Advertisement

ಭಾರತೀಯ ವಿದ್ಯಾರ್ಥಿಗಳಿಗೆ ನಾಲ್ಕು ವರ್ಷದ ವೀಸಾ?

08:20 AM Jun 17, 2020 | mahesh |

ಲಂಡನ್‌: ವಿದೇಶಿಯರಿಗೆ ನೀಡಲಾಗುವ “ಅಧ್ಯಯನ ನಂತರದ ವೀಸಾ’ವನ್ನು ನಾಲ್ಕು ವರ್ಷಗಳಿಗೆ ದ್ವಿಗುಣಗೊಳಿಸಬೇಕೆಂದು ನೂತನ ವರದಿಯೊಂದು ಬ್ರಿಟನ್‌ ಸರಕಾರಕ್ಕೆ ಸಲಹೆ ನೀಡಿದೆ. ಇದರಿಂ­ದಾಗಿ 2024ರ ವೇಳೆಗೆ ಭಾರತೀಯ ವಿದ್ಯಾರ್ಥಿಗಳು ಬ್ರಿಟನ್‌ನ ವಿಶ್ವವಿದ್ಯಾಲಯಗಳನ್ನು ಆಯ್ಕೆ ಮಾಡಿಕೊ­ಳ್ಳುವ ಸಾಧ್ಯತೆ ದ್ವಿಗುಣಗೊಳ್ಳುವ ನಿರೀಕ್ಷೆ ಇದೆ ಎಂದು ಆಶಿಸಲಾಗಿದೆ.

Advertisement

ಬ್ರಿಟನ್‌ನ ಮಾಜಿ ಸಚಿವ ಜೋ ಜಾನ್ಸನ್‌ ಈ ಬಗ್ಗೆ ವರದಿ ಸಿದ್ಧ ಪಡಿಸಿದ್ದು, ಕೋವಿಡ್ ಹಿನ್ನೆಲೆಯಲ್ಲಿ ಶೇ.50-75ರಷ್ಟು ವಿದೇಶಿ ವಿದ್ಯಾರ್ಥಿಗಳು ವ್ಯಾಸಂಗ ಮೊಟಕುಗೊಳಿಸುವ ಸಾಧ್ಯತೆ ಇದೆ. ಇದು ದೇಶದ ಉನ್ನತ ಶಿಕ್ಷಣ ವಲಯಕ್ಕೆ ಸವಾಲಾಗಲಿದೆ. ಪದವಿಯ ಕೊನೆಯಲ್ಲಿ ಕೆಲಸ ಮಾಡುವ ಅವಕಾಶ ವಿಸ್ತರಣೆ, ಭಾರತೀಯ ವಿದ್ಯಾರ್ಥಿಗಳನ್ನು ಕಡಿಮೆ-ಅಪಾಯದ ವಿದ್ಯಾರ್ಥಿ ವೀಸಾ ವಿಭಾಗದಲ್ಲಿ ಸೇರಿಸುವುದರಿಂದ, ಭಾರತೀಯ ವಿದ್ಯಾರ್ಥಿ ಗಳನ್ನು ಸೆಳೆಯಲು ಅನುಕೂಲವಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಭಾರತೀಯ ವಿದ್ಯಾರ್ಥಿಗಳು ಬ್ರಿಟನ್‌ನ ವಿವಿಗಳನ್ನು ಹೆಚ್ಚಾಗಿ ಆಯ್ಕೆ ಮಾಡಿಕೊಳ್ಳುತ್ತಿರುವುದು ಕಂಡು ಬರುತ್ತಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next