Advertisement

ಹೈದರಾಬಾದ್‌ ಗ್ಯಾಂಗ್‌ರೇಪ್‌ ಪ್ರಕರಣ: ನಾಲ್ಕನೇ ಆರೋಪಿ ಬಂಧನ

09:33 PM Jun 05, 2022 | Team Udayavani |

ಹೈದರಾಬಾದ್‌: ಹೈದರಾಬಾದ್‌ನಲ್ಲಿ ಅಪ್ರಾಪ್ತೆಯ ಮೇಲೆ ನಡೆದಿದ್ದ ಗ್ಯಾಂಗ್‌ರೇಪ್‌ ಪ್ರಕರಣದ ನಾಲ್ಕನೇ ಆರೋಪಿಯನ್ನು ಪೊಲೀಸರು ಭಾನುವಾರ ಬಂಧಿಸಿದ್ದಾರೆ.

Advertisement

ಈ ಮೂಲಕ ಬಂಧಿತರ ಸಂಖ್ಯೆ 4ಕ್ಕೇರಿದ್ದು, 5ನೇ ಆರೋಪಿಗಾಗಿ ಹುಡುಕಾಟ ಮುಂದುವರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಕರಣದಲ್ಲಿ ಎಐಎಂಐಎಂ ಪಕ್ಷದ ಶಾಸಕರೊಬ್ಬರ ಪುತ್ರನೊಬ್ಬ ಭಾಗಿಯಾಗಿರುವುದನ್ನು ಪೊಲೀಸರು ಉದ್ದೇಶಪೂರ್ವಕವಾಗಿ ಮುಚ್ಚಿ ಹಾಕುತ್ತಿದ್ದಾರೆ ಎಂದು ಹೈದರಾಬಾದ್‌ನ ಬಿಜೆಪಿ ಶಾಸಕ ರಘುನಂದನ್‌ ರಾವ್‌ ಆರೋಪಿಸಿದ್ದಾರೆ.

ಘಟನೆ ನಡೆದ ದಿನ ಅಪ್ರಾಪ್ತೆಯು ಆರೋಪಿಗಳೊಂದಿಗೆ ಸುತ್ತಾಡಿರುವ ಪ್ರಾಂತ್ಯಗಳಿಂದ ಪಡೆಯಲಾದ ಸಿಸಿಟಿವಿ ದೃಶ್ಯಾವಳಿಗಳನ್ನು ರಘುನಂದನ್‌ ರಾವ್‌ ಬಿಡುಗಡೆ ಮಾಡಿದ್ದು, ಎಐಎಂಐಎಂ ಶಾಸಕರ ಪುತ್ರನೂ ಇದರಲ್ಲಿ ಭಾಗಿಯಾಗಿರುವುದು ಈ ವಿಡಿಯೋಗಳಿಂದ ತಿಳಿದುಬರುತ್ತದೆ ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next