ಪಾಂಡವಪುರ: ಕೋವಿಡ್ ಹಿನ್ನೆಲೆಯಲ್ಲಿ ತಾಲೂಕಿನ 4 ಗ್ರಾಮಗಳನ್ನು ಸೀಲ್‌ಡೌನ್ ಮಾಡಲಾಗಿದ್ದು, 10 ಮಂದಿ ಬಲಿಯಾಗಿದ್ದಾರೆ. ಜತೆಗೆ112 ಮಂದಿಗೆ ಪಾಸಿಟಿವ್ ಕಾಣಿಸಿಕೊಂಡಿದ್ದು ಸೋಂಕಿತರ ಸಂಖ್ಯೆ 754ಕ್ಕೇರಿದೆ.
ಗ್ರಾಮಗಳು: ತಾಲೂಕಿನ ಮಾಣಿಕ್ಯನಹಳ್ಳಿ ಗ್ರಾಪಂಗೆ ಸೇರಿದ ಎಂ.ಶೆಟ್ಟಹಳ್ಳಿ ಹಾಗೂ ನಾರಾಯಣಪುರ ಗ್ರಾಪಂಗೆ ಸೇರಿದ ವಳಗೆರೆದೇವರಹಳ್ಳಿ, ಕೋಡಾಲ ಗ್ರಾಮ ಹಾಗೂ ಹೊನಗಾನಹಳ್ಳಿ ಗ್ರಾಪಂಗೆ ಸೇರಿದಕಣಿವೆಕೊಪ್ಪಲು ಗ್ರಾಮದಲ್ಲಿ ಒಂದೇ ದಿನದಲ್ಲಿ 25ಕ್ಕೂ ಹೆಚ್ಚು ಮಂದಿಗೆ ಸೋಂಕು ದೃಢಪಟ್ಟ ಹಿನ್ನೆಲೆ ತಾಲೂಕು ಆಡಳಿತದ ಸೂಚನೆ ಮೇರೆಗೆ ಗ್ರಾಪಂ ಆಡಳಿತ ಸೀಲ್‌ಡೌನ್ ಮಾಡಿದೆ.
ಸೀಲ್‌ಡೌನ್ ಗ್ರಾಮಗಳು: ವಳಗೆರೆದೇವರಹಳ್ಳಿ, ಕೋಡಾಲ, ಎಂ.ಶೆಟ್ಟಹಳ್ಳಿ ಹಾಗೂ ಕಣಿವೆಕೊಪ್ಪಲು ಗ್ರಾಮದಲ್ಲಿ 25ಕ್ಕೂ ಮಂದಿಗೆ ಕೋವಿಡ್ ಪಾಸಿಟಿವ್ ಪತ್ತೆಯಾಗಿರುವುದರಿಂದ ತಹಶೀಲ್ದಾರ್ ಪ್ರಮೋದ್ ಎಲ್.ಪಾಟೀಲ್ ಹಾಗೂ ತಾಲೂಕು ಆರೋಗ್ಯಾಧಿಕಾರಿ ಡಾ.ಸಿ.ಎ.ಅರವಿಂದ್ ಮಾರ್ಗ ದರ್ಶನದಲ್ಲಿ ಸೀಲ್‌ಡೌನ್ ಮಾಡಿ ಎಚ್ಚರಿಕೆ ನಾಮಫಲಕ ಪ್ರಕಟಿಸಿ ನಾಕಾಬಂದಿ ಹಾಕಲಾಗಿದೆ.
ಕಳೆದ 3 ದಿನಗಳ ಹಿಂದೆ ತಾಲೂಕಿನ ವಳಗೆರೆ ದೇವರ ಹಳ್ಳಿ ಗ್ರಾಮವನ್ನು ಸೀಲ್‌ಡೌನ್ ಮಾಡಲಾಗಿತ್ತು.
10 ಮಂದಿ ಕೋವಿಡ್ ಗೆ ಬಲಿ: ಶುಕ್ರವಾರ ದಿನದಂದೇ ತಾಲೂಕಿನಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದ 10 ಮಂದಿ ಶ್ವಾಸಕೋಶ ಮತ್ತು ಉಸಿರಾಟದ ತೊಂದರೆಯಿಂದ ಕೊರೊನಾಗೆ ಬಲಿಯಾಗಿದ್ದಾರೆ.ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೊರೊನಾ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದ ತಾಲೂಕಿನ ಹಿರೇಮರಳಿ ಗ್ರಾಮದ ಯಶೋಧಮ್ಮ (75), ಕ್ಯಾತನಹಳ್ಳಿ ಗ್ರಾಮದ ಶಂಕರ್ (55), ಬಳೇಅತ್ತಿಗುಪ್ಪೆ ಗ್ರಾಮದ ಮಹೇಶ್ (37), ಪಾಂಡವಪುರ ಸರ್ಕಾರಿಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬನ್ನಂಗಾಡಿಗ್ರಾಮದ ಮಹದೇವಮ್ಮ (48), ಹರವು ಗ್ರಾಮದ ರಾಜು (35),ಹೋಂ ಐಸೋಲೇಷನ್ ಕ್ವಾರಂಟೈನ್ ನಲ್ಲಿದ್ದ ಮಾರ್ಮಳ್ಳಿಯ ತಾಯಮ್ಮ (40), ವದೇಸಮುದ್ರ ಗ್ರಾಮದ ಈರಣ್ಣಚಾರಿ (54),ಚಿಕ್ಕ ಬ್ಯಾಡರಹಳ್ಳಿ ಗ್ರಾಮದ ಕೃಷ್ಣೇಗೌಡ (30), ಡಾಮಡಹಳ್ಳಿ ಗ್ರಾಮದ ಭಾಗ್ಯಾ (35), ಡಿಂಕಾ ಶೆಟ್ಟಹಳ್ಳಿಯ ಚಂದ್ರೇಗೌಡ (50), ಶ್ಯಾದನಹಳ್ಳಿ ಯ ದೇವಮ್ಮ (75) ಬಲಿಯಾಗಿದ್ದಾರೆ. ಸ್ವಯಂ ಪ್ರೇರಿತ ಬಂದ್: ತಾಲೂಕಿನ ಚಿನಕುರಳಿಗ್ರಾಮ ದಲ್ಲಿ ಸ್ವಯಂ ಪ್ರೇರಿತವಾಗಿ ಅಂಗಡಿಮುಂಗಟ್ಟು ಮುಚ್ಚಿ ಮುಂದಿನ 5 ದಿನಗಳ ಕಾಲ ಸಂಪೂರ್ಣ ಬಂದ್ ಮಾಡಲು ತೀರ್ಮಾನಿಸಿ ಲಾಕ್‌ಡೌನ್ ಮಾಡಿದರು.