Advertisement
ಮೂಲೆಗಳನ್ನು ಭದ್ರಪಡಿಸಲು ಸಾಮಾನ್ಯವಾಗಿ ಎಲ್ಲಕ್ಕಿಂತ ಘಾಸಿಗೊಳಗಾಗಿ ಚಕ್ಕೆ ಏಳುವುದು, ಮಕ್ಕಾಗುವುದು ಮೂಲೆಗಳೇ. ಅದೇ ರೀತಿಯಲ್ಲಿ ಮೂಲೆಗಳನ್ನು ಸದೃಢಪಡಿಸಿದರೆ, ಮಧ್ಯಭಾಗವೂ ಗಟ್ಟಿಗೊಳ್ಳುತ್ತದೆ. ಆದುದರಿಂದ ಸಾಮಾನ್ಯವಾಗಿ ಮೂಲೆಗಳನ್ನು ಕಾಯ್ದುಕೊಳ್ಳಲು ವಿಶೇಷ ಚೌಕಟ್ಟುಗಳನ್ನು ನೀಡಲಾಗುತ್ತದೆ. ಮರದ ಪ್ಯಾನೆಲಿಂಗ್ ಅಥವಾ ಲ್ಯಾಮಿನೇಟ್ ಶೀಟುಗಳನ್ನು ಅಂಟಿಸಿದಾಗ – ಅವುಗಳ ಮೂಲೆ ಹೆಚ್ಚು ಹಾನಿಗೆ ಒಳಗಾಗುವ ಸಾಧ್ಯತೆ ಇರುವುದರಿಂದ, ಮರದ ಮೌಲ್ಡಿಂಗ್, ಬೀಡಿಂಗ್ ಪಟ್ಟಿಗಳನ್ನು ಬಳಸಿ ಸದೃಢಗೊಳಿಸಲಾಗುತ್ತದೆ. ವಾರ್ಡ್‌ರೋಬ್ ಗಳಲ್ಲಿ ಮುಖ್ಯವಾಗಿ ಬೀಗದ ಕೈ ತಾಗಿ ಲ್ಯಾಮಿನೇಟ್‌ಗಳ ಎಡ್ಜ್ ಮುರಿಯಬಹುದು. ಆದುದರಿಂದ ಟೀಕ್ ಇಲ್ಲವೆ ಇತರೆ ಮರದ ಚೌಕಟ್ಟನ್ನು ನೀಡಿ, ಗಟ್ಟಿಗೊಳಿಸುವುದರ ಜೊತೆಗೆ ಅದರ ಸೌಂದರ್ಯವನ್ನೂ ಹೆಚ್ಚಿಸಬಹುದು!
ಮನೆಯ ಹೊರಗೆ ಮುಖ್ಯವಾಗಿ ಒಂದೆರಡು ಇಂಚು ದಪ್ಪ ಹಾಗೂ ನಾಲ್ಕಾರು ಇಂಚು ಅಗಲದ ಫ್ರೆàಂ ಮಾದರಿಯ ಬೀಡಿಂಗ್ ಅನ್ನು ಸಿಮೆಂಟ್‌ನಲ್ಲಿ ಮಾಡುವುದುಂಟು. ಹೀಗೆ ಮಾಡುವುದರಿಂದ ಬಾಗಿಲು ಕಿಟಕಿಗಳ ಚೆಂದ ಹೆಚ್ಚುವುದರ ಜೊತೆಗೆ ಅವುಗಳಿಗೆ ಹೆಚ್ಚುವರಿ ರಕ್ಷಣೆಯೂ ಸಿಗುತ್ತದೆ. ಇತ್ತೀಚಿನ ದಿನಗಳಲ್ಲಿ ಆರು ಇಂಚಿನ ಕಾಂಕ್ರಿಟ್ ಬ್ಲಾಕಿನ ಉಪಯೋಗ ಹೆಚ್ಚಿದ್ದು, ಕಿಟಕಿ ಬಾಗಿಲುಗಳ ಫ್ರೆàಮ್ ಕಡೇಪಕ್ಷ ನಾಲ್ಕು ಇಂಚು ಇದ್ದರೂ ಹೊರಗೆ ಸುತ್ತಲೂ ಸುಮಾರು ಒಂದು ಇಂಚಿನಷ್ಟು ಮಾತ್ರ ಗೋಡೆ ಇರುತ್ತದೆ. ತೆರೆದ ಸ್ಥಳಗಳ ಮೇಲೆ ಸಜಾj ಇದ್ದರೂ, ಅಕ್ಕ ಪಕ್ಕದಿಂದ ಬೀಸುವ ಗಾಳಿ ಮಳೆಗೆ ಈ ಮೊದಲು ಇರುತ್ತಿದ್ದ ದಪ್ಪನೆಯ ಗೋಡೆಗಳಲ್ಲಿ ಹುದುಗಿಸಿ ಇಡುತ್ತಿದ್ದ ಕಿಟಕಿ ಬಾಗಿಲುಗಳಿಗೆ ಸಿಗುತ್ತಿದ್ದ ರೀತಿಯಲ್ಲಿ ಈಗ ರಕ್ಷಣೆ ಸಿಗುವುದಿಲ್ಲ. ಆದುದರಿಂದ ಹೆಚ್ಚುವರಿ ಚೌಕಟ್ಟು ಮಾಡಿದರೆ ಎಲಿವೇಷನ್ ಚೆನ್ನಾಗಿ ಕಾಣಿಸುವುದರ ಜೊತೆಗೆ ದುಬಾರಿ ಮರಮುಟ್ಟುಗಳಿಗೂ ರಕ್ಷಣೆ ಕೊಟ್ಟಂತಾಗುತ್ತದೆ. ನೋಟಕ್ಕೊಂದು ಚೌಕಟ್ಟು ಒದಗಿಸಿ
ಮನೆ ಇಡಿಯಾಗಿ ಇಲ್ಲವೇ ಅದರ ಒಂದು ಭಾಗ ಸುಂದರವಾಗಿ ಕಾಣಲು ಸೂಕ್ತ ಚೌಕಟ್ಟನ್ನು ಒದಗಿಸುವುದು ಅಗತ್ಯ. ನೀವೂ ಗಮನಿಸಿರಬಹುದು. ಛಾಯಾಗ್ರಾಹಕರು, ಕೈಯಲ್ಲಿ ಕ್ಯಾಮರ ಇಲ್ಲದಿದ್ದರೂ ಒಂದು ದೃಶ್ಯ ಇಲ್ಲವೇ ಮುಖವನ್ನು ನೋಡಲು ಒಂದು ಚೌಕಟ್ಟನ್ನು ಮಾಡಿಕೊಳ್ಳಲು ತಮ್ಮ ಎರಡೂ ಹೆಬ್ಬೆರಳುಗಳನ್ನು ಸೇರಿಸಿ ಅಡ್ಡಡ್ಡಕ್ಕೆ ಇಡುತ್ತಾರೆ. ತೋರುಬೆರಳುಗಳೆರಡನ್ನೂ ಲಂಬವಾಗಿಟ್ಟು ದಿಢೀರ್ ಫ್ರೆàಂ ಮಾಡಿಕೊಂಡು, ಅದರ ಮೂಲಕ ವೀಕ್ಷಿಸುತ್ತಾರೆ.
Related Articles
Advertisement
ಮನೆಯೊಳಗೆ ಫ್ರೆàಮ್ಲಿವಿಂಗ್ ಡೈನಿಂಗ್ ಮಧ್ಯೆ ಒಂದು ಆರ್ಚ್ – ಕಮಾನು ನೀಡಿ ಒಂದು ರೀತಿಯಲ್ಲಿ ಕಂಡೂ ಕಾಣದಂತೆ ಸ್ಥಳಗಳನ್ನು ವಿಭಜಿಸುವುದರ ಜೊತೆಗೆ ಅವುಗಳನ್ನು ಈ ಚೌಕಟ್ಟು ಸುಂದರಗೊಳಿಸುತ್ತವೆ. ಇದೇ ರೀತಿಯಲ್ಲಿ ಯುಟಿಲಿಟಿಗೆ ಹೋಗುವ ದಾರಿ ಹೆಚ್ಚು ತೆರೆದು ಕೊಂಡಿದ್ದರೆ, ಅದನ್ನು ಚಿಕ್ಕದಾಗಿಸಲೂ ಕೂಡ ಸಣ್ಣದೊಂದು ಚೌಕಟ್ಟು ನಿರ್ಮಿಸಿಕೊಳ್ಳಬಹುದು. ಈ ಚೌಕಟ್ಟು ವಿವಿಧ ಉಪಯೋಗಿ ಸ್ಥಳಗಳನ್ನು ನಿರ್ದಿಷ್ಟರೀತಿಯಲ್ಲಿ ಬೇರ್ಪಡಿಸಲೂ ಕೂಡ ಸಹಾಯಕಾರಿ. ಇತ್ತೀಚಿನ ದಿನಗಳಲ್ಲಿ ಓಪನ್ ಕಿಚನ್‌ಗಳು ಜನಪ್ರಿಯಗೊಳ್ಳುತ್ತಿದ್ದು, ಇದು ಅಡುಗೆ ಮನೆ- ಇದು ಊಟದ ಮನೆ ಎಂದು ಒಂದು ಮಟ್ಟದ ವರೆಗೂ ಗುರಿತಿಸಿಕೊಳ್ಳಲೂ ಸಹಾ ಆರ್ಚ್ ಇಲ್ಲ ಇತರೆ ರೀತಿಯ ಚೌಕಟ್ಟುಗಳು ಸಹಾಯಕಾರಿ. ಅಡ್ಡ ತಡೆಯದೆ ಹಿಡಿದಿಡುವ ಚೌಕಟ್ಟುಗಳು
ತೆರೆದ ಸ್ಥಳಗಳಲ್ಲಿ ಯಾರು ಬೇಕಾದರೂ ಹೇಗೆ ಬೇಕಾದರೂ ಓಡಾಡಬಹುದಾದರೂ ಅನೇಕ ಕಾರಣಗಳಿಂದಾಗಿ ಕೆಲವೊಂದು ಚೌಕಟ್ಟುಗಳು “ಲಕ್ಷ್ಮಣ ರೇಖೆ’ ಯಂತೆ ಕಾರ್ಯನಿರ್ವಹಿಸಬೇಕಾಗುತ್ತದೆ. ಮಕ್ಕಳು ತೀರಾ ಚಿಕ್ಕವರಿದ್ದಾಗ, ದೈಹಿಕವಾಗಿ ತಡೆಯುವಂತೆ ತಡೆಗಳನ್ನು ತಾತ್ಕಾಲಿಕವಾಗಿಯಾದರೂ ನೀಡಬೇಕಾಗುತ್ತದೆ. ಕಿಚನ್ ಪ್ರತ್ಯೇಕವಾಗಿದ್ದರೆ ಇವು ಸಾಮಾನ್ಯವಾಗಿ, ಮೋಟು ಬಾಗಿಲುಗಳಂತೆ ಇರುತ್ತವೆ. ಮಕ್ಕಳು ನಮಗೆ ಕಾಣುತ್ತಿದ್ದರೂ ಅವರು ಅಡುಗೆ ಮನೆ ಒಳಗೆ ಬರಲು ಆಗುವುದಿಲ್ಲ. ಮಕ್ಕಳು ದೊಡ್ಡವರಾದಮೇಲೆ, ಅಡಿಗೆ ಮನೆಯಲ್ಲಿ ಒಲೆ ಇದೆ. ಮಕ್ಕಳು ಒಳಹೊಕ್ಕರೆ ಸುಡುವ ಭೀತಿ ಇರುತ್ತದೆ. ಅದರಿಂದ ಒಳಗೆ ಬರಬೇಡಿ ಎಂದು ಹೇಳಿದರೆ ದೊಡ್ಡವರ ಮಾತು ಕೇಳಿಯಾರು. ಆದರೆ ಅವರಿಗೆ ಆ ಒಂದು ಲಕ್ಷ್ಮಣ ರೇಖೆಯನ್ನು ತೆರೆದ ಕಿಚನ್‌ಗಳಲ್ಲಿ ಹಾಕಿಕೊಡಲು ಕಷ್ಟ. ಆದುದರಿಂದ ತೆರೆದ ಕಿಚನ್‌ಗಳಲ್ಲಿ ಆರ್ಚ್ ಮಾದರಿಯ ಚೌಕಟ್ಟನ್ನು ನಿರ್ಮಿಸಿ. ಅದರ ಹೊರಗೆ ಉಳಿಯಬೇಕು ಎಂದರೆ, ಅದೂ ಒಂದು ರಕ್ಷಕ ಚೌಕಟ್ಟಾಗಿ ಉಳಿಯಬಲ್ಲದು! ಚೌಕಟ್ಟುಗಳು ತೀರ ಕ್ಲಿಷ್ಟಕರವಾಗಿದ್ದರೆ. ಚಿತ್ರಕ್ಕಿಂತ ಚೌಕಟ್ಟೇ ಪ್ರಧಾನವಾಗಿದ್ದರೆ, ಮೂಲ ಆಶಯಕ್ಕೆ ಕಂಟಕವಾಗಬಹುದು. ಆದರೆ ಸೂಕ್ತರೀತಿಯಲ್ಲಿ ಫ್ರೆàಂಗಳನ್ನು ಬಳಸಿದರೆ, ಲಾಭದ ಜೊತೆಗೆ ಸೌಂದರ್ಯವೂ ಹೆಚ್ಚುವುದರಲ್ಲಿ ಸಂಶಯವಿಲ್ಲ. ಹೆಚ್ಚಿನ ಮಾಹಿತಿಗೆ 98441 32826 – ಆರ್ಕಿಟೆಕ್ಟ್ ಕೆ ಜಯರಾಮ್