‌, ಸ್ವತ್ಛಗೊಳಿಸುವ ಉತ್ಪನ್ನಗಳು, ಸುಗಂಧದ್ರವ್ಯಗಳ ತಯಾರಿಕೆಗೆ ಬಳಸಲು ನಿರ್ಧರಿಸಲಾಗಿದೆ. ಅಲ್ಲದೇ, ಸ್ವಲ್ಪ ಮೊತ್ತವನ್ನು ವೈನ್‌ ಬೆಳೆಗಾರರಿಗೆ ನೀಡಿ, ಆಲಿವ್‌ಗಳನ್ನು ಬೆಳೆಯುವಂತೆ ಸೂಚಿಸಲಾಗುತ್ತದೆ.

ವೈನ್‌ ಸೇವನೆ ಇಳಿಕೆ (ಜನವರಿಯಿಂದ ಜೂನ್‌ವರೆಗೆ)
ಇಟಲಿ- ಶೇ.7
ಸ್ಪೇನ್‌- ಶೇ.10
ಫ್ರಾನ್ಸ್‌- ಶೇ.15
ಜರ್ಮನಿ- ಶೇ.22
ಪೋರ್ಚುಗಲ್‌- ಶೇ.34

Advertisement
Advertisement

Udayavani is now on Telegram. Click here to join our channel and stay updated with the latest news.

Next