Advertisement

ಸಾಂಸ್ಥಿಕ ಕ್ವಾರಂಟೈನ್‌ನಿಂದ ನಾಲ್ವರ ಬಿಡುಗಡೆ

12:23 PM Jun 02, 2020 | mahesh |

ಮೊಳಕಾಲ್ಮೂರು: ಪಟ್ಟಣದ ಹೊರವಲಯದಲ್ಲಿರುವ ಮೊರಾರ್ಜಿ ದೇಸಾಯಿ ಬಾಲಕಿಯರ ವಸತಿ ನಿಲಯದಲ್ಲಿ ಸಾಂಸ್ಥಿಕ ಕ್ವಾರಂಟೈನಲ್ಲಿದ್ದ 4 ಜನರನ್ನು ಬಿಡುಗಡೆಗೊಳಿಸಿ ಹೋಂ ಕ್ವಾರಂಟೈನ್‌ಗೆ ಕಳುಹಿಸಲಾಗಿದೆ. ತಾಲೂಕಿನಲ್ಲಿ ಸಾಂಸ್ಥಿಕ ಕ್ವಾರಂಟೈನ್‌ ಕೇಂದ್ರಗಳನ್ನು ಪ್ರಾರಂಭಗೊಳಿಸಿ ಒಟ್ಟಾರೆಯಾಗಿ 22 ಜನರನ್ನು ಸಾಂಸ್ಥಿಕ ಕ್ವಾರಂಟೈನ್‌ ಅಲ್ಲಿ ಇರಿಸಲಾಗಿತ್ತು. ಸಾಂಸ್ಥಿಕ ಕ್ವಾರಂಟೈನ್‌ ಅವಧಿ  ಪೂರ್ಣಗೊಂಡಂತೆ ಹಂತ ಹಂತವಾಗಿ ಈ ಹಿಂದೆ 18 ಜನರನ್ನು ಬಿಡುಗಡೆಗೊಳಿಸಿ ಹೋಂ ಕ್ವಾರಂಟೈನ್‌ಗೆ ಕಳುಹಿಸಲಾಗಿತ್ತು. ಉಳಿದ 4 ಜನರ ಸಾಂಸ್ಥಿಕ ಕ್ವಾರಂಟೈನ್‌ನ 7 ದಿನಗಳ ಅವಧಿ ಪೂರ್ಣಗೊಂಡಿದ್ದರಿಂದ 4 ಜನರನ್ನು ಬಿಡುಗಡೆಗೊಳಿಸಲಾಗಿದೆ. ಸಾಂಸ್ಥಿಕ ಕ್ವಾರಂಟೈನ್‌ ಅಲ್ಲಿದ್ದವರೆಲ್ಲರೂ ಹೋಂ ಕ್ವಾರಂಟೈನ್‌ಗೆ ಕಳುಹಿಸಿರುವುದರಿಂದ ಸಾಂಸ್ಥಿಕ ಕ್ವಾರಂಟೈನ್‌ಗೆ ಬಳಸಿದ ಮೊರಾರ್ಜಿ ವಸತಿ ಶಾಲೆ ಮತ್ತು ಆರ್‌ಎಂಎಸ್‌ಎ ಬಾಲಕಿಯರ ವಸತಿ ಶಾಲೆಯ ಕಟ್ಟಡಗಳನ್ನು ರಾಸಾಯನಿಕಗಳಿಂದ ಸಿಂಪಡಣೆ ಮಾಡಿ ಸ್ವಚ್ಛಗೊಳಿಸಲಾಯಿತು.

Advertisement

ಮುಂದಿನ ದಿನಗಳಲ್ಲಿ ಹೊರ ರಾಜ್ಯಗಳಿಂದ ಬಂದವರನ್ನು ಸಾಂಸ್ಥಿಕ ಕ್ವಾರಂಟೈನ್‌ ನಲ್ಲಿಡಲು ಸಿದ್ಧತೆಗೊಳಿಸಲಾಗಿದೆ. ಈ ಸಂದರ್ಭದಲ್ಲಿ ತಹಶೀಲ್ದಾರ್‌
ಎಂ.ಬಸವರಾಜ್‌ ಮಾತನಾಡಿ, ಹೋಂ ಕ್ವಾರಂಟೈನ್‌ಗೆ ಹೋಗುವವರಿಗೆ ತಿಳಿವಳಿಕೆ ಪತ್ರ ನೀಡುವುದರೊಂದಿಗೆ ಮುಂಜಾಗ್ರತ ಕ್ರಮ ಪಾಲಿಸಬೇಕಾಗಿದೆ. ಮುಂದಿನ 7 ದಿನಗಳಲ್ಲಿ ಹೋಂ ಕ್ವಾರಂಟೈನ್‌ನಲ್ಲಿ ಇರಲು ಪ್ರತ್ಯೇಕ ಕೋಣೆ, ಶೌಚಾಲಯ ಮತ್ತು ಬಾತ್‌ ರೂಂ ಬಳಸಬೇಕಾಗಿದೆ. ಕಡ್ಡಾಯವಾಗಿ ಮಾಸ್ಕ್ ಇಲ್ಲವೆ ಕರಸವಸ್ತ್ರ ಧರಿಸಿ ಹೊರಗಡೆ ಹೋಗದೆ ಮನೆಯಲ್ಲಿಯೇ ವಿಶ್ರಾಂತಿ ತೆಗದುಕೊಳ್ಳಬೇಕು. ಪೌಷ್ಟಿಕ ಆಹಾರ, ವೈಯುಕ್ತಿಕ ಸ್ವಚ್ಛತೆ, ಸುತ್ತಮುತ್ತಲಿನ ಸ್ವಚ್ಛತೆ ಕಾಪಾಡಿಕೊಳ್ಳಬೇಕಾಗಿದೆ.

ಜ್ವರ, ಕೆಮ್ಮು ಇತ್ಯಾದಿ ರೋಗ ಲಕ್ಷಣಗಳು ಕಂಡು ಬಂದಲ್ಲಿ ಹೊರಗಡೆ ಬರದೆ ತಕ್ಷಣವೇ ಮೊಬೈಲ್‌ ಕರೆ ಮೂಲಕ ತಹಶೀಲ್ದಾರ್‌ ಇಲ್ಲವೆ ತಾಲೂಕು
ಆರೋಗ್ಯಾ ಧಿಕಾರಿಗಳ ಗಮನಕ್ಕೆ ತರಬೇಕಾಗಿದೆ ಎಂದು ತಿಳಿಸಿದರು.

ತಾಲೂಕು ಆರೋಗ್ಯಾಧಿ ಕಾರಿ ಡಾ| ಪದ್ಮಾವತಿ, ಜಿಲ್ಲಾ ಆರೋಗ್ಯ ಶಿಕ್ಷಣಾಧಿ ಕಾರಿ ಡಿ.ಚಿದಾನಂದಪ್ಪ, ತಾಲೂಕು ಸಮಾಜಕಲ್ಯಾ ಣಾಧಿಕಾರಿ ಪ್ರೇಮನಾಥ,
ಮೊರಾರ್ಜಿ ವಸತಿ ಶಾಲೆಯ ಪ್ರಾಂಶುಪಾಲ ನಾಗರಾಜ್‌, ಜಿಲ್ಲಾ ಆರೋಗ್ಯ ಮೇಲ್ವಿಚಾರಕರಾದ ಶ್ರೀನಿವಾಸ್‌, ತಿಪ್ಪೇಶ್‌, ಸಿಪಿಐನ ಜಾಫರ್‌, ಆರ್‌.ಐ.
ಉಮೇಶ್‌ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next