Advertisement
ನಗರದ ವಿವಿಧ ಬಡಾವಣೆಗಳ ನಿವಾಸಿಗಳಾದ 64 ವರ್ಷದ (ಪಿ-751), ಮಧ್ಯ ವಯಸ್ಕ 53 (ಪಿ-752), ಯುವಕರಾದ 34 ವರ್ಷದ (ಪಿ-787), 26 ವರ್ಷದ (ಪಿ-788) ಕೋವಿಡ್-19 ಕೊರೊನಾ ಗೆದ್ದು ಬಂದವರು. ಗುಜರಾತಿನ ಅಹಮದಾಬಾದಿನಿಂದ ಮೇ 5 ರಂದು ಜಿಲ್ಲೆಗೆ ಮರಳಿದ 15 ಜನ ತಬ್ಲೀಘಿಗಳ ಪೈಕಿ ಮೇ 8 ಮತ್ತು 9 ರಂದು ತಲಾ ಮೂವರು ಸೇರಿ ಒಟ್ಟು ಆರು ಜನರಿಗೆ ಕೋವಿಡ್-19 ಸೋಂಕು ದೃಢಪಟ್ಟಿತ್ತು. ಅದರಲ್ಲಿ ನಾಲ್ವರು ಎರಡು ವಾರಗಳ ಚಿಕಿತ್ಸೆ ಪಡೆದು ಗುಣಮುಖರಾಗಿ ಹೊರಬಂದಿದ್ದಾರೆ. ಈ ವೇಳೆ ಕೊರೊನಾ ಗೆದ್ದು ಬಂದ ನಾಲ್ವರಲ್ಲೂ ಮಂದಹಾಸ ಮೂಡಿತ್ತು. ಜತೆಗೆ ಆರೋಗ್ಯ ಇಲಾಖೆ ಹಾಗೂಜಿಲ್ಲಾಡಳಿತ ಶುಶ್ರೂಷೆ ಮಾಡಿದ ವೈದ್ಯರು ನರ್ಸ್‌ಗಳು ಸೇರಿದಂತೆ ಎಲ್ಲ ಸಿಬ್ಬಂದಿಗೆ ಕೃತಜ್ಞತೆ ಸಲ್ಲಿಸಿದರು. ಓರ್ವ ವೃದ್ಧರಂತೂ ನನ್ನ ಮಕ್ಕಳಿಗಿಂತಲೂ ಹೆಚ್ಚಾಗಿ ನಮ್ಮನ್ನು ನೋಡಿಕೊಂಡಿದ್ದಾರೆ. ಯಾವಾಗ ಕರೆದರೂ ಬಂದು ಚಿಕಿತ್ಸೆ ನೀಡಿದ್ದಾರೆ. ಅವರಿಗೆ ಒಳ್ಳೆಯದಾಗಲಿ ಎಂದರು. ಮತ್ತೋರ್ವ
ಯುವಕ ಮಾತನಾಡಿ, ಕೊರೊನಾ ಸೋಂಕಿನ ಕಾರಣಕ್ಕೆ ಮಾನಸಿಕವಾಗಿ ಕುಗ್ಗಿ ಹೋಗಿದ್ದೆವು. ಆದರೆ ಇಲ್ಲಿ ನಮಗೆ ಚಿಕಿತ್ಸೆ ನೀಡಿದ ಸಿಬ್ಬಂದಿ ನಮಗೆ ಧೈರ್ಯ ತುಂಬಿದ್ದಾರೆ. ಬೇಗ ಗುಣಮುಖರಾಗುತ್ತಿರಿ ಎಂದು ಹೇಳುವ ಮೂಲಕ ಪ್ರೇರಣೆ ನೀಡಿದ್ದಾರೆ. ಅವರಿಗೆ ನಮಸ್ಕಾರಗಳು ಎಂದರು.
ಮತ್ತೂಮ್ಮೆ ಸಾಂಸ್ಥಿಕ ಕ್ವಾರಂಟೈನ್ ಮಾಡಿದರು. ಇಲ್ಲಿ ಪುನಃ ಪಾಸಿಟಿವ್ ಬಂದಾಗ ಗಾಬರಿಯಾಗಿತ್ತು. ಆದರೆ ಮೊದಲೇ ಚಿಕಿತ್ಸೆ ಪಡೆದಿದ್ದರಿಂದ ಭಯಪಡಲಿಲ್ಲ.
ಒಮ್ಮೊಮ್ಮೆ ರಾತ್ರಿ ಎಚ್ಚರವಾದಾಗ ಏನೇನೋ ಆಲೋಚನೆ ಬರುತ್ತಿತ್ತು. ಫೋನ್ ಕಿರಿಕಿರಿ ಬೇಡವೆಂದು ಸ್ವಿಚ್ ಆಫ್ ಮಾಡುತ್ತಿದ್ದೆ. ಈಗ ಗುಣಮುಖನಾಗಿದ್ದು ಮನೆಯಲ್ಲಿ ಪ್ರತ್ಯೇಕ ಕೋಣೆಯಲ್ಲಿ ವಾಸಿಸುತ್ತೇನೆ ಎಂದರು.
Related Articles
Advertisement
ಕೋವಿಡ್ ಪಾಸಿಟಿವ್ ಬಂದವರಿಗೆ 7 ಮತ್ತು 12ನೇ ದಿನ ಪರೀಕ್ಷೆ ಮಾಡಿದಾಗ ನೆಗೆಟಿವ್ ವರದಿ ಬಂದಿದೆ. 12ನೇ ದಿನ 24 ಗಂಟೆ ಅವ ಧಿಯಲ್ಲಿ ಎರಡು ಸಲಪರೀಕ್ಷೆ ನಡೆಸಿದ್ದು, ನಾಲ್ಕು ಜನರ ವರದಿ ನೆಗೆಟಿವ್ ಬಂದಿದೆ. ಈಗ ಮನೆಯಲ್ಲಿ ಮತ್ತೆ 14 ದಿನಗಳ ಕಾಲ ಕ್ವಾರಂಟೈನ್ ಇರಲು ಸೂಚಿಸಿದ್ದೇವೆ.
ಡಾ| ಪಾಲಾಕ್ಷ, ಡಿಎಚ್‌ಒ