ಹೈದರಾಬಾದ್: ಕುರಿ ವಿತರಣೆ ಯೋಜನೆಯಲ್ಲಿ ನಡೆದಿದೆ ಎನ್ನಲಾದ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ತೆಲಂಗಾಣದ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ನಾಲ್ವರು ಸರ್ಕಾರಿ ಅಧಿಕಾರಿಗಳನ್ನು ಬಂಧಿಸಿದೆ.
ಪಶುಸಂಗೋಪನಾ ಇಲಾಖೆಯ ಅಧಿಕಾರಿಗಳ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ದುರ್ಬಳಕೆ ಪ್ರಕರಣದ ತನಿಖೆಯ ಭಾಗವಾಗಿ ಈ ಬಂಧನಗಳು ನಡೆದಿವೆ ಎಂದು ಹೇಳಲಾಗಿದೆ.
ಬಂಧಿತರಲ್ಲಿ ಸಹಾಯಕ ನಿರ್ದೇಶಕರಾದ ಡಿ ರವಿ ಮತ್ತು ಎಂ ಆದಿತ್ಯ ಕೇಶವ ಸಾಯಿ, ಜಿಲ್ಲಾ ಅಂತರ್ಜಲ ಅಧಿಕಾರಿ ಶ್ರೀ ಪಸುಲ ರಘುಪತಿ ರೆಡ್ಡಿ ಮತ್ತು ವಯಸ್ಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಶ್ರೀ ಸಂಗು ಗಣೇಶ್ ಸೇರಿದ್ದಾರೆ.
ಈ ನಾಲ್ವರು ಅಧಿಕಾರಿಗಳು ವಂಚನೆಯ ಬೇನಾಮಿ ಖಾತೆಗಳನ್ನು ನಿರ್ಮಿಸಲು ಖಾಸಗಿ ಸಂಸ್ಥೆಗಳೊಂದಿಗೆ ಕೆಲಸ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ, ಇದರ ಪರಿಣಾಮವಾಗಿ ಸುಮಾರು 2.10 ಕೋಟಿ ಸರ್ಕಾರದ ಹಣವನ್ನು ದುರುಪಯೋಗಪಡಿಸಲಾಗಿದೆ.
ಸರಕಾರದ ಬೊಕ್ಕಸಕ್ಕೆ ದೊಡ್ಡ ಮಟ್ಟದ ಆರ್ಥಿಕ ನಷ್ಟ ಉಂಟುಪಡಿಸಿದ ಆಧಾರದ ಮೇಲೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಲಾಗಿದ್ದು ಸದ್ಯ ಬಂಧಿತರನ್ನು ವಿಶೇಷ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಿದೆ.
ಇದನ್ನೂ ಓದಿ: ದೇವಸ್ಥಾನದ ಉತ್ಸವದ ವೇಳೆ ಸಿಪಿಎಂ ಕಾರ್ಯಕರ್ತನ ಬರ್ಬರ ಹತ್ಯೆ… ಇಂದು ಬಂದ್ ಗೆ ಕರೆ