Advertisement

ಬೆಡ್‌ರೂಮ್‌ ನಲ್ಲಿರಲಿ ಸುವಾಸನೆಭರಿತ ಸಸ್ಯಗಳು

03:10 PM Sep 29, 2018 | |

ಮಲಗುವ ಕೋಣೆ ಸ್ವಚ್ಛ, ಸುಂದರವಾಗಿರಬೇಕು ಎಂಬುದು ಪ್ರತಿಯೊಬ್ಬರ ಬಯಕೆ. ಎಷ್ಟೇ ಸ್ವಚ್ಛ, ಸುಂದರವಾಗಿದ್ದರೂ ಸರಿಯಾಗಿ ನಿದ್ದೆ ಮಾಡಲಾಗದಿದ್ದರೆ ಎಲ್ಲವೂ ವ್ಯರ್ಥ, ಜೀವನದಲ್ಲಿ ಜುಗುಪ್ಸೆ ಮೂಡುವುದಿದೆ. ಬೆಡ್‌ ರೂಮ್‌ ಎಂದಾಕ್ಷಣ ಪ್ರತಿಯೊಬ್ಬರೂ ಬಯಸುವುದು ಸುಖ ನಿದ್ರೆಯನ್ನು. ಹೀಗಾಗಿ ಮಲಗಿದ ತತ್‌ ಕ್ಷಣ ನಿದ್ರೆ ಆವರಿಸಬೇಕು, ಮರುದಿನ ಫ್ರೆಶ್‌ ಆಗಿ ಏಳಬೇಕು ಎನ್ನುವವರು ಸುವಾಸನೆ ಭರಿತವಾದ ಕೆಲವೊಂದು ಗಿಡಗಳನ್ನು ಬೆಡ್‌ ರೂ ಮ್‌ನಲ್ಲಿರುಸುವುದು ಉತ್ತಮ.

Advertisement

ಅನಂತ ಪುಷ್ಪ
ಇದು ಬೆಡ್‌ ರೂಮ್‌ ಗೆ ಸೂಕ್ತವಾದ ಗಿಡ. ಇದರ ಹೊಳಪು ಕೊಠಡಿಗೆ ಉಲ್ಲಾಸದಾಯಕವಾದ ವಾತಾವರಣವನ್ನು ಒದಗಿಸುತ್ತದೆ. ಅಲ್ಲದೇ ಉತ್ತಮ ನಿದ್ರೆಗೂ ಇದು ಪೂರಕವಾಗಿದೆ.

ಮಲ್ಲಿಗೆ
ಎಲ್ಲರೂ ಇಷ್ಟಪಡುವ ಹೂವುಗಳಲ್ಲಿ ಮಲ್ಲಿಗೆಯೂ ಒಂದು. ಉತ್ತಮವಾಗಿ ನಿದ್ರೆ ಬರಬೇಕು ಜತೆಗೆ ಮನಸ್ಸು ಉಲ್ಲಾಸದಾಯಕವಾಗಿರಬೇಕು ಎಂದಾದರೆ ಮಲಗುವ ಕೋಣೆಗೆ ಹತ್ತಿರವಾಗಿ ಮಲ್ಲಿಗೆ ಗಿಡಗಳನ್ನು ನೆಡಿ. ಇದರ ಪರಿಮಳ ಹಿತಕರ ಭಾವನೆಯನ್ನು ಮೂಡಿಸಿ, ಮನಸ್ಸಿನ ಒತ್ತಡವನ್ನು ನಿವಾರಿಸಿ ರೂಮಿನ ಸುಗಂಧತೆಯನ್ನು ಹೆಚ್ಚಿಸುತ್ತದೆ.

ಲಾವೆಂಡರ್‌
ಮಲಗುವ ಕೋಣೆಯ ವಾತಾವರಣವನ್ನು ಹಿತಕರವಾಗಿರಿಸಿಕೊಳ್ಳಲು ಇದು ಅತ್ಯುತ್ತಮ ಸಸ್ಯ. ಸಂಶೋಧಕರ ಪ್ರಕಾರ ಲಾವೆಂಡರ್‌ ಗಿಡ ಮನಸ್ಸಿನ ಒತ್ತಡಗಳನ್ನು ಕಡಿಮೆ ಮಾಡುವ ಹಾಗೂ ಮನಸ್ಸಿಗೆ ಶಾಂತಿ ನೀಡುವ ಗುಣವನ್ನು ಹೊಂದಿದೆ. ಹೀಗಾಗಿ ಸುಖಕರ ನಿದ್ರೆಗೆ ಇದೂ ಪೂರಕ.

ಲಿಲ್ಲಿ
ದಣಿದ ಕಣ್ಣುಗಳಿಗೆ ರಿಲ್ಯಾಕ್ಸ್‌ ನೀಡುವ ಗಿಡ ಲಿಲ್ಲಿ. ಕೊಠಡಿಯಲ್ಲಿ ಪ್ರಶಾಂತ ವಾತಾವಲ್ಲಿ ನಿರ್ಮಿಸುತ್ತದೆ. ಇದು ಕೂಡ ಮನಸ್ಸಿನ ಒತ್ತಡವನ್ನು ನಿವಾರಿಸಿ, ಬೆಳಗ್ಗೆ ಫ್ರೆಶ್‌ ಆಗಿ ಏಳಲು ಸಹಾಯ ಮಾಡುತ್ತದೆ.

Advertisement

ಜರ್ಬೆರಾ
ಕೊಠಡಿಯ ಅಂಧವನ್ನು ಇಮ್ಮಡಿಗೊಳಿಸುವ ಜರ್ಬೆರಾ ಹೂವು ಕೂಡ ಮನಸ್ಸಿನ ಒತ್ತಡವನ್ನು ನಿವಾರಿಸಿ ಸುಖ ನಿದ್ರೆಯನ್ನು ನೀಡುತ್ತದೆ. ಹೀಗೆ ಹಲವಾರು ಸಸ್ಯಗಳು ಬೆಡ್‌ ರೂಮ್‌ ನ ಅಂದವನ್ನು ಹೆಚ್ಚಿಸುವುದು ಮಾತ್ರವಲ್ಲ ನೆಮ್ಮದಿಯ ವಾತಾವರಣವನ್ನು ಕಲ್ಪಿಸಿಕೊಡುತ್ತದೆ. ಇದರಿಂದ ನಿದ್ರೆ ಪರಿಪೂರ್ಣಗೊಂಡು ಮನಸ್ಸನ್ನು ಉಲ್ಲಸಿತಗೊಳಿಸಲು ಸಹಾಯಕವಾಗುತ್ತವೆ.

ಪ್ರೀತಿ ಭಟ್‌, ಗುಣವಂತೆ

Advertisement

Udayavani is now on Telegram. Click here to join our channel and stay updated with the latest news.

Next