Advertisement

ರಶೀದ್‌ ಖಾನ್‌ಗೆ ಸವಾಲಾದ ನಾಲ್ವರು ಆಟಗಾರರು

09:44 PM Jun 14, 2020 | Sriram |

ಕಾಬೂಲ್‌: ಅಫ್ಘಾನಿಸ್ಥಾನದ ಲೆಗ್‌ಸ್ಪಿನ್ನರ್‌ ರಶೀದ್‌ ಖಾನ್‌ ಸಣ್ಣ ವಯಸ್ಸಿನಲ್ಲೇ ವಿಶ್ವ ಮಟ್ಟದ ಖ್ಯಾತಿ ಪಡೆದ ಬೌಲರ್‌. ಐಪಿಎಲ್‌ ಸಹಿತ ಬಹುತೇಕ ಲೀಗ್‌ ಪಂದ್ಯಗಳಲ್ಲಿ ಧಾರಾಳ ಯಶಸ್ಸು ಕಂಡ ಹೆಗ್ಗಳಿಕೆ ಇವರದು.

Advertisement

ಐಪಿಎಲ್‌ನಲ್ಲಿ ರಶೀದ್‌ ಖಾನ್‌ ಸನ್‌ರೈಸರ್ ಹೈದರಾಬಾದ್‌ ತಂಡದ ಪ್ರಧಾನ ಅಸ್ತ್ರ. 46 ಪಂದ್ಯಗಳಿಂದ, 6.55ರಷ್ಟು ಇಕಾನಮಿ ರೇಟ್‌ನಲ್ಲಿ 55 ವಿಕೆಟ್‌ ಉರುಳಿಸಿದ ಸಾಧನೆ ಇವರದ್ದಾಗಿದೆ. ಆದರೂ ಕೆಲವು ಬ್ಯಾಟ್ಸ್‌ಮನ್‌ಗಳಿಗೆ ಬೌಲಿಂಗ್‌ ಮಾಡುವುದು, ಇವರನ್ನು ನಿಯಂತ್ರಿ ಸುವುದು ಬಹಳ ಕಷ್ಟ ಎಂಬುದಾಗಿ ಹೇಳುತ್ತಾರೆ.

ತನಗೆ ಸವಾಲಾಗಿ ಕಾಡಿದ ನಾಲ್ವರು ಬ್ಯಾಟ್ಸ್‌ಮನ್‌ಗಳ ಕುರಿತು ರಶೀದ್‌ ಹೇಳಿದ್ದು, ಇದರಲ್ಲಿ ಟೀಮ್‌ ಇಂಡಿಯಾ ನಾಯಕ ವಿರಾಟ್‌ ಕೊಹ್ಲಿ ಕೂಡ ಸೇರಿದ್ದಾರೆ. ಉಳಿದ ಮೂವರೆಂದರೆ ಎಬಿ ಡಿ ವಿಲಿಯರ್, ಕ್ರಿಸ್‌ ಗೇಲ್‌ ಮತ್ತು ಆ್ಯಂಡ್ರೆ ರಸೆಲ್‌. ಇವರಿಗೆ ಕಡಿವಾಣ ಹಾಕುವುದು, ಅದರಲ್ಲೂ ಸಣ್ಣ ಅಂಗಳಗಳಲ್ಲಿ ಇವರನ್ನು ನಿಯಂತ್ರಿಸುವುದು ಬಹಳ ಕಷ್ಟ ಎಂಬುದಾಗಿ ರಶೀದ್‌ ಖಾನ್‌ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next