ಸಾಗರ: ತಾಲೂಕಿನ ತಾಳಗುಪ್ಪ ಸಮೀಪದ ತಲವಾಟದಲ್ಲಿನ ಅಡಕೆ ಕಳ್ಳತನ ಪ್ರಕರಣದ ತನಿಖೆ ನಡೆಸಿ, ನಾಲ್ವರು ಆರೋಪಿಗಳನ್ನು ವಶಕ್ಕೆ ಪಡೆದು, ಒಟ್ಟು ನಾಲ್ಕು ಅಡಕೆ ಮಾಲು ಕಳ್ಳತನ ಪ್ರಕರಣ ಬೇಧಿಸಿದ್ದಾರೆ.
ತಲವಾಟ ಗ್ರಾಮದ ವ್ಯಕ್ತಿಯೊಬ್ಬರು ಮನೆಯ ಹತ್ತಿರ ಖಾಲಿ ಜಾಗದಲ್ಲಿ ಅಡಕೆಯನ್ನು ಒಣಗಿಹಾಕಿದ್ದು, ಫೆ. 2ರ ರಾತ್ರಿ ಸುಮಾರು 21 ಕ್ವಿಂಟಾಲ್ ತೂಕದ ಅಡಕೆ ಕಳ್ಳತನವಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಆರೋಪಿ ಭಟ್ಕಳದ ಉಸ್ಮಾನ್ ನಗರದ ಫೈರೋಜ್ ಖಾನ್ ಎಂಬಾತನನ್ನು ಮಾ. 4ರಂದು ವಶಕ್ಕೆ ಪಡೆದುಕೊಂಡು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು.
ಬುಧವಾರ ಪ್ರಕರಣದ ಉಳಿದ ಮೂವರು ಆರೋಪಿಗಳನ್ನು ಗ್ರಾಮಾಂತರ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಭಟ್ಕಳದ ನಿವಾಸಿಗಳಾದ ಉಸ್ಮಾನ್ ನಗರದ ಹಬೀಬ್ ಖಾನ್ ಅಪ್ಪು, ದೇವಿನಗರದ ಮಹಮ್ಮದ್ ಮರ್ದಾನ್ ಹಾಗೂ ತಗ್ಗರ್ ಗೋಡ್‌ನ ರುಮಾನ್ ಎಂಬ ಆರೋಪಿಗಳನ್ನು ಬಂಧಿಸಲಾಗಿದೆ.
ಇದನ್ನೂ ಓದಿ:ಪೆಟ್ರೋಲ್ ಬಂಕ್ ಬಳಿ ನಿಂತಿದ್ದ ಲಾರಿಗೆ ಬೆಂಕಿ: ತಪ್ಪಿದ ಭಾರಿ ದುರಂತ
ಅಂದಾಜು ಮೌಲ್ಯ 4.70 ಲಕ್ಷ ರೂ. ಮೌಲ್ಯದ ಒಟ್ಟು 23 ಕ್ವಿಂಟಾಲ್ ಸಿಪ್ಪೆಗೋಟು ಅಡಕೆ ಮತ್ತು ಕೃತ್ಯಕ್ಕೆ ಬಳಸಿದ 1 ಬುಲೆರೋ ಪಿಕಪ್ ವಾಹನವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.