Advertisement

ಈ ವಾರ ತೆರೆ ಕಾಣಲಿದೆ ನಾಲ್ಕು ಚಿತ್ರಗಳು

09:39 AM Oct 08, 2021 | Team Udayavani |

ನಿನ್ನ ಸನಿಹಕೆ: ಸೂರಜ್‌ ಗೌಡ ನಾಯಕನಾಗಿರುವ ಮತ್ತು ಚೊಚ್ಚಲ ನಿರ್ದೇಶನದ “ನಿನ್ನ ಸನಿಹಕೆ…’ ಚಿತ್ರ ಈ ವಾರ ರಾಜ್ಯಾದ್ಯಂತ ಸುಮಾರು ನೂರಕ್ಕೂ ಹೆಚ್ಚಿನ ಕೇಂದ್ರಗಳಲ್ಲಿ ಬಿಡುಗಡೆಯಾಗುತ್ತಿದೆ.

Advertisement

ಇದು ಆಕಾಶವಾಣಿ ಬೆಂಗಳೂರು ನಿಲಯ: “ಕಮಲಾನಂದ ಚಿತ್ರಾಲಯ’ ಬ್ಯಾನರ್‌ ಅಡಿಯಲ್ಲಿ ಶಿವಾನಂದಪ್ಪ ಬಳ್ಳಾರಿ ನಿರ್ಮಿಸಿರುವ “ಇದು ಆಕಾಶವಾಣಿ ಬೆಂಗಳೂರು ನಿಲಯ’ ಚಿತ್ರ ಈ ವಾರ ತೆರೆ ಕಾಣುತ್ತಿದೆ. ಹಾರರ್‌ – ಥ್ರಿಲ್ಲರ್‌ ಕಥಾಹಂದರ ಹೊಂದಿರುವ “ಆಕಾಶವಾಣಿ ಬೆಂಗಳೂರು ನಿಲಯ’ ಚಿತ್ರಕ್ಕೆ ವಿಜಯ ಕುಮಾರ್‌ ಕಥೆ, ಚಿತ್ರಕಥೆ, ಸಂಭಾಷಣೆಗಳನ್ನು ಬರೆದಿದ್ದು, ಎಂ. ಹರಿಕೃಷ್ಣ ನಿರ್ದೇಶನವಿದೆ. ಎ ಟಿ. ರವೀಶ್‌ ಸಂಗೀತ, ನಿಖೀತಾ ಸ್ವಾಮಿ, ರಣಬೀರ್‌ ಪಾಟೀಲ್, ಸುಚೇಂದ್ರ ಪ್ರಸಾದ್‌, ಟೆನ್ನಿಸ್‌ ಕೃಷ್ಣ, ಎಸ್‌. ನಾರಾಯಣಸ್ವಾಮಿ, ದಿವ್ಯಾಶ್ರೀ ಮುಂತಾದವರು ಅಭಿನಯಿಸಿದ್ದಾರೆ.

ತಿರುಗ್ಸೋ ಮೀಸೆ: “ಶ್ರೀ ಶ್ರೀನಿವಾಸ ಮೂವೀಸ್‌’ ಬ್ಯಾನರ್‌ನಲ್ಲಿ ನಿರ್ಮಾವಾಗಿರುವ “ತಿರುಗ್ಸೋ ಮೀಸೆ’ ಚಿತ್ರ ಈ ವಾರ ರಾಜ್ಯಾದ್ಯಂತ ಸುಮಾರು ಮೂವತ್ತಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ.

ಬಾಬು ಮಾರ್ಲಿ: ಕ್ರೀಡಾ ಪ್ರಧಾನ ಕಥಾಹಂದರ ಹೊಂದಿರುವ “ಬಾಬು ಮಾರ್ಲಿ’ ಚಿತ್ರ ಈ ವಾರ ತೆರೆಗೆ ಬರುತ್ತಿದೆ. ಅವಿನಾಶ್‌ ಸಂಪತ್‌, ಮೀನಾಕ್ಷಿ ದೀಕ್ಷಿತ್‌. ತ್ರಿವೇಣಿ (ಟಗರು ಸರೋಜ), ಸಾರಿಕ, ಕಿಲ್ಲರ್‌ ವೆಂಕಟೇಶ್‌, ಅಶೋಕ್‌, ಶಿಲ್ಪಾ, ಪೂಜಾ ಮುಂತಾದವರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

More
Next