ಬೆಂಗಳೂರು: ರಾಜ್ಯದಲ್ಲಿ ರವಿವಾರವ ಕೋವಿಡ್ ಸೋಂಕಿನ ಪ್ರಮಾಣದಲ್ಲಿ ಏರಿಕೆ ಕಂಡು ಬಂದಿದೆ.
241 ಪಾಸಿಟಿವ್ ವರದಿಯಾಗಿದ್ದು, ಸಕ್ರಿಯ ಪ್ರಕರಣ 2041ಕ್ಕೆ ಏರಿಕೆಯಾಗಿದೆ. ಬೆಂಗಳೂರು ನಗರ 232, ದ.ಕ. 4, ತುಮಕೂರು 3, ಬೆಳಗಾವಿ 2 ಪಾಸಿಟಿವ್ ವರದಿಯಾಗಿದೆ.
ಬಾಗಲಕೋಟೆ, ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೀದರ್, ಚಾಮರಾಜನಗರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಗೆರೆ, ಧಾರವಾಡ, ಗದಗ, ಹಾಸನ, ಹಾವೇರಿ, ಕಲಬುರಗಿ, ಕೊಡಗು, ಕೋಲಾರ, ಕೊಪ್ಪಳ, ಮಂಡ್ಯ, ಮೈಸೂರು, ರಾಯಚೂರು, ರಾಮನಗರ, ಶಿವಮೊಗ್ಗ, ಉಡುಪಿ, ಉ.ಕ., ವಿಜಯಪುರ ಹಾಗೂ ಯಾದಗಿರಿ ಜಿಲ್ಲೆಯಲ್ಲಿ ಶೂನ್ಯ ಪಾಸಿಟಿವ್ ವರದಿಯಾದೆ.
200ರ ಗಡಿ ದಾಟಿದ ಕೊರೊನಾ ಸೋಂಕು
ನಗರದಲ್ಲಿ ಮತ್ತೆ ಕೊರೊನಾ ಸ್ಫೋಟಗೊಂಡಿದ್ದು ಭಾನುವಾರ ಒಂದೇ ದಿನ 232 ಜನರಿಗೆ ಸೋಂಕು ದೃಢಪಟ್ಟಿದೆ. ಆಮೂಲಕ ಕೊರೊನಾ ನಾಲ್ಕನೆ ಅಲೆ ಭೀತಿ ಹೆಚ್ಚುವಂತಾಗಿದೆ.
ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ. ಕಳೆದ ಏಳೆಂಟು ತಿಂಗಳ ನಂತರ ಇದೇ ಮೊದಲ ಬಾರಿಗೆ ಕೊರೊನಾ ಸೋಂಕಿತರ ಸಂಖ್ಯೆ 200ರ ಗಡಿ ದಾಟಿದೆ. ಭಾನುವಾರ 232 ಜನರಲ್ಲಿ ಸೋಂಕು ಕಾಣಿಸಿಕೊಂಡಿದ್ದು, ಆಮೂಲಕ ಸಕ್ರಿಯ ಪ್ರಕರಣಗಳ ಸಂಖ್ಯೆ 1,943ಕ್ಕೆ ಏರಿದೆ. 98 ಜನರು ಸೋಂಕಿನಿಂದ ಮುಕ್ತರಾಗಿದಾರೆ. 12,930 ಜನರನ್ನು ಕೊರೊನಾ ಸೋಂಕಿನ ಪರೀಕ್ಷೆಗೊಳಪಡಿಸಲಾಗಿದ್ದು, ಪಾಸಿಟಿವಿಟಿ ದರ ಶೇ. 1.20 ನಿಗದಿಯಾಗಿದೆ. 19,167 ಜನರಿಗೆ ಮೊದಲ, ಎರಡನೇ ಹಾಗೂ ಬೂಸ್ಟರ್ ಡೋಸ್ ಕೊರೊನಾ ವ್ಯಾಕ್ಸಿನ್ ನೀಡಲಾಗಿದೆ.