Advertisement
ಇದನ್ನೂ ಓದಿ:ಆಸ್ಕರ್ ಬಳಿಕ ಮತ್ತೊಂದು ಪ್ರತಿಷ್ಠಿತ ಪ್ರಶಸ್ತಿಗೆ ನಾಮಿನೇಟ್ ಆಯಿತು ʼRRR’
Related Articles
Advertisement
ಕರುಳಿನ ಚಲನೆಗೆ ಸಹಕಾರಿ: ಬೆಕ್ಕುಗಳು ಚರ್ಮ, ಸಣ್ಣ ಗರಿಗಳು, ಮೂಳೆ ಹಾಗೂ ಇತರ ವಸ್ತುಗಳನ್ನು ತಿನ್ನುತ್ತಿರುತ್ತವೆ, ಈ ವಸ್ತುಗಳು ಕೆಲವೊಮ್ಮೆ ಬೆಕ್ಕಿನ ಜೀರ್ಣಾಂಗದಲ್ಲಿ ಸಿಲುಕಿಕೊಳ್ಳುವ ಸಾಧ್ಯತೆ ಇದೆ. ಈ ಕಾರಣದಿಂದಾಗಿ ಕರುಳಿನ ಚಲನೆಗೆ ಅಡ್ಡಿಯುಂಟಾಗುತ್ತದೆ. ಆಗ ಬೆಕ್ಕಿಗೆ ಹೊಟ್ಟೆ ನೋವು ಬಂದಾಗ ಬೆಕ್ಕುಗಳು ತೆಳುವಾದ ಹುಲ್ಲನ್ನು ತಿನ್ನುವ ಮೂಲಕ ಹೊಟ್ಟೆ ನೋವನ್ನು ಶಮನಮಾಡಿಕೊಳ್ಳುತ್ತವೆ, ಅಗಲವಾದ ಹುಲ್ಲುಗಳು ಬೆಕ್ಕಿನ ಕರುಳಿನ ಚಲನೆಗೆ ಇನ್ನಷ್ಟು ಸಹಾಯಕವಾಗಲಿದೆ ಎಂದು ವರದಿ ವಿವರಿಸಿದೆ.
ಖುಷಿಯೂ ಹೌದು: ಬೆಕ್ಕುಗಳು ಸಾಂದರ್ಭಿಕವಾಗಿ ಹುಲ್ಲು ತಿನ್ನುವುದು ಅವುಗಳಿಗೆ ಖುಷಿಯ ವಿಚಾರವೂ ಹೌದಂತೆ. ಕೆಲವೊಮ್ಮೆ ಪಥ್ಯಕ್ಕಾಗಿ ಹುಲ್ಲನ್ನು ತಿನ್ನುತ್ತವೆ. ಒಂದು ವೇಳೆ ಅವುಗಳು ದೈನಂದಿನ ಆಹಾರವನ್ನು ತಿನ್ನುತ್ತಿವೆಯೋ ಅಥವಾ ಇಲ್ಲವೇ ಎಂಬುದನ್ನು ಗಮನಿಸಿ. ಇದರ ಜೊತೆಗೆ ನೀವು ಬೆಕ್ಕುಗಳಿಗೆ ನಾರಿನಾಂಶ ಇರುವ ಆಹಾರವನ್ನು ಹೆಚ್ಚು ನೀಡುವುದು ಕೂಡಾ ನಿಮಗಿರುವ ಮತ್ತೊಂದು ಆಯ್ಕೆಯಾಗಿದೆ.
ಹೊಟ್ಟೆ ನೋವು ನಿವಾರಣೆ: ಬೆಕ್ಕುಗಳು ಹುಲ್ಲನ್ನು ಸಮರ್ಪಕವಾಗಿ ಜೀರ್ಣಿಸಿಕೊಳ್ಳುವ ಕಿಣ್ವಗಳನ್ನು ಹೊಂದಿರುವುದಿಲ್ಲ. ಹಾಗಾಗಿ ಬೆಕ್ಕುಗಳು ಉದ್ದೇಶಪೂರ್ವಕವಾಗಿ ಹುಲ್ಲನ್ನು ತಿನ್ನುತ್ತವೆ, ನಂತರ ಅದನ್ನು ವಾಂತಿ ಮಾಡಿ ಹೊರಹಾಕುತ್ತವೆ. ಬೆಕ್ಕುಗಳು ತಮ್ಮ ಜೀರ್ಣಾಂಗದಲ್ಲಿ ತೊಂದರೆ ಕೊಡುವ ಮೂಳೆ, ಚರ್ಮ ಹಾಗೂ ಇತರ ವಸ್ತುಗಳನ್ನು ವಾಂತಿ ಮಾಡಿ ಹೊರಹಾಕುವುದನ್ನು ಗಮನಿಸಿರುತ್ತೀರಿ. ಬೆಕ್ಕುಗಳು ಎಷ್ಟು ಪ್ರಮಾಣದ ಹುಲ್ಲನ್ನು ತಿನ್ನಬೇಕೆಂಬುದನ್ನು ಅವುಗಳೇ ನಿಯಂತ್ರಿಸಿಕೊಳ್ಳುತ್ತವೆ. ಇದರ ಜೊತೆಗೆ ಕೀಟನಾಶಕ ಅಥವಾ ರಾಸಾಯನಿಕ ಲೇಪಿತ ಹುಲ್ಲುಗಳಿಂದ ನಿಮ್ಮ ಬೆಕ್ಕುಗಳನ್ನು ದೂರ ಇರಿಸಲು ಮುಂಜಾಗ್ರತಾ ಕ್ರಮ ವಹಿಸಿದರೆ ಉತ್ತಮ.