Advertisement

ಮುಟ್ಟಿನ ರಜೆ ಕುರಿತ ನೀತಿ ರೂಪಿಸಿ: ಕೇಂದ್ರ ಸರ್ಕಾರಕ್ಕೆ ಶಿಫಾರಸು

11:01 PM Mar 15, 2023 | Team Udayavani |

ನವದೆಹಲಿ: ವೈದ್ಯಕೀಯ ಪ್ರಮಾಣಪತ್ರಗಳ ಅಗತ್ಯವಿಲ್ಲದೇ, ಮಹಿಳೆಯರಿಗೆ ನಿರ್ದಿಷ್ಟ ಅವಧಿಯ ಮುಟ್ಟಿನ ರಜೆ ಅಥವಾ ಅಸ್ವಸ್ಥತೆಗೆ ನೀಡುವ ರಜೆ, ಅರ್ಧ ಪಾವತಿ ರಜೆಯನ್ನು ಮಂಜೂರುಗೊಳಿಸುವ ಪ್ರಸ್ತಾಪವನ್ನು ಸಮ್ಮತಿಸುವಂತೆ ಹಾಗೂ ಈ ಕುರಿತ ನೀತಿ ರೂಪಿಸಲು ಸಂಸದೀಯ ಸ್ಥಾಯಿ ಸಮಿತಿ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದೆ.

Advertisement

ಬಿಜೆಪಿ ಸಂಸದ ಸುಶೀಲ್‌ ಕುಮಾರ್‌ ಮೋದಿ ನೇತೃತ್ವದ ಸಮಿತಿಯು ಈ ಪ್ರಸ್ತಾಪವನ್ನು ಕೇಂದ್ರದ ಮುಂದಿಟ್ಟಿದ್ದು, ನೀತಿ ನಿರೂಪಣೆಯಿಂದ ಸಂಘಟಿತ ವಲಯದಲ್ಲಿ ಮಹಿಳೆಯರ ಭಾಗವಹಿಸುವಿಕೆ ಹೆಚ್ಚುತ್ತದೆ. ಈ ಮೂಲಕ, ಲಿಂಗ ತಾರತಮ್ಯದ ಸಮಸ್ಯೆ ಬಗೆಹರಿಸಲು ಸಹಕಾರಿಯಾಗುತ್ತದೆ. ಮಹಿಳೆಯರ ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು, ಅವರ ವಿಶೇಷ ಅಗತ್ಯಗಳನ್ನು ಪೂರೈಸುವ ದೃಷ್ಟಿಯಿಂದ ನೀತಿ ರೂಪಿಸುವುದು ಸಮಂಜಸ ಎಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next