Advertisement

ನಾಲ್ವರು ಉಗ್ರರ ಹತ್ಯೆ

05:39 AM Mar 29, 2019 | mahesh |

ಶ್ರೀನಗರ: ಜಮ್ಮು ಕಾಶ್ಮೀರದ ಶೋಪಿಯಾನ್‌ ಹಾಗೂ ಕುಪ್ವಾರಾ ಜಿಲ್ಲೆಗಳಲ್ಲಿ ಗುರುವಾರ ನಡೆದ ಎರಡು ಪ್ರತ್ಯೇಕ ಗುಂಡಿನ ಚಕಮಕಿಗಳಲ್ಲಿ ನಾಲ್ವರು ಉಗ್ರರನ್ನು ಹತ್ಯೆಗೈಯ್ಯಲಾಗಿದೆ. ಶೋಪಿಯನ್‌ನ ಯವ್ರಾನ್‌ ಅರಣ್ಯ ಪ್ರದೇಶದಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಪುಲ್ವಾಮಾದ ಸಾಜದ್‌ ಖಾಂಡೆ, ಅಕಿಬ್‌ ಅಹ್ಮದ್‌ ದರ್‌ ಹಾಗೂ ಬಷಾರತ್‌ ಅಹ್ಮದ್‌ ಮಿರ್‌ ಎಂಬ ಮೂವರು ಹತರಾದರು. ಇನ್ನು, ಕುಪ್ವಾರಾದ ಹಂದ್ವಾರಾದಲ್ಲಿ ನಡೆದ ಮತ್ತೂಂದು ಗುಂಡಿನ ಚಕಮಕಿಯಲ್ಲಿ ಮತ್ತೂಬ್ಬ ಉಗ್ರ ಅಸುನೀಗಿದ್ದಾನೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next