Advertisement

Doping: ಇಟಲಿ ಸಂಸ್ಥೆಯಿಂದ ಮಿಡ್‌ಫೀಲ್ಡರ್ ಪೋಗ್ಬಾಗೆ 4 ವರ್ಷ ನಿಷೇಧ!

11:30 PM Feb 29, 2024 | Team Udayavani |

ಪ್ಯಾರಿಸ್‌: ಫ್ರಾನ್ಸ್‌ ಫ‌ುಟ್‌ಬಾಲ್‌ ತಂಡದ ಪ್ರಮುಖ ಆಟಗಾರ ಪೌಲ್‌ ಪೋಗ್ಬಾ ಅವರಿಗೆ ಆಘಾತಕಾರಿ ಸುದ್ದಿಯೊಂದು ಬಂದಪ್ಪಳಿಸಿದೆ. ಉದ್ದೀಪನ ಸೇವನೆ ಪರೀಕ್ಷೆಯಲ್ಲಿ ವಿಫ‌ಲವಾಗಿರುವ ಅವರನ್ನು ನಾಲ್ಕು ವರ್ಷಗಳ ಕಾಲ ಫ‌ುಟ್‌ಬಾಲ್‌ನಿಂದ ನಿಷೇಧಿಸಲಾಗಿದೆ. ಮಿಡ್‌ಫೀಲ್ಡರ್ ಆಗಿ ಹೆಸರು ಮಾಡಿರುವ ಪೋಗ್ಬಾ, ಇಟಲಿಯ ಜುವೆಂಟಸ್‌ ಕ್ಲಬ್‌ ಪರ ಆಡುತ್ತಿದ್ದಾಗ, ಉದ್ದೀಪನ ಸೇವನೆ ಪರೀಕ್ಷೆಯಲ್ಲಿ ವಿಫ‌ಲವಾಗಿದ್ದರು.

Advertisement

ಕಳೆದ ವರ್ಷ ಆ. 20ರಂದು ನಡೆದ ಉಡಿನೆಸ್‌ ಕ್ಲಬ್‌ ವಿರುದ್ಧದ ಪಂದ್ಯದಲ್ಲಿ ಜುವೆಂಟಸ್‌ 3-0 ಗೋಲ್‌ಗ‌ಳಿಂದ ಗೆದ್ದಿತ್ತು. ಅನಂತರ ನಡೆದ ಪರೀಕ್ಷೆಯಲ್ಲಿ ಪೋಗ್ಬಾ ಟೆಸ್ಟೊಸ್ಟೆರೋನ್‌ ಎಂಬ ಉದ್ದೀಪನ ದ್ರವ್ಯ ಸೇವಿಸಿದ್ದು ಖಾತ್ರಿಯಾಗಿತ್ತು. ಅಕ್ಟೋಬರ್‌ನಲ್ಲಿ ಅವರ “ಬಿ’ ಸ್ಯಾಂಪಲ್‌ನಲ್ಲೂ ಉದ್ದೀಪನ ಸೇವಿಸಿದ್ದು ಖಚಿತವಾಗಿತ್ತು. ಇದೀಗ ಅಂತಿಮ ಫ‌ಲಿತಾಂಶ ಹೊರಬಿದ್ದಿದೆ. ಅದರ ಪ್ರಕಾರ ಅವರು ನಿಷೇಧಕ್ಕೊಳಗಾಗಿದ್ದಾರೆ. ಇಟಲಿಯ ಉದ್ದೀಪನ ನಿಗ್ರಹ ಸಂಸ್ಥೆ ಈ ನಿರ್ಧಾರ ಮಾಡಿದೆ.

ಇದರ ವಿರುದ್ಧ ಪೋಗ್ಬಾ ಸಿಡಿದೆದ್ದಿದ್ದಾರೆ. “ನಾನು ಯಾವುದೇ ತಪ್ಪನ್ನು ಮಾಡಿಲ್ಲ. ಇದರ ವಿರುದ್ಧ ಕ್ರೀಡಾ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸುತ್ತೇನೆ. ಈ ಆದೇಶದಿಂದ ನನಗೆ ಬೇಸರವಾಗಿದೆ, ಆಘಾತವಾಗಿದೆ, ಹೃದಯ ಒಡೆದುಹೋಗಿದೆ. ಇದುವರೆಗೆ ವೃತ್ತಿಜೀವನದಲ್ಲಿ ಏನೇನು ಗಳಿಸಿದ್ದೆನೋ ಅವನ್ನೆಲ್ಲ ಕಿತ್ತುಕೊಂಡಂತಾಗಿದೆ. ಕಾನೂನು ಬಂಧನದಿಂದ ಹೊರಬಂದ ಮೇಲೆ ಎಲ್ಲವನ್ನೂ ಬಹಿರಂಗ ಮಾಡುತ್ತೇನೆ’ ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next